Galaxy S25 Series Pre Orders Achieves : ಭಾರತದಲ್ಲಿ ಶುಕ್ರವಾರದಿಂದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಮಾರಾಟ ಪ್ರಾರಂಭವಾಗಿದೆ. ಕಂಪನಿಯು ಜನವರಿ 22 ರಂದು ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸೀರಿಸ್ ಅನ್ನು ಬಿಡುಗಡೆ ಮಾಡಿತು. ಈ ಸೀರಿಸ್ನಲ್ಲಿ ಗ್ಯಾಲಕ್ಸಿ ಎಸ್25, ಗ್ಯಾಲಕ್ಸಿ ಎಸ್25 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್25 ಅಲ್ಟ್ರಾ ಮಾಡೆಲ್ಗಳನ್ನು ಪ್ರಪಂಚಕ್ಕೆ ಪರಿಚಯಿಸಿತು.
ಈ ಮೂರು ಫೋನ್‌ಗಳನ್ನು ಶುಕ್ರವಾರದಿಂದ ಭಾರತದಲ್ಲಿ ಖರೀದಿಸಬಹುದು. ಈ ಫೋನ್ ಸೀರಿಸ್ನ ಪ್ರೀ-ಬುಕಿಂಗ್ ಆರಂಭವಾಗಿದ್ದು, ಭಾರತದಲ್ಲಿ ಮುಂಗಡ ಬುಕಿಂಗ್ ವಿಷಯದಲ್ಲಿ ಹೊಸ ದಾಖಲೆ ಬರೆದಿದೆ. ಈ ಫೋನ್‌ಗಳ ಬೆಲೆ ಎಷ್ಟು ಮತ್ತು ಕಂಪನಿಯು ಅವುಗಳನ್ನು ಖರೀದಿಸಿಸುವಾಗ ಯಾವ ಕೊಡುಗೆಗಳನ್ನು ನೀಡುತ್ತಿದೆ ಎಂಬ ಇತ್ಯಾದಿ ವಿವರಗಳು ಇಲ್ಲಿವೆ.
ಕಳೆದ ಶುಕ್ರವಾರ ಭಾರತದಲ್ಲಿ ತಯಾರಾದ ಗ್ಯಾಲಕ್ಸಿ ಎಸ್25 ಸೀರಿಸ್ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ 4,30,000 ಪೀ-ಆರ್ಡರ್‌ಗಳನ್ನು ಸ್ವೀಕರಿಸಿವೆ ಎಂದು ಸ್ಯಾಮ್‌ಸಂಗ್ ಮಾಹಿತಿ ನೀಡಿದೆ. ಇದು ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 ಸೀರಿಸ್ನ ಮುಂಗಡ ಬುಕಿಂಗ್‌ಗಿಂತ ಶೇ. 20 ರಷ್ಟು ಹೆಚ್ಚಾಗಿದೆ. ಸ್ಯಾಮ್‌ಸಂಗ್ ತನ್ನ ನೋಯ್ಡಾ ಮೂಲದ ಕಾರ್ಖಾನೆಯಲ್ಲಿ ಗ್ಯಾಲಕ್ಸಿ ಎಸ್25 ಸೀರಿಸ್ ತಯಾರಿಸುತ್ತಿರುವುದು ಗೊತ್ತಿರುವ ವಿಷಯ.
ಈ ಬಗ್ಗೆ ಮಾತನಾಡಿದ ಸ್ಯಾಮ್‌ಸಂಗ್ ಇಂಡಿಯಾದ ಎಮ್ಎಸ್ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್, ಗ್ಯಾಲಕ್ಸಿ ಎಸ್25 ಅಲ್ಟ್ರಾ, ಗ್ಯಾಲಕ್ಸಿ ಎಸ್25+ ಮತ್ತು ಗ್ಯಾಲಕ್ಸಿ ಎಸ್25 ಮಾಡೆಲ್ಗಳು ಸ್ಯಾಮ್‌ಸಂಗ್‌ನ ಅದ್ಭುತ AI ಅನುಭವದೊಂದಿಗೆ ಹೊಸ ಮಾನದಂಡವನ್ನು ಸ್ಥಾಪಿಸಿವೆ. ಇದನ್ನು ಹಿಂದೆಂದೂ ರಚಿಸಲಾಗಿಲ್ಲ ಎಂದು ಹೇಳಿದರು.
ಯುವಕರಿಗೆ ಇಷ್ಟವಾದ ಗ್ಯಾಲಕ್ಸಿ ಎಐ : ಗ್ಯಾಲಕ್ಸಿ ಎಐ ಬಳಸುವಲ್ಲಿ ಮುಂಚೂಣಿಯಲ್ಲಿರುವ ಯುವ ತಂತ್ರಜ್ಞಾನ ಉತ್ಸಾಹಿಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಸೀರಿಸ್ಗೆ ಹೆಚ್ಚಿನ ಬೇಡಿಕೆ ಇರುವುದನ್ನು ನಾವು ನೋಡಿದ್ದೇವೆ. ಭಾರತದಲ್ಲಿ ಗ್ಯಾಲಕ್ಸಿ ಎಸ್25 ಗ್ರಾಹಕರಿಗೆ ಗೂಗಲ್‌ನ ಜೆಮಿನಿ ಲೈವ್ ಆರಂಭದಿಂದಲೇ ಹಿಂದಿಯಲ್ಲಿ ಲಭ್ಯವಿರುತ್ತದೆ. ಇದು ಸ್ಯಾಮ್‌ಸಂಗ್‌ಗೆ ಭಾರತ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ ಅಂತಾ ಪುಲ್ಲನ್ ಹೇಳಿದರು.
ಭಾರತದಲ್ಲಿ ಸ್ಯಾಮ್‌ಸಂಗ್‌ನ ಈ ಹೊಸ ಪ್ರಮುಖ ಫೋನ್‌ಗಳ ಮೊದಲ ಮಾರಾಟವು ಫೆಬ್ರವರಿ 7 ರಿಂದ ಪ್ರಾರಂಭವಾಗಿದೆ. ಕಂಪನಿಯು ಇದನ್ನು ಅಮೆಜಾನ್ ಮತ್ತು ಸ್ಯಾಮ್‌ಸಂಗ್‌ನ ವೆಬ್‌ಸೈಟ್ ಸೇರಿದಂತೆ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಿದೆ.
ಈ ವರ್ಷ ನಾವು ದೇಶಾದ್ಯಂತ 17 ಸಾವಿರ ಮಳಿಗೆಗಳಲ್ಲಿ ನಮ್ಮ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತೇವೆ. ಇದರಿಂದಾಗಿ ನಾವು ಸಣ್ಣ ಪಟ್ಟಣಗಳ ಬೇಡಿಕೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಎಂದು ರಾಜು ಪುಲ್ಲನ್ ಹೇಳಿದರು.
ಫೋನ್‌ಗಳ ಬೆಲೆ ಎಷ್ಟು ? ಭಾರತದಲ್ಲಿ ಗ್ಯಾಲಕ್ಸಿ ಎಸ್25 ಮೂಲ ರೂಪಾಂತರ (12GB+256GB) ಬೆಲೆ 80,999 ರೂ., ಇದರ 12GB + 512GB ಆವೃತ್ತಿಗೆ ನೀವು 92,999 ರೂ. ಪಾವತಿಸಬೇಕಾಗುತ್ತದೆ. ಗ್ಯಾಲಕ್ಸಿ ಎಸ್25+ ಬಗ್ಗೆ ಹೇಳುವುದಾದರೆ, ಇದರ 12GB + 256GB ರೂಪಾಂತರದ ಬೆಲೆ 99,999 ರೂ. ಆಗಿದ್ದು, ಇದರ 512GB ರೂಪಾಂತರದ ಬೆಲೆ 1,11,999 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಗ್ಯಾಲಕ್ಸಿ ಎಸ್25 ಅಲ್ಟ್ರಾ ಅತ್ಯಂತ ದುಬಾರಿ : ಗ್ಯಾಲಕ್ಸಿ ಎಸ್25 ಅಲ್ಟ್ರಾ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ ಸೀರಿಸ್ನಲ್ಲಿ ಅತ್ಯಂತ ದುಬಾರಿ ಮಾದರಿಯಾಗಿದೆ. ಇದರ ಆರಂಭಿಕ ಬೆಲೆ 1,29,999 ರೂ.ಗಳು. ಇದರ 512GB ರೂಪಾಂತರ ಬೆಲೆ 1,41,999 ರೂ. ಪಾವತಿಸಬೇಕಾಗುತ್ತದೆ. ನೀವು ಹೆಚ್ಚಿನ ಸ್ಟೋರೇಜ್ ಹೊಂದಿರುವ ಅಲ್ಟ್ರಾ ಮಾದರಿಯನ್ನು ಬಯಸಿದರೆ.. ಅಂದ್ರೆ ಅದರ 1TB ರೂಪಾಂತರಕ್ಕೆ ನೀವು 1,65,999 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಸ್ಯಾಮ್‌ಸಂಗ್‌ನ ಆನ್‌ಲೈನ್ ಅಂಗಡಿಯಿಂದ ಖರೀದಿಸುವವರು ಹಲವಾರು ಕಲರ್ ಆಪ್ಷನ್ಗಳನ್ನು ಪಡೆಯುತ್ತಾರೆ.
ಫೋನ್ ಜೊತೆ ಆಫರ್ಗಳೇನು ? ಈ ಸೀರಿಸ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ಹಲವಾರು ಕೊಡುಗೆಗಳನ್ನು ಘೋಷಿಸಿದೆ. ಯಾರಾದರೂ ತಮ್ಮ ಹಳೆಯ ಫೋನ್ ಅನ್ನು Galaxy S25 ಸೀರಿಸ್ಗೆ ವಿನಿಮಯ ಮಾಡಿಕೊಂಡರೆ ಅವರಿಗೆ 9 ಸಾವಿರ ರೂ.ಗಳ ವಿನಿಮಯ ಬೋನಸ್ ನೀಡಲಾಗುತ್ತಿದೆ.
ಇನ್ನು HDFC ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ನಡೆಸಿದರೆ ಅವರಿಗೆ 9 ಸಾವಿರ ರೂ.ವರೆಗೆ ಹೆಚ್ಚುವರಿ ವಿನಿಮಯ ಮೌಲ್ಯ ಸಿಗುತ್ತದೆ. HDFC ಕ್ರೆಡಿಟ್ ಕಾರ್ಡ್ ಅನ್ನು ಸಂಪೂರ್ಣವಾಗಿ ಸ್ವೈಪ್ ಮಾಡಿದರೆ 8,000 ರೂ.ಗಳ ತ್ವರಿತ ಡಿಸ್ಕೌಂಟ್ ಸಹ ನೀಡಲಾಗುತ್ತಿದೆ. ಮತ್ತೊಂದೆಡೆ ಬಳಕೆದಾರರು ಈ ಫೋನ್‌ಗಳೊಂದಿಗೆ ಗ್ಯಾಲಕ್ಸಿ ವಾಚ್ 7, ಗ್ಯಾಲಕ್ಸಿ ವಾಚ್ ಅಲ್ಟ್ರಾ ಅಥವಾ ಗ್ಯಾಲಕ್ಸಿ ಬಡ್ಸ್ 3 ಅನ್ನು ಖರೀದಿಸಿದರೆ, ಅವರಿಗೆ 18 ಸಾವಿರ ರೂ.ವರೆಗೆ ರಿಯಾಯಿತಿ ನೀಡಲಾಗುತ್ತದೆ.
ಓದಿ: ನಿತ್ಯ ಮೂರೇ ರೂಪಾಯಿ ವೆಚ್ಚ: ಬಿಎಸ್ಎನ್ಎಲ್ನ ಈ ಕೈಗೆಟುಕುವ ವಾರ್ಷಿಕ ರೀಚಾರ್ಜ್ ಪ್ಲಾನ್ ಬಗ್ಗೆ ಗೊತ್ತೇ?