ETV Bharat / technology

ಟ್ರಯಂಫ್ ಬೈಕ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ, ಭಾರೀ ಡಿಸ್ಕೌಂಟ್​ ಘೋಷಿಸಿದ ಕಂಪನಿ! ಇದರ ಬೆಲೆ ಎಷ್ಟು ಗೊತ್ತಾ? - TRIUMPH SPEED T4 BIKE ON DISCOUNT

Triumph Speed T4 Bike: ಈ ಟ್ರಯಂಫ್ ಬೈಕ್‌ ಅಭಿಮಾನಿಗಳಿಗೆ ಕಂಪನಿ ಸಿಹಿ ನೀಡಿದೆ. ಈ ಬೈಕ್​ ಮೇಲೆ ಬಾರಿ ಡಿಸ್ಕೌಂಟ್​ ಘೋಷಿಸಿದ್ದು, ಇದರ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ..

TRIUMPH SPEED T4  TRIUMPH SPEED T4 PRICE  TRIUMPH SPEED T4 FEATURES  TRIUMPH SPEED T4 DISCOUNT
ಟ್ರಯಂಫ್ ಬೈಕ್‌ (Photo Credit: Triumph Motorcycles)
author img

By ETV Bharat Tech Team

Published : Feb 11, 2025, 7:32 PM IST

Triumph Speed T4 Bike on Discount : ದೇಶಿಯ ಸ್ಪೋರ್ಟ್ಸ್ ಬೈಕ್‌ಗಳಿಗೆ ಬೇರೆಯದೇ ರೀತಿಯ ಕ್ರೇಜ್ ಕಂಡುಬರುತ್ತದೆ. ನೀವು ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಪೋರ್ಟಿ ಮತ್ತು ಸ್ಟೈಲಿಶ್ ಬೈಕ್​ ಖರೀದಿಸಲು ಯೋಜಿಸುತ್ತಿದ್ದರೆ, ಇಲ್ಲಿ ನಾವು ನಿಮಗೆ ಪವರ್​ಫುಲ್​ ಬೈಕ್ ಟ್ರಯಂಫ್ ಸ್ಪೀಡ್ ಟಿ4 ಬಗ್ಗೆ ಹೇಳಲಿದ್ದೇವೆ. ಕಂಪನಿಯು ಈ ಬೈಕ್ ಮೇಲೆ 18 ಸಾವಿರ ರೂ.ಗಳ ಡಿಸ್ಕೌಂಟ್​ ಘೋಷಿಸಿದೆ. ರಿಯಾಯಿತಿಯ ನಂತರ ನೀವು ಈಗ ಈ ಬೈಕ್ ಅನ್ನು 1 ಲಕ್ಷ 99 ಸಾವಿರ ರೂ.ಗೆ (ಎಕ್ಸ್​ ಶೋರೂಂ ಬೆಲೆ) ಖರೀದಿಸಬಹುದಾಗಿದೆ.

ಟ್ರಯಂಫ್ ಬೈಕ್ ಬೆಲೆ ಎಷ್ಟು ? ಈ ಟ್ರಯಂಫ್ ಬೈಕ್‌ನ ಎಕ್ಸ್ ಶೋ ರೂಂ ಬೆಲೆ ಮೊದಲು 2.17 ಲಕ್ಷ ರೂ.ಗಳಷ್ಟಿತ್ತು. ನಂತರ ಈಗ ಅದರ ಬೆಲೆಯನ್ನು 18 ಸಾವಿರ ರೂ.ಗಳಷ್ಟು ಕಡಿಮೆ ಮಾಡಲಾಗಿದೆ.

ಟ್ರಯಂಫ್ ಸ್ಪೀಡ್ ಟಿ4 ಬೈಕ್‌ನ ವೈಶಿಷ್ಟ್ಯಗಳು : ಟ್ರಯಂಫ್ ಸ್ಪೀಡ್ ಟಿ4 ಬೈಕ್ ಅಲಾಯ್ ವೀಲ್‌ಗಳು, ರೌಂಡ್ ಹೆಡ್‌ಲೈಟ್, ಸಿಂಗಲ್-ಪೀಸ್ ಸೀಟ್ ಮತ್ತು ಫ್ಯೂಯಲ್​ ಟ್ಯಾಂಕ್ ಸೇರಿದಂತೆ ಇನ್ನು ಅನೇಕ ಫೀಚರ್ಸ್​ಅನ್ನು ಒಳಗೊಂಡಿದೆ. ಕಲರ್​ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಸ್ಪೀಡ್ ಟಿ4 ಮೆಟಾಲಿಕ್ ವೈಟ್, ಫ್ಯಾಂಟಮ್ ಬ್ಲಾಕ್ ಮತ್ತು ಕಾಕ್ಟೈಲ್ ರೆಡ್ ವೈನ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಸ್ಪೀಡ್ ಟಿ4ನ ಹ್ಯಾಂಡಲ್‌ಬಾರ್ 827mm ಆಗಿದೆ. ಈ ಬೈಕ್‌ನಲ್ಲಿ ರೈಡ್-ಬೈ-ವೈರ್ ಥ್ರೊಟಲ್, ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್, ಡ್ಯುಯಲ್-ಚಾನಲ್ ಎಬಿಎಸ್​ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಟ್ರಯಂಫ್ ಸ್ಪೀಡ್ ಟಿ4ನಲ್ಲಿ ಬಲವಾದ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಬಳಸಲಾಗಿದ್ದು, ಇದರಲ್ಲಿ ಬೈಕ್ ಹೆಚ್ಚು ಸ್ಥಿರವಾಗಿರುತ್ತದೆ ಮತ್ತು ಕಂಟ್ರೋಲ್​ನಲ್ಲಿರುತ್ತದೆ. ಇದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಸಸ್ಪೆನ್ಷನ್ ಮತ್ತು ಮೊನೊಶಾಕ್ ರಿಯರ್ ಸಸ್ಪೆನ್ಷನ್ ಅನ್ನು ಪಡೆಯುತ್ತದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಇದರ ಫ್ರಂಟ್​ ಮತ್ತು ರಿಯರ್​ನಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

ಇದರ ಸ್ಪರ್ಧೆ ಯಾವ ಬೈಕ್‌ಗಳೊಂದಿಗೆ ? ದೇಶಿಯ ಮಾರುಕಟ್ಟೆಯಲ್ಲಿ ಬೈಕ್‌ನ ಪ್ರತಿಸ್ಪರ್ಧಿಗಳ ಬಗ್ಗೆ ಮಾತನಾಡಿದರೆ, ಇದು ರಾಯಲ್ ಎನ್‌ಫೀಲ್ಡ್ ಹಂಟರ್ 350 ರೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ. ನೀವು ಸ್ಟೈಲಿಶ್​, ಸ್ಮೂತ್​ ಮತ್ತು ಕಂಫೆಟೆಬಲ್​ ರೈಡ್​ ಬಯಸಿದರೆ ಈ ಬೈಕ್ ನಿಮಗೆ ಉತ್ತಮ ಆಯ್ಕೆಯಾಗಿದೆ.

ಓದಿ: ಅತ್ಯಂತ ಕೈಗೆಟುಕುವ ದರದಲ್ಲಿ ಮಾಸಿಕ ರೀಚಾರ್ಜ್​ ಪ್ಲಾನ್​ ಘೋಷಿಸಿದ Jio

ETV Bharat Logo

Copyright © 2025 Ushodaya Enterprises Pvt. Ltd., All Rights Reserved.