ETV Bharat / technology

ನಿತ್ಯ ಮೂರೇ ರೂಪಾಯಿ ವೆಚ್ಚ: ಬಿಎಸ್​ಎನ್​ಎಲ್​ನ ಈ ಕೈಗೆಟುಕುವ ವಾರ್ಷಿಕ ರೀಚಾರ್ಜ್​ ಪ್ಲಾನ್​ ಬಗ್ಗೆ ಗೊತ್ತೇ? - BSNL RECHARGE PLAN

BSNL Recharge Plan : ಬಿಎಸ್​ಎನ್​ಎಲ್​ ಅಗ್ಗದ ಬೆಲೆಯಲ್ಲಿ ವಾರ್ಷಿಕ ಯೋಜನೆಯನ್ನು ನೀಡುತ್ತಿದ್ದು, ಇದರಲ್ಲಿ ಬಳಕೆದಾರರು ಸುಮಾರು 3 ರೂ.ಗಳ ದೈನಂದಿನ ವೆಚ್ಚದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ.

BSNL RS 1198 RECHARGE PLAN  AFFORDABLE RECHARGE PLAN  BSNL ANNUAL PLAN  BSNL
ಬಿಎಸ್​ಎನ್​ಎಲ್​ (Photo Credit: IANS)
author img

By ETV Bharat Tech Team

Published : Feb 8, 2025, 3:53 PM IST

BSNL Recharge Plan : ಸರ್ಕಾರಿ ದೂರಸಂಪರ್ಕ ಕಂಪನಿ ಬಿಎಸ್ಎನ್ಎಲ್ ಅಗ್ಗದ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದುಬಾರಿ ರೀಚಾರ್ಜ್ ಯೋಜನೆಗಳು ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಹಾಕುತ್ತಿವೆ. ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್‌ಗಳು ಸಹ ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ದೂರಸಂಪರ್ಕ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಒಂದೊಳ್ಳೆ ಪ್ಲಾನ್​ ನೀಡಿದೆ.

ಈ ರೀಚಾರ್ಜ್​ ಪ್ಲಾನ್​ ಅಡಿಯಲ್ಲಿ ಕಂಪನಿಯು ಒಂದು ವರ್ಷದ ಮಾನ್ಯತೆಯ ಯೋಜನೆಯನ್ನು ನೀಡುತ್ತಿದ್ದು, ಇದರ ದೈನಂದಿನ ವೆಚ್ಚ ಸುಮಾರು 3 ರೂ. ಬೀಳಲಿದೆ. ಇದರಲ್ಲಿ ಇನ್ನೂ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ರೀಚಾರ್ಜ್​ ಪ್ಲಾನ್​ನ ಸಂಪೂರ್ಣ ಇಲ್ಲಿದೆ.

ಬಿಎಸ್ಎನ್ಎಲ್ 1,198 ರೂ. ರೀಚಾರ್ಜ್​ ಪ್ಲಾನ್ ​: ಬಿಎಸ್ಎನ್ಎಲ್​ನ ಈ ರೀಚಾರ್ಜ್​ ಪ್ಲಾನ್​ ವಿಶೇಷವಾಗಿ ದೀರ್ಘಾವಧಿಯ ಮಾನ್ಯತೆಗಾಗಿ ತರಲಾಗಿದೆ. ಇದರಲ್ಲಿ ಕಂಪನಿಯು 365 ದಿನಗಳ ಸಿಂಧುತ್ವ ನೀಡುತ್ತಿದೆ. ಅಂದರೆ ನೀವು ಇಂದು ಈ ರೀಚಾರ್ಜ್ ಮಾಡಿದರೆ 2026ರ ವರೆಗೆ ಮಾನ್ಯತೆಗಾಗಿ ನೀವು ಹೊಸ ರೀಚಾರ್ಜ್ ಮಾಡುವ ಅವಶ್ಯಕತೆಯಿಲ್ಲ.

ಇನ್ನು, ಈ ಪ್ಲಾನ್​ ಎರಡು ಸಿಮ್ ಬಳಸುವವರಿಗೂ ಬಹಳ ಉಪಯುಕ್ತವಾಗಿದೆ. ಈ ಯೋಜನೆಯು ಸಿಮ್ ಅನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಉತ್ತಮವಾಗಿದೆ. ಈ ಯೋಜನೆಯಲ್ಲಿ ವ್ಯಾಲಿಡಿಟಿ ಮಾತ್ರವಲ್ಲದೆ ಇತರ ಹಲವು ಪ್ರಯೋಜನಗಳು ಲಭ್ಯ ಇವೆ.

ಈ ಪ್ಲಾನ್​ನಲ್ಲಿ ಏನೆಲ್ಲಾ ಲಭ್ಯ : ಈ ಪ್ಲಾನ್​ ಅಡಿಯಲ್ಲಿ ಕಂಪನಿಯು ಪ್ರತಿ ತಿಂಗಳು ಕಾಲ್​ ಮಾಡಲು 300 ನಿಮಿಷಗಳನ್ನು ಒಂದು ವರ್ಷದ ಮಾನ್ಯತೆಯೊಂದಿಗೆ ನೀಡುತ್ತಿದೆ. ನೀವು ಪ್ರತಿ ತಿಂಗಳು 300 ನಿಮಿಷಗಳವರೆಗೆ ಉಚಿತ ಕರೆಗಳನ್ನು ಮಾಡಬಹುದು. ಇದರೊಂದಿಗೆ ಪ್ರತಿ ತಿಂಗಳು 3 ಜಿಬಿ ಡೇಟಾ ಮತ್ತು 30 ಎಸ್‌ಎಂಎಸ್‌ಗಳನ್ನು ನೀಡಲಾಗುತ್ತಿದೆ.

ಅಂದರೆ ಈ ಯೋಜನೆಯಲ್ಲಿ ದೀರ್ಘಾವಧಿಯ ಮಾನ್ಯತೆಯ ಜೊತೆಗೆ ಕಾಲ್​ ಮತ್ತು ಡೇಟಾದ ಪ್ರಯೋಜನಗಳನ್ನು ಸಹ ಪಡೆಯಬಹುದು. ಇದು ಕಂಪನಿಯ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆಯಾಗಿದ್ದು, ಒಂದು ವರ್ಷದ ಸಿಂಧುತ್ವದೊಂದಿಗೆ ಬರುತ್ತದೆ.

ಬಿಎಸ್ಎನ್ಎಲ್ 365 ದಿನಗಳ ಮಾನ್ಯತೆಯೊಂದಿಗೆ ಇನ್ನೆರಡು ಯೋಜನೆಗಳನ್ನು ಸಹ ನೀಡುತ್ತದೆ ಮತ್ತು ಅವುಗಳ ಬೆಲೆ ರೂ. 1,999 ಮತ್ತು ರೂ. 2,999. ಈ ಎರಡೂ ಯೋಜನೆಗಳಲ್ಲಿ ಪ್ರಯೋಜನಗಳು ಹೆಚ್ಚಾಗುತ್ತವೆ.

ಓದಿ: ಸರ್ಕಾರಿ ಅಲರ್ಟ್​ ಕಾಲರ್​ ಟ್ಯೂನ್​ನಿಂದ ಸಮಸ್ಯೆಯೇ? ಇದನ್ನು ಹೀಗೆ ತಪ್ಪಿಸಿ

ಓದಿ: ಕೇವಲ 99 ರೂ.ಗೆ ಅನ್​ಲಿಮಿಟೆಡ್​ ಕಾಲಿಂಗ್​ ಪ್ಲಾನ್​ ತಂದ ಬಿಎಸ್​ಎನ್​ಎಲ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.