2025 Toyota Camry India Launch: ಭಾರತದ ಮಾರುಕಟ್ಟೆಗೆ ಮತ್ತೊಂದು ಐಷಾರಾಮಿ ಕಾರು ಲಗ್ಗೆಯಿಟ್ಟಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಪ್ರೀಮಿಯಂ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರು ಒಂದು ವರ್ಷದ ಹಿಂದೆ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಉತ್ತಮ ಜನಪ್ರಿಯತೆಯನ್ನು ಗಳಿಸಿದೆ. ಇದರೊಂದಿಗೆ ಕಂಪನಿಯು ಈ ಕಾರನ್ನು ಭಾರತೀಯ ಮಾರುಕಟ್ಟೆಗೂ ತರಲು ಸಿದ್ಧತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯು ತನ್ನ ಅಧಿಕೃತ ಟೀಸರ್ ಬಿಡುಗಡೆ ಮಾಡಿತ್ತು. ಈಗ ಈ ಕಾರು ಮಾರುಕಟ್ಟೆಗೆ ಪ್ರವೇಶಿಸಿದೆ.
ಔಟ್ಲುಕ್: ಈ ಟೊಯೊಟಾ ಕ್ಯಾಮ್ರಿ ಕಾರು ಹೊಸ ವಿನ್ಯಾಸದೊಂದಿಗೆ ಬರಲಿದೆ. ಈ ಕಾರಿನ ಶೈಲಿ ಮತ್ತು ವಿನ್ಯಾಸವು ಅದರ ಹಿಂದಿನ ಮಾದರಿಗಿಂತ ಬಹಳ ಭಿನ್ನವಾಗಿದೆ. ಅಲ್ಲದೇ, ಇದರಲ್ಲಿ ಹೈಟೆಕ್ ವೈಶಿಷ್ಟ್ಯಗಳು ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದು ರಿವೈಜ್ಡ್ ಫ್ರಂಟ್ ಫಾಸಿಯಾ, ಹಾರಿಜಂಟಲ್ ಸ್ಲ್ಯಾಟ್‌ಗಳೊಂದಿಗೆ ವೈಡ್ ಅಂಡ್ ಅಗ್ರೆಸಿವ್ ಗ್ರಿಲ್, ಸಿ - ಶೇಪ್ಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಮಲ್ಟಿ- ಸ್ಪೋಕ್ ಅಲಾಯ್ ವೀಲ್‌ಗಳ ಹೊಸ ಸೆಟ್, ಡೋರ್ ಪ್ಯಾನೆಲ್‌ಗಳಲ್ಲಿ ಶಾರ್ಪ್ ಕ್ರೀಸೆಸ್, ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಹೆಡ್ ಲ್ಯಾಂಪ್‌ಗಳು, ಲಾರ್ಜ್ ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ. ಅವುಗಳನ್ನು ಅಪ್ಡೇಟ್ ಮಾಡಲಾಗಿದೆ. ಈ ಕಾರಿನ ಫ್ರಂಟ್ ಗ್ರಿಲ್ ಜೇನುಗೂಡು ಮಾದರಿಯನ್ನು ಹೊಂದಿದೆ.