ಕರ್ನಾಟಕ

karnataka

ETV Bharat / state

ಉದ್ಯೋಗಿಗಳ ಇಪಿಎಫ್ ಹಣ ವಂಚನೆ ಆರೋಪ; ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರಂಟ್ - ROBIN UTHAPPA

ಉದ್ಯೋಗಿಗಳ ಇಪಿಎಫ್ ಹಣ ಪಾವತಿಸದೇ ವಂಚಿಸಿದ ಆರೋಪ ಮೇಲೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರಂಟ್ ಜಾರಿಯಾಗಿದೆ.

robin uthappa
ರಾಬಿನ್ ಉತ್ತಪ್ಪ (IANS)

By ETV Bharat Karnataka Team

Published : Dec 21, 2024, 10:55 AM IST

ಬೆಂಗಳೂರು:ಉದ್ಯೋಗಿಗಳ ಇಪಿಎಫ್ ಹಣ ವಂಚಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರಂಟ್ ಜಾರಿಗೊಳಿಸಲಾಗಿದೆ. ಇದೇ ತಿಂಗಳು 4ರಂದು ಅರೆಸ್ಟ್‌ ವಾರಂಟ್​ ಜಾರಿಯಾಗಿದೆ.

ರಾಬಿನ್‌ ಉತ್ತಪ್ಪ ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ‌ ಇಪಿಎಫ್ ರಿಜಿನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ಎಂಬವರು ಪೊಲೀಸರಿಗೆ ಪತ್ರ ಬರೆದಿದ್ದಾರೆ.

ರಾಬಿನ್ ಉತ್ತಪ್ಪ ಅವರು ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್‌ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಇಪಿಎಫ್ ಹಣ ಪಾವತಿಸಿಲ್ಲ. ಸಂಬಳದಲ್ಲಿ ಇಪಿಎಫ್ ಹಣ ಕಡಿತಗೊಳಿಸಿಕೊಂಡು, ಉದ್ಯೋಗಿಗಳ ಖಾತೆಗೆ ಹಾಕದೇ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಒಟ್ಟಾರೆ, 23 ಲಕ್ಷ ರೂ. ವಂಚಿಸಲಾಗಿದೆ ಎಂಬ ಆರೋಪ ಸೆಂಚುರೀಸ್ ಲೈಫ್ - ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್‌ ಲಿಮಿಟೆಡ್ ವಿರುದ್ಧ ಕೇಳಿ ಬಂದಿದ್ದು, ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳು 4ರಂದು ವಾರಂಟ್ ಜಾರಿಯಾಗಿದ್ದು, ಉತ್ತಪ್ಪ ಅವರನ್ನು ಬಂಧಿಸುವಂತೆ ಇಪಿಎಫ್ ರೀಜನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ ಪತ್ರ‌ ಬರೆದಿದ್ದಾರೆೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಅನ್ವಯ ಉತ್ತಪ್ಪ ಅವರ ವಿಳಾಸಕ್ಕೆ ಪೊಲೀಸರು ತೆರಳಿದ್ದು, ಅವರು ಸದ್ಯ ಆ ವಿಳಾಸದಲ್ಲಿ ವಾಸವಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಪ್ರತಿಷ್ಠಿತ ಐಐಎಂಬಿ ಪ್ರಾಧ್ಯಾಪಕರಿಗೆ ಜಾತಿ ನಿಂದನೆ ಆರೋಪ: 8 ಮಂದಿ ವಿರುದ್ಧ ಎಫ್ಐಆರ್

ABOUT THE AUTHOR

...view details