ETV Bharat / state

ಲಾಲ್‌ಬಾಗ್‌ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದ್ದಾರೆ ವಾಲ್ಮೀಕಿ - LALBAGH FLOWER SHOW

ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ ಲಾಲ್‌ಬಾಗ್‌ನಲ್ಲಿ ವಾಲ್ಮೀಕಿ ಕುರಿತ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲು ರಾಜ್ಯ ತೋಟಗಾರಿಕೆ ಇಲಾಖೆ ಮುಂದಾಗಿದೆ.

REPUBLIC DAY FLOWER SHOW  BENGALURU  MAHARSHI VALMIKI  ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ
ಹೂವಿನ ಗಿಡಗಳು (ETV Bharat)
author img

By ETV Bharat Karnataka Team

Published : Jan 2, 2025, 3:25 PM IST

ಬೆಂಗಳೂರು: ಸ್ವಾತಂತ್ರ್ಯೊತ್ಸವ ಮತ್ತು ಗಣರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ಒಂದೊಂದು ರೀತಿಯ ವಿಷಯವಸ್ತುವಿನ ಆಧಾರದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ರಾಜ್ಯಧಾನಿ ಬೆಂಗಳೂರು ಮಾತ್ರವಲ್ಲದೇ ಇಡೀ ರಾಜ್ಯದ ಜನರನ್ನು ಆಕರ್ಷಣೆ ಮಾಡುತ್ತಿರುವ ತೋಟಗಾರಿಕೆ ಇಲಾಖೆ, ಪ್ರಸಕ್ತ ವರ್ಷ ಮಹರ್ಷಿ ವಾಲ್ಮೀಕಿ ಅವರ ಜೀವನ ಕುರಿತ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ.

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಜನವರಿ 16ರಿಂದ ಹತ್ತು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ರಾಮಾಯಣ ಮಹಾಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ಅವರ ಜೀವನ ಚಿತ್ರಣವು ವಿವಿಧ ಜಾತಿಯ ಲಕ್ಷಾಂತರ ಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ.

REPUBLIC DAY FLOWER SHOW  BENGALURU  MAHARSHI VALMIKI  ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ
ಹೂವಿನ ಗಿಡಗಳ ಆರೈಕೆಯಲ್ಲಿ ತೊಡಗಿರುವುದು (ETV Bharat)

ಮಹಾನ್ ಗ್ರಂಥ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜೀವನಾಧಾರಿತ ಪುಷ್ಪ ಚಿತ್ರಣಗಳು ನೋಡುಗರ ಮೈಮನ ಸೆಳೆಯಲಿವೆ. ಮಹರ್ಷಿ ಅವರು ರಾಮಾಯಣ ಬರೆಯುತ್ತಿರುವ ಚಿತ್ರ, ರಾಮಾಯಣ ಪುಸ್ತಕದ ಚಿತ್ರ ಸೇರಿದಂತೆ ಹಲವು ಆಕರ್ಷಣೆಗಳು ವಿವಿಧ ಹೂವುಗಳಿಂದ ವಿನ್ಯಾಸಗೊಳ್ಳಲಿವೆ.

REPUBLIC DAY FLOWER SHOW  BENGALURU  MAHARSHI VALMIKI  ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ
ಹೂವಿನ ಗಿಡಗಳು (ETV Bharat)

ಜನವರಿ 16ರಿಂದ ನಡೆಯುವ ಪ್ರದರ್ಶನಕ್ಕಾಗಿ ಈಗಾಗಲೇ ಹೂವು ಕುಂಡಗಳಲ್ಲಿ ಬೆಳೆಸಿದ ಪುಷ್ಪಗಳ ಜೋಡಣೆ ಆರಂಭವಾಗಿದ್ದು, ಹುಲ್ಲು ಹಾಸು ಸೇರಿದಂತೆ ಉದ್ಯಾನದ ನಾನಾ ಭಾಗಗಳಿಗೆ ತುಂತುರು ಹನಿ ನೀರನ್ನು ಹರಿಸುವ ಮೂಲಕ ಉದ್ಯಾನದ ಅಂದ ಹೆಚ್ಚಿಸಲು ತೋಟಗಾರಿಕೆ ಇಲಾಖೆ ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಲ್ಲದೆ, ಬ್ಯಾಂಡ್‌ಸ್ಟ್ಯಾಂಡ್ ಮತ್ತು ರಾಕ್ ಗಾರ್ಡನ್ ಸೆಲ್ಫಿ ಪಾಯಿಂಟ್ ಸಂದರ್ಶಕರನ್ನು ಸೂಜಿಗಲ್ಲಿನಂತೆ ಸೆಳೆಯುವ ರೀತಿಯಲ್ಲಿ ಅಲಂಕರಿಸಲು ಲಾಲ್ ಬಾಗ್ ಆಡಳಿತ ಮಂಡಳಿ ನಿರ್ಧರಿಸಿದೆ. ಬೋನ್ಸೈ ಮತ್ತು ಇಕಾಬಾನಾ ಪ್ರದರ್ಶನವು ಈ ಪ್ರದರ್ಶನಕ್ಕೆ ಕಲಾತ್ಮಕ ಸ್ಪರ್ಶ ನೀಡಲಿದೆ. ಹೂವಿನ ತಾಜಾತನ ಕಾಪಾಡಿಕೊಳ್ಳಲು 6 ದಿನಗಳ ನಂತರ ಹೂವುಗಳನ್ನು ಬದಲಾಯಿಸಲಾಗುತ್ತದೆ.

ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಬಗೆಯ ಹೂವು: ಚಳಿಗಾಲದಲ್ಲಿ ಬೆಳೆಯುವಂತಹ ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಟ್ಯೊಬಿರಸ್ ರೂಟೆಡ್ ಸೇರಿದಂತೆ ಹಲವು ಶೀತ ವಲಯದ ವಿಶೇಷ ಹೂಗಳ ಪ್ರದರ್ಶನ, ದೇಶ-ವಿದೇಶಗಳ ಹತ್ತಾರು ಬಗೆಯ ಕುಂಡಗಳಲ್ಲೇ ಅರಳಿದ ಹೂಗಳು, ಆರ್ಕಿಡ್ಸ್, ಬೋಗನ್‌ವಿಲ್ಲಾದ ಹೂವಿನ ಗಿಡಗಳನ್ನು ಕಂಟೈನ್‌ಗಳಲ್ಲಿ ಪ್ರದರ್ಶಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಂದೆ-ತಾಯಂದಿರಿಗೆ ಸಾಮೂಹಿಕ ಪಾದಪೂಜೆ; ಮಕ್ಕಳಲ್ಲಿ ದೇಶಿ ಸಂಸ್ಕೃತಿ ಬೆಳೆಸುತ್ತಿರುವ ಶಾಲೆ

ಅಲ್ಲದೆ, ಲಾಲ್‌ಬಾಗ್​ಗೆ ಈ ಬಾರಿ ಭೇಟಿ ನೀಡುವ ಪ್ರವಾಸಿಗರು, ಬೆಂಗಳೂರಿನ ಜನತೆಯನ್ನು ಸೆಳೆಯಲು ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಹೂವಿನ ಪ್ರತಿಕೃತಿ ಹಾಗೂ ರಾಮಾಯಾಣ ಮಹಾಕಾವ್ಯದ ಪ್ರಮುಖ ಘಟನೆಗಳು ಫಲಪುಷ್ಪ ಪ್ರದರ್ಶನದಲ್ಲಿ ಮೂಡಿಬರಲಿದೆ. ಅಲಂಕಾರಕ್ಕಾಗಿ ದೇಶ ವಿದೇಶಗಳಿಂದ ಹೂಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 25 ಲಕ್ಷ ಹೂವುಗಳಲ್ಲಿ, ಹೂವು ಕುಂಡದಲ್ಲಿ ಬೆಳೆಯುವ ಹಾಗೂ ಲಾಲ್‌ಬಾಗ್​ನಲ್ಲಿ ಬೆಳೆಯುವ ಹೂವುಗಳು, ಲಾಲ್​ಬಾಗ್ 25 ಸ್ಥಳಗಳಲ್ಲಿ ಬೆಳೆಯುವ 15 ಲಕ್ಷ ಹೂಗಳು ಹಾಗೂ 10 ಲಕ್ಷ ಪ್ರತ್ಯೇಕಿಸಿದ ಹೂವುಗಳಾದ ಗುಲಾಬಿ, ಸೇವಂತಿಗೆ ಸೇರಿದಂತೆ 10 ವಿವಿಧ ಜಾತಿಯ ಪುಷ್ಪಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರದರ್ಶನಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜ್ಯದ ಹಲವು ಭಾಗಗಳಲ್ಲಿನ ತೋಟಗಾರಿಕಾ ಇಲಾಖೆಯ ಉದ್ಯಾನವನಗಳಲ್ಲಿನ ಹೂಗಳನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಖಾದಿ ಉತ್ಸವ: ಜನಮನ ಸೆಳೆದ ಚರಕದಲ್ಲಿ ನೂಲುತ್ತಿರುವ ಅಜ್ಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.