ನವದೆಹಲಿ: ಟೆಕ್ ದೈತ್ಯ ಆ್ಯಪಲ್ ಇದೀಗ ಕೃತಕ ಬುದ್ಧಿಮತ್ತೆ (ಎಐ) ಸಾಧನ ಪರಿಚಯಿಸಿದ್ದು, ಈ ವಿಚಾರವನ್ನು ಆ್ಯಪಲ್ನ 'ವರ್ಲ್ಡ್ವೈಲ್ಡ್ ಡೆವಲಪರ್ ಕಾನ್ಫರೆನ್ಸ್ 2024'ರಲ್ಲಿ ಸಂಸ್ಥೆ ತಿಳಿಸಿದೆ. ಇದೀಗ ಐಫೋನ್ ಬಳಕೆದಾರರು ತಮ್ಮ ಫೋನ್ ಅಪ್ಡೇಟ್ ಮಾಡುವ ಮೂಲಕ ಈ ಹೊಸ ಪೀಚರ್ ಪಡೆಯಬಹುದಾಗಿದೆ. ಇದಕ್ಕೆ ಆ್ಯಪಲ್ ಇಂಟಲಿಜೆನ್ಸ್ (AI) ಎಂದು ನಾಮಕರಣ ಮಾಡಲಾಗಿದೆ.
ಹೊಸ ಪೀಚರ್ ಅನ್ನು ಐಫೋನ್ 15 ಪ್ರೊ ಮತ್ತು 15 ಪ್ರೊ ಮಾಕ್ಸ್ನಲ್ಲಿ ಬಳಕೆ ಮಾಡಬಹುದು. ಇದರ ಹೊರತಾಗಿ ಐಪಾಡ್ ಮತ್ತು ಮ್ಯಾಕ್ ಬಳಕೆದಾರರಿಗೆ ಎಂ1 ಸಿಲಿಕಾನ್ ಚಿಪ್ನಲ್ಲಿ ಸಿಗಲಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಕುಪೆರ್ಟಿನೊದಲ್ಲಿ ನಡೆದ ಸಮ್ಮೇಳನದಲ್ಲಿ ಸಂಸ್ಥೆ ಅನೇಕ ಫೀಚರ್‌ಗಳನ್ನು ಪರಿಚಯಿಸಿದೆ.
ಏನಿದು ಆ್ಯಪಲ್ ಇಂಟಿಲಿಜೆನ್ಸ್?: ಆ್ಯಪಲ್ ಇಂಟಿಲಿಜೆನ್ಸ್ ಎಂಬುದು ಐಫೋನ್, ಐಪಾಡ್ ಮತ್ತು ಮ್ಯಾಕ್ ವಿನ್ಯಾಸಕ್ಕೆ ಬಳಕೆ ಮಾಡಬಹುದಾದ ವೈಯಕ್ತಿಕ ಬುದ್ಧಿಮತ್ತೆ. ತನ್ನ ಕಟ್ಟುನಿಟ್ಟಿನ ಗೌಪ್ಯತಾ ಮಾನದಂಡಗಳಲ್ಲಿ ಯಾವುದೇ ರಾಜಿಯಾಗದೇ ವೈಯಕ್ತಿಕ ಸುಧಾರಣಾ ಅಂಶಗಳನ್ನು ಆ್ಯಪಲ್ ಇಂಟೆಲಿಜೆನ್ಸ್ ನಡೆಸಲಿದೆ.
ಈ ಸೌಲಭ್ಯ ಪಡೆಯುವುದು ಹೇಗೆ?:ಪ್ರಸ್ತುತ ಆ್ಯಪಲ್ ಇಂಟಲಿಜೆನ್ಸ್ ಫೀಚರ್ಗೆ ಚಾಲನೆ ನೀಡಲಾಗಿದೆ. ಈ ಫೀಚರ್ ಕಳೆದ ವರ್ಷದಿಂದಲೇ iOS18, iPadOS18 and Mac Sequoiaನಲ್ಲಿ ಲಭ್ಯವಿದೆ. iOS18 ಆಪರೇಟಿಂಗ್ ಸಿಸ್ಟಂ ಮೂಲಕ ಬಳಕೆದಾರರು ಐ ಫೋನ್ನಲ್ಲಿ ಪಡೆಯಬಹುದಾಗಿದೆ.