ಕರ್ನಾಟಕ

karnataka

ETV Bharat / technology

ಹೆಡ್-ಟ್ರ್ಯಾಕಿಂಗ್ 3D ಆಡಿಯೊ 'ನಿರ್ವಾಣ ಯುಟೋಪಿಯಾ' ಹೆಡ್​ಫೋನ್​ ಬಿಡುಗಡೆ ಮಾಡಿದ ಬೋಟ್​ - boAt headphones - BOAT HEADPHONES

ಬೋಟ್​ ಭಾರತದಲ್ಲಿ ತಯಾರಿಸಲಾದ ಹೆಡ್-ಟ್ರ್ಯಾಕಿಂಗ್ 3ಡಿ ಆಡಿಯೋ ಮತ್ತು ಸ್ಪ್ಯಾಟಿಯಲ್ ಧ್ವನಿ ಫೀಚರ್ ಒಳಗೊಂಡ ಹೆಡ್​ಫೋನ್​ ಅನ್ನು ಬಿಡುಗಡೆ ಮಾಡಿದೆ.

boAt
boAt

By ETV Bharat Karnataka Team

Published : Apr 1, 2024, 12:27 PM IST

ನವದೆಹಲಿ : ಭಾರತದ ದೇಶೀಯ ಆಡಿಯೊ ಮತ್ತು ಧರಿಸಬಹುದಾದ ಸಾಧನಗಳನ್ನು ತಯಾರಿಸುವ ಕಂಪನಿ ಬೋಟ್ (boAt) ಸೋಮವಾರ ಹೆಡ್-ಟ್ರ್ಯಾಕಿಂಗ್ 3ಡಿ ಆಡಿಯೋ ಮತ್ತು ಸ್ಪ್ಯಾಟಿಯಲ್ ಧ್ವನಿ (spatial sound) ವೈಶಿಷ್ಟ್ಯಗಳನ್ನು ಹೊಂದಿರುವ ಭಾರತದ ಮೊದಲ ಹೆಡ್ ಫೋನ್​ಗಳನ್ನು ಬಿಡುಗಡೆ ಮಾಡಿದೆ.

ಸ್ಪ್ಯಾಟಿಯಲ್ ಆಡಿಯೊ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮತ್ತು ಅತ್ಯಾಧುನಿಕ 3 ಡಿ ಅಕ್ಸೆಲೆರೋಮೀಟರ್​ಗಳು ಮತ್ತು ಗೈರೋಸ್ಕೋಪ್​ಗಳನ್ನು ಸಂಯೋಜಿಸುವ ಮೂಲಕ, ಬೋಟ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ 'ಡಿಸೈನ್ ಇನ್ ಇಂಡಿಯಾ' 'ನಿರ್ವಾಣ ಯುಟೋಪಿಯಾ' ಹೆಡ್ ಫೋನ್​ಗಳನ್ನು ಬಿಡುಗಡೆ ಮಾಡಿದೆ. ಇವುಗಳ ಬೆಲೆ 3,999 ರೂ.ಗಳಿಂದ ಆರಂಭವಾಗಲಿದೆ.

"ನೀವು ನಿಮ್ಮ ತಲೆಯನ್ನು ಅಲ್ಲಾಡಿಸುತ್ತಿದ್ದಂತೆಯೇ ಅದೇ ದಿಕ್ಕಿನಲ್ಲಿ ಆಡಿಯೊ ಕ್ರಿಯಾತ್ಮಕವಾಗಿ ಹೊಂದಿಕೊಳ್ಳುತ್ತದೆ, ಧ್ವನಿ ಮೂಲದ ದಿಕ್ಕು ಮತ್ತು ಜೋಡಣೆಯನ್ನು ಸಂರಕ್ಷಿಸುತ್ತದೆ ಮತ್ತು ಚಿತ್ರಿಸಿದ ದೃಶ್ಯದೊಳಗೆ ಸಂಪೂರ್ಣವಾಗಿ ಮುಳುಗಿರುವ ಭಾವನೆಯನ್ನು ನಿಮಗೆ ಮೂಡಿಸುತ್ತದೆ" ಎಂದು ಕಂಪನಿ ಹೇಳಿದೆ.

ಈ ಬೋಟ್ ಹೆಡ್​ ಫೋನ್​ಗಳಲ್ಲಿ 3ಡಿ ಸ್ಪ್ಯಾಟಿಯಲ್ ಸೌಂಡ್​ಗಾಗಿ ಮಾಪನಾಂಕಿತ 40 ಎಂಎಂ ಡೈನಾಮಿಕ್ ಡ್ರೈವರ್​ಗಳನ್ನು ಅಳವಡಿಸಲಾಗಿದೆ. ಈ ಸಾಧನವು 20 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ (ಹೆಡ್-ಟ್ರ್ಯಾಕ್ ಸ್ಪ್ಯಾಟಿಯಲ್ ಮೋಡ್​ನಲ್ಲಿ 15 ಗಂಟೆಗಳು).

"ಎಎಸ್ಎಪಿ ಚಾರ್ಜ್ ಮತ್ತು ಟೈಪ್- ಸಿ ಪೋರ್ಟ್​ ಹೊಂದಿರುವ ಈ ಹೆಡ್​ಫೋನ್​ ಅನ್ನು ಕೇವಲ 10 ನಿಮಿಷಗಳಲ್ಲಿ ತ್ವರಿತವಾಗಿ ಚಾರ್ಜ್ ಮಾಡಬಹುದು ಮತ್ತು ಇಷ್ಟು ಚಾರ್ಜ್​ನಿಂದ 90 ನಿಮಿಷಗಳ ಕಾಲ ಸಂಗೀತ ಕೇಳಬಹುದು. ನೀವು ಮನೆಯಲ್ಲಿರಲಿ, ಪ್ರಯಾಣಿಸುತ್ತಿರಲಿ ಅಥವಾ ದೀರ್ಘ ಪ್ರಯಾಣದಲ್ಲಿ ಇರಲಿ ಬೋಟ್​ ಸದಾ ನಿಮ್ಮೊಂದಿಗೆ ಇರುತ್ತದೆ" ಎಂದು ಕಂಪನಿ ಹೇಳಿದೆ.

ಬೋಟ್ 'ನಿರ್ವಾಣ ಯುಟೋಪಿಯಾ' ಅನ್ನು ಬ್ಲೂಟೂತ್ ವಿ 5.2 ತಂತ್ರಜ್ಞಾನವನ್ನು ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಗಿದೆ. ಅತ್ಯಂತ ತ್ವರಿತವಾಗಿ ಕನೆಕ್ಟ್​ ಆಗುವ ಬ್ಲೂ ಟೂತ್, ಅಡೆತಡೆಯಿಲ್ಲದ ಆಡಿಯೊ ಆಲಿಸುವಿಕೆ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಪರ್ಕದ ಅನುಭವಗಳನ್ನು ಇದು ನೀಡುತ್ತದೆ.

ಸಮೀರ್ ಮೆಹ್ತಾ ಮತ್ತು ಅಮನ್ ಗುಪ್ತಾ ಅವರು 2016 ರಲ್ಲಿ ಸ್ಥಾಪಿಸಿದ ಬೋಟ್ ಕಂಪನಿಯು ಇಯರ್ ಫೋನ್​ಗಳು, ಹೆಡ್ ಫೋನ್​ಗಳು, ಸ್ಪೀಕರ್​ಗಳು, ಸ್ಮಾರ್ಟ್ ವಾಚ್​ಗಳು, ಕೇಬಲ್​ಗಳು ಮತ್ತು ಚಾರ್ಜರ್ ಗಳಂತಹ ಆಡಿಯೊ ಉತ್ಪನ್ನಗಳು ಮತ್ತು ಪರಿಕರಗಳ ಶ್ರೇಣಿಯನ್ನು ತಯಾರಿಸಿ ಮಾರಾಟ ಮಾಡುತ್ತದೆ.

ಇದನ್ನೂ ಓದಿ : ನಾಲ್ಕರಲ್ಲಿ ಓರ್ವ ಯೂಟ್ಯೂಬರ್ ಆದಾಯ ಗಳಿಸುತ್ತಿರುವುದು Shorts​ನಿಂದ

ABOUT THE AUTHOR

...view details