ಮುಂಬೈ: ಏಷ್ಯಾದ ಅತಿದೊಡ್ಡ ಇಮೇಜಿಂಗ್ ಚೆರೆಂಕೋವ್ ದೂರದರ್ಶಕವಾದ ಮೇಜರ್ ಅಟ್ಮಾಸ್ಫಿಯರಿಕ್ ಚೆರೆಂಕೋವ್ ಎಕ್ಸ್‌ಪರಿಮೆಂಟ್ (MACE) ದೂರದರ್ಶಕವನ್ನು ಲಡಾಖ್‌ನ ಹಾನ್ಲೆಯಲ್ಲಿ ಉದ್ಘಾಟಿಸಲಾಯಿತು. ಅ. 4ರಂದು ಅಣುಶಕ್ತಿ ಇಲಾಖೆ (ಡಿಎಇ) ಕಾರ್ಯದರ್ಶಿ ಹಾಗೂ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಡಾ. ಅಜಿತ್ ಕುಮಾರ್ ಮೊಹಾಂತಿ ಅವರು ಇದನ್ನು ಉದ್ಘಾಟಿಸಿದ್ದು, ಈ ಮೂಲಕ ವೈಜ್ಞಾನಿಕ ಸಂಶೋಧನೆಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ.
4,300 ಮೀಟರ್ ಎತ್ತರದಲ್ಲಿ ಸ್ಥಾಪಿಸಲಾಗಿರುವ ಇದು ವಿಶ್ವದಲ್ಲೇ ಅತಿ ಹೆಚ್ಚು ಎತ್ತರದಲ್ಲಿರುವ ದೂರದರ್ಶಕವಾಗಿದೆ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಮತ್ತು ಇತರ ಭಾರತೀಯ ಉದ್ಯಮ ಪಾಲುದಾರರ ಬೆಂಬಲದೊಂದಿಗೆ ಮುಂಬೈ ಮೂಲದ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (BARC) ಈ ದೂರದರ್ಶಕವನ್ನು ಸ್ಥಳೀಯವಾಗಿ ನಿರ್ಮಿಸಿದೆ. MACE ವೀಕ್ಷಣಾಲಯ ಉದ್ಘಾಟನೆ ಅಣುಶಕ್ತಿ ಇಲಾಖೆಯ (DAE) 70ನೇ ವರ್ಷಾಚರಣೆಯ ಒಂದು ಭಾಗವಾಗಿದೆ.