ಕರ್ನಾಟಕ

karnataka

ETV Bharat / state

ಮೆಜೆಸ್ಟಿಕ್ ಸುತ್ತಮುತ್ತ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್​​​ಗೆ ನಿಷೇಧ: ಉಲ್ಲಂಘಿಸಿದರೆ ಭಾರಿ ದಂಡ - Parking Ban Near Majestic - PARKING BAN NEAR MAJESTIC

ಮೆಜೆಸ್ಟಿಕ್ ಸುತ್ತಮುತ್ತ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ನಿಷೇಧ ಮಾಡಿ ಬೆಂಗಳೂರು ಸಂಚಾರ ಪೊಲೀಸರು ಆದೇಶಿಸಿದ್ದಾರೆ.

majestic
ಮೆಜೆಸ್ಟಿಕ್ ಬಸ್​ ನಿಲ್ದಾಣ (ETV Bharat)

By ETV Bharat Karnataka Team

Published : Jun 22, 2024, 9:29 AM IST

ಬೆಂಗಳೂರು:ಸುಗಮ ಸಂಚಾರ ಹಾಗೂ ಟ್ರಾಫಿಕ್​ ಜಾಮ್​ ನಿರ್ವಹಣೆ ಉದ್ದೇಶದಿಂದ ನಗರದ ಮೆಜೆಸ್ಟಿಕ್ ಸುತ್ತಮುತ್ತ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಗೆ ನಿಷೇಧ ವಿಧಿಸಿ ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ಆದೇಶಿಸಿದೆ. ಬದಲಿಯಾಗಿ ಫ್ರೀಡಂ ಪಾರ್ಕ್‌ ಬಳಿ ನಿರ್ಮಾಣವಾಗಿರುವ ಸ್ಮಾರ್ಟ್ ಪಾರ್ಕಿಂಗ್ ಕಾಂಪ್ಲೆಕ್ಸ್ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ಆದೇಶದ ಪ್ರತಿ (ETV Bharat)

ಮೆಜೆಸ್ಟಿಕ್, ಗಾಂಧಿನಗರ ಹಾಗೂ ಆನಂದ್ ರಾವ್ ಸರ್ಕಲ್ ಸುತ್ತಮುತ್ತ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದರೆ ಭಾರಿ ದಂಡ ವಿಧಿಸುವ ಎಚ್ಚರಿಕೆಯನ್ನು ಸಂಚಾರಿ ಪೊಲೀಸರು ನೀಡಿದ್ದಾರೆ. ಬದಲಿಯಾಗಿ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನು ವಾಹನಗಳ ಮಾಲೀಕರು ಬಳಸಬಹುದಾಗಿದೆ.

ಆದೇಶದ ಪ್ರತಿ (ETV Bharat)

ಇದನ್ನೂ ಓದಿ:ರಸ್ತೆ ಬದಿ ನಿಲ್ಲಿಸಿದ ನಿರುಪಯುಕ್ತ ವಾಹನಗಳ ಜಪ್ತಿ: ಸರ್ಕಾರದ ಎಚ್ಚರಿಕೆ - Seizure Of Unused Vehicles

ಪ್ರತಿ ಗಂಟೆಗೆ ವಾಹನ ನಿಲುಗಡೆಗೆ 20-30 ರೂ. ನಿಗದಿ ಮಾಡಲಾಗಿದೆ. ನಗರದ ಯಾವುದೇ ಭಾಗದಿಂದ ಜನರು ತಮ್ಮ ವಾಹನದಲ್ಲಿ ಬಂದರೂ ಪಾರ್ಕಿಂಗ್ ನಂತರ ವಿಧಾನಸೌಧ, ಹೈಕೋರ್ಟ್, ರೈಲ್ವೇ ನಿಲ್ದಾಣ ಸೇರಿದಂತೆ ಗಾಂಧಿ ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗಲು ಉಚಿತ ಸಂಚಾರ ವ್ಯವಸ್ಥೆಯನ್ನು ಗುತ್ತಿಗೆದಾರರೇ ಮಾಡುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಫ್ರೀಡಂ ಪಾರ್ಕ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ: ಇಲ್ಲಿದೆ ಉಚಿತ ಡ್ರಾಪ್, ಪಿಕ್​ಅಪ್ ಸೌಲಭ್ಯ - Advanced Parking Facility

ABOUT THE AUTHOR

...view details