ಮುಂಬೈ (ಮಹಾರಾಷ್ಟ್ರ): ಕಳೆದ ವಾರ ಚಾಕು ಇರಿತಕ್ಕೊಳಗಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಿನ್ನೆ, ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಟೋರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಅವರು ಬಾಲಿವುಡ್ ಸೂಪರ್ ಸ್ಟಾರ್ ಜೊತೆ ಆಸ್ಪತ್ರೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಇಂದು ವೈರಲ್ ಆಗಿವೆ. ಇದು ನಟ ಮನೆಗೆ ತೆರಳುವುದಕ್ಕೂ ಮೊದಲು ಆಸ್ಪತ್ರೆಯಲ್ಲಿ ಪೋಸ್ ಕೊಟ್ಟಿರುವ ಫೋಟೋಗಳಾಗಿವೆ.
ನಟನ ಮನೆ ಬಳಿ ಹಾದು ಹೋಗುತ್ತಿದ್ದ ಆಟೋ... ಜನವರಿ 16, ಗುರುವಾರ ಮುಂಜಾನೆ (ಬುಧವಾರ ತಡರಾತ್ರಿ) ತಾರಾ ದಂಪತಿ ಸೈಫ್ ಕರೀನಾ ಅವರ ನಿವಾಸದಲ್ಲಿ ಕಳ್ಳತನದ ಯತ್ನ ನಡೆದಿತ್ತು. ಮನೆಗೆ ನುಗ್ಗಿದ ವ್ಯಕ್ತಿ ನಟನ ಮೇಲೆ ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಆ ಕೂಡಲೇ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಅವರು ನಟನನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದರು. ನಟನ ನಿವಾಸ ಇರುವ ಅಪಾರ್ಟ್ಮೆಂಟ್ ಬಳಿ ಹಾದು ಹೋಗುತ್ತಿದ್ದ ಆಟೋವನ್ನು ಕೆಲವರು ತಡೆದು, ಆಸ್ಪತ್ರೆಗೆ ಕರೆದೊಯ್ಯುವಂತೆ ಕೋರಿದ್ದರು.
ಆಟೋ ಚಾಲಕನನ್ನು ಆತ್ಮೀಯನಂತೆ ಕಂಡ ಸೂಪರ್ ಸ್ಟಾರ್: ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಹೊರಡುವ ಮೊದಲು, ಸೈಫ್ ಅಲಿ ಖಾನ್ ಸ್ವತಃ ರಿಕ್ಷಾ ಚಾಲಕನನ್ನು ಭೇಟಿಯಾದರು. ಅವರನ್ನು ಆಸ್ಪತ್ರೆಗೆ ಕರೆಸಿಕೊಂಡು ಗುಣಮಟ್ಟದ ಸಮಯ ಕಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದರಲ್ಲಿ, ಆಟೋ ಚಾಲಕ ಹಾಸ್ಪಿಟಲ್ನ ಬೆಡ್ ಮೇಲೆ ಸೈಫ್ ಪಕ್ಕದಲ್ಲಿ ಕುಳಿತು ಕ್ಯಾಮರಾ ನೋಡಿ ಸ್ಮೈಲ್ ಕೊಟ್ಟಿರೋದನ್ನು ಕಾಣಬಹುದು. ಭಜನ್ ಸಿಂಗ್ ರಾಣಾ ಅವರ ಭುಜದ ಮೇಲೆ ನಟ ಕೈ ಇಟ್ಟು ಆತ್ಮೀಯರಂತೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ, ಇಬ್ಬರೂ ಅಕ್ಕ ಪಕ್ಕ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
ಸಹಾಯಹಸ್ತದ ಭರವಸೆ ನೀಡಿದ ನಟ.. ಖಾನ್ ಫ್ಯಾಮಿಲಿ ರಿಕ್ಷಾ ಚಾಲಕನಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಹಾಯ ಬೇಕಾದಾಗಲೆಲ್ಲಾ ಸಹಾಯ ಕೇಳಲು ಹಿಂಜರಿಯಬೇಡಿ ಎಂದು ತಮ್ಮ ಸಹಾಯಹಸ್ತದ ಭರವಸೆ ನೀಡಿದ್ದಾರೆ. ಸೈಫ್ ಮತ್ತು ಅವರ ತಾಯಿ, ಹಿರಿಯ ನಟಿ ಶರ್ಮಿಳಾ ಠಾಗೋರ್ ಭಜನ್ ಸಿಂಗ್ ರಾಣಾ ಅವರಿಗೆ ಮನತುಂಬಿ ತಮ್ಮ ಕೃತಜ್ಞತೆ ಅರ್ಪಿಸಿದ್ದಾರೆ.
Mumbai, Maharashtra: Bhajan Singh Rana, the auto driver who took actor Saif Ali Khan to the hospital after he was attacked, met the actor after he was discharged from the hospital yesterday.
— IANS (@ians_india) January 22, 2025
Auto driver Bhajan Singh Rana says, " ...they gave a time of 3:30 pm, i said okay, and i… pic.twitter.com/knmztnk9E4
ಮಾಸ್ಕ್ ಧರಿಸಿ ಆಸ್ಪತ್ರೆ ಪ್ರವೇಶಿಸಿದ ಚಾಲಕ: ಆಸ್ಪತ್ರೆ ಸುತ್ತ ಮಾಧ್ಯಮಗಳಿದ್ದ ಹಿನ್ನೆಲೆ, ಭಜನ್ ಸಿಂಗ್ ರಾಣಾ ಮಾಸ್ಕ್ ಧರಿಸಿ ಆಸ್ಪತ್ರೆ ಪ್ರವೇಶಿಸಿದರು. "ನಾನು ಮಾಸ್ಕ್ ಧರಿಸಿ ಆಸ್ಪತ್ರೆ ಒಳಗೆ ಹೋದೆ. ಸೈಫ್ ಅವರ ಆಪ್ತ ಸಹಾಯಕರಿಂದ ಮೊದಲು ಕರೆ ಬಂದಿತು. ನಟ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಅವರೊಂದಿಗೆ ಕೆಲ ಸೆಲ್ಫಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆ'' ಎಂದು ತಿಳಿಸಿದರು.
ಇದನ್ನೂ ಓದಿ: ಏನೂ ಆಗಿಲ್ಲ ಎಂಬಂತೆ ನಡೆದು ಬಂದ ಪಟೌಡಿ ಕುಡಿ ಸೈಫ್; ಬೆನ್ನೊಳಗಿತ್ತು 2.5 ಇಂಚು ಉದ್ದದ ಚಾಕು
ಆಟೋದಲ್ಲಿದ್ದ ಅವರಿಗೆ ನೋವಾಗುತ್ತಿತ್ತು: ನಟ ಚಾಕು ಇರಿತಕ್ಕೊಳಗಾದ ಆ ರಾತ್ರಿಯನ್ನು ನೆನಪಿಸಿಕೊಂಡ ಆಟೋ ಚಾಲಕ, ಆಟೋದಲ್ಲಿದ್ದ ಅವರಿಗೆ ನೋವಾಗುತ್ತಿತ್ತು. ಹಾಗಾಗಿ, ನಿಧಾನವಾಗಿ ವಾಹನ ಚಲಾಯಿಸಲು ಕೇಳಿಕೊಂಡರು ಎಂದು ತಿಳಿಸಿದರು.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
ಮೂಲಗಳ ಪ್ರಕಾರ, ಸೈಫ್ ರಿಕ್ಷಾ ಚಾಲಕನನ್ನು ಶ್ಲಾಘಿಸಿದರು. ''ಇತರರಿಗೂ ಹೀಗೇ ಸಹಾಯ ಮಾಡುತ್ತಿರಿ. ಆ ದಿನದ ಆಟೋದ ಹಣದ ಬಗ್ಗೆ ಚಿಂತಿಸಬೇಡಿ, ಅದನ್ನು ನೋಡಿಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ತಮಾಷೆಯಾಗಿ ಮಾತನಾಡುತ್ತಿದ್ದ ನಟ, "ನಿಮಗೆ ಜೀವನದಲ್ಲಿ ಎಂದಾದರೂ ಸಹಾಯ ಬೇಕಾದಲ್ಲಿ, ನನ್ನನ್ನು ನೆನಪಿಸಿಕೊಳ್ಳಿ" ಎಂದು ಸಹ ತಿಳಿಸಿದ್ದಾರಂತೆ.