ಕರ್ನಾಟಕ

karnataka

ETV Bharat / technology

ಪಾಸ್‌ಪೋರ್ಟ್ ಪಡೆಯುವುದಕ್ಕೆ ವಿಳಂಬವೇ, ಹಾಗಾದರೆ ಈ ಮಾರ್ಗಗಳನ್ನು ಅನುಸರಿಸಿ - PASSPORT APPLICATION PRECAUTIONS

Mandatory Precautions for Passport Applications: ನಾವು ಪಾಸ್‌ಪೋರ್ಟ್ ಅರ್ಜಿಗಳನ್ನು ಸಲ್ಲಿಸುವಾಗ ತಪ್ಪಾದ ದಾಖಲೆಗಳನ್ನು ಸಲ್ಲಿಸುತ್ತೇವೆ. ಇದರಿಂದಾಗಿ ನಾವು ನಮ್ಮ ಪಾಸ್​ಪೋರ್ಟ್​ ಪಡೆಯಲು ವಿಳಂಬವಾಗುತ್ತದೆ. ಹೀಗಾಗಿ ಈ ತಪ್ಪುಗಳನ್ನು ಮಾಡದಂತೆ ಕೆಲವೊಂದು ಮಾಹಿತಿ ನೀಡಿದ್ದೇವೆ.

PASSPORT APPLICANTS  AADHAAR  BIRTH CERTIFICATE  MANDATORY PRECAUTIONS FOR PASSPORT
ಪಾಸ್‌ಪೋರ್ಟ್ (IANS)

By ETV Bharat Karnataka Team

Published : Dec 19, 2024, 1:42 PM IST

Mandatory Precautions for Passport Applications:ಅನೇಕ ಪಾಸ್‌ಪೋರ್ಟ್ ಅರ್ಜಿದಾರರು ಜನ್ಮದಿನದ ಪುರಾವೆಗಾಗಿ ಆಧಾರ್​ ಕಾರ್ಡ್​ ಸಲ್ಲಿಸುತ್ತಾರೆ. ಅದನ್ನು ಅನುಮತಿಸಲಾಗುವುದಿಲ್ಲ. ಇದರಿಂದಾಗಿ ನೀವು ಸಲ್ಲಿಸಿದ ಪಾಸ್​ಪೋರ್ಟ್ ಅರ್ಜಿ ವಿಳಂಬವಾಗುತ್ತಲೇ ಸಾಗುತ್ತದೆ. ಬಳಿಕ ಮತ್ತೆ ನೀವು ಅಪಾಯಿಂಟ್​ಮೆಂಟ್​ಗಳನ್ನು ಪಡೆಯಬೇಕು ಮತ್ತು ಮತ್ತೆ ಸಂಬಂಧಪಟ್ಟ ಅರ್ಜಿಗಳನ್ನು ಸಲ್ಲಿಸಬೇಕು. ಇದರಿಂದಾಗಿ ನೀವು ಹತ್ತು ದಿನಗಳ ಕಾಲ ಸಮಯ ವ್ಯರ್ಥ ಮಾಡಬೇಕಾಗುತ್ತದೆ.

ಹೈದರಾಬಾದ್‌ನಲ್ಲಿ ಐದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು 14 ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಕೇಂದ್ರಗಳು ಒಟ್ಟಾರೆಯಾಗಿ ಪ್ರತಿದಿನ 3,800 ಪಾಸ್‌ಪೋರ್ಟ್‌ಗಳನ್ನು ನೀಡುತ್ತಿವೆ. ಆದರೆ, ಸರಿಯಾದ ದಾಖಲಾತಿಗಳನ್ನು ಸಲ್ಲಿಸದ ಕಾರಣ ದಿನಕ್ಕೆ ಪ್ರತಿದಿನ ಸುಮಾರು 200 ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಅಥವಾ ಪೆಂಡಿಂಗ್​ ಇಡಲಾಗುತ್ತದೆ.

ನೀವು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‌ಸೈಟ್ passportindia.gov.in ಗೆ ಭೇಟಿ ನೀಡಿ. ಅಲ್ಲಿ ನೀವು Document Advisor ವಿಭಾಗಕ್ಕೆ ಭೇಟಿ ನೀಡಿ. ಅಲ್ಲಿ Before You Apply ಟ್ಯಾಬ್​ ಓಪನ್​ ಮಾಡಿ. ಆಗ ನೀವು ಅಲ್ಲಿ ಡಾಕ್ಯುಮೆಂಟ್ ಅವಶ್ಯಕತೆಗಳನ್ನು ಪರಿಶೀಲಿಸುವ ಪ್ರಾಮುಖ್ಯತೆಯನ್ನು ಅಧಿಕಾರಿಗಳು ಒತ್ತಿ ಹೇಳುತ್ತಾರೆ. ಈ ಸಂಪನ್ಮೂಲವು ಮೊದಲ ಬಾರಿಗೆ ಅರ್ಜಿಗಳು, ಮರು ವಿತರಣೆಗಳು, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳು (PCC ಗಳು) ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳಿಗೆ ದಾಖಲೆಗಳನ್ನು ಸಲ್ಲಿಸಲು ವಿವರವಾದ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ನೀವು ಪಾಸ್​ಪೋರ್ಟ್​ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳ ವಿವರಗಳು ಇಲ್ಲಿವೆ..

ನಿವಾಸ ಪುರಾವೆಗಾಗಿ ದಾಖಲೆಗಳು:ಅರ್ಜಿದಾರರು ಈ ಕೆಳಗಿನ ಯಾವುದಾದರೂ ಒಂದನ್ನು ನಿವಾಸದ ಪುರಾವೆಯಾಗಿ ಸಲ್ಲಿಸಬಹುದಾಗಿದೆ.

  • ಯುಟಿಲಿಟಿ ಬಿಲ್‌ಗಳು (ವಿದ್ಯುತ್, ದೂರವಾಣಿ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲ್).
  • ಆದಾಯ ತೆರಿಗೆ ಮೌಲ್ಯಮಾಪನ ಆದೇಶಗಳು.
  • ಚುನಾವಣಾ ಆಯೋಗದ ಫೋಟೋ ಗುರುತಿನ ಚೀಟಿಗಳು.
  • ಗ್ಯಾಸ್ ಕನೆಕ್ಷನ್​ ಪುರಾವೆ.
  • ಹೆಸರಾಂತ ಉದ್ಯೋಗದಾತರು ನೀಡಿದ ವಿಳಾಸ ಪ್ರಮಾಣಪತ್ರಗಳು.
  • ಸಂಗಾತಿಯ ಪಾಸ್‌ಪೋರ್ಟ್‌ನ ಪ್ರತಿ (ಅನ್ವಯಿಸಿದರೆ).
  • ಅಪ್ರಾಪ್ತ ವಯಸ್ಕರಿಗೆ ಪೋಷಕರ ಪಾಸ್‌ಪೋರ್ಟ್‌ಗಳ ಪ್ರತಿ (ಕುಟುಂಬದ ವಿವರಗಳೊಂದಿಗೆ ಮೊದಲ ಮತ್ತು ಕೊನೆಯ ಪುಟಗಳು).
  • ಆಧಾರ್ ಕಾರ್ಡ್.
  • ಬಾಡಿಗೆ ಒಪ್ಪಂದ.
  • ನಿಗದಿತ ಸಾರ್ವಜನಿಕ/ಖಾಸಗಿ ವಲಯದ ಬ್ಯಾಂಕ್ ಪಾಸ್‌ಬುಕ್‌ಗಳು ಅಥವಾ ನಗದು ವಹಿವಾಟುಗಳನ್ನು ತೋರಿಸುವ ಪ್ರಾದೇಶಿಕ ಬ್ಯಾಂಕ್‌ಗಳು.

ಜನನ ಪುರಾವೆಗಾಗಿ ದಾಖಲೆಗಳು:ನಿಯಮಿತ ಪಾಸ್‌ಪೋರ್ಟ್ ಅರ್ಜಿಗಳಿಗಾಗಿ ಈ ಕೆಳಗಿನ ಎಂಟು ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದಾಗಿದೆ.

  • ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಅಥವಾ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಪ್ರಮಾಣಪತ್ರ.
  • 10ನೇ ತರಗತಿ ಪ್ರಮಾಣಪತ್ರ (ಮಾರ್ಕ್ ಶೀಟ್).
  • ಸರ್ಕಾರಿ ಜೀವ ವಿಮಾ ಕಂಪನಿಗಳು ನೀಡುವ ಪಾಲಿಸಿ ಬಾಂಡ್‌ಗಳು.
  • ಸರ್ಕಾರಿ ನೌಕರರಿಗೆ ಸೇವಾ ದಾಖಲೆಯ ಪ್ರತಿ ಅಥವಾ ನಿವೃತ್ತ ನೌಕರರಿಗೆ ವೇತನ/ಪಿಂಚಣಿ ಆದೇಶ ಪ್ರತಿ (ಆಡಳಿತ ಇಲಾಖೆಯಿಂದ ದೃಢೀಕರಿಸಲ್ಪಟ್ಟಿರಬೇಕು).
  • ವೋಟರ್​ ಐಡಿ
  • ಹುಟ್ಟಿದ ದಿನಾಂಕವುಳ್ಳ ಪ್ಯಾನ್ ಕಾರ್ಡ್
  • ಸಾರಿಗೆ ಇಲಾಖೆ ನೀಡಿದ ಚಾಲನಾ ಪರವಾನಗಿ
  • ಅನಾಥಾಶ್ರಮಗಳು ಅಥವಾ ಶಿಶುಪಾಲನಾ ಮನೆಗಳಲ್ಲಿ (ಅಧಿಕೃತ ಲೆಟರ್‌ಹೆಡ್‌ನಲ್ಲಿ) ಬೆಳೆದ ಮಕ್ಕಳಿಗೆ ಸಂಸ್ಥೆಯ ಮುಖ್ಯಸ್ಥರಿಂದ ಘೋಷಣೆಯ ಪ್ರತಿ.

ಓದಿ:ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ದುಬಾರಿ ಬೈಕ್​ ಕವಾಸಕಿ ನಿಂಜಾ 1100SX: ಇದರಲ್ಲಿ ಏನೆಲ್ಲ ಇದೆ ಗೊತ್ತಾ?

ABOUT THE AUTHOR

...view details