ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಿಂದ ಸಂಚರಿಸುವ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಳ - VANDE BHARAT TRAINS

ಧಾರವಾಡ-ಬೆಂಗಳೂರು ಹಾಗೂ ಹುಬ್ಬಳ್ಳಿ-ಪುಣೆ ನಡುವೆ ಸಂಚರಿಸುವ ವಂದೇ ಭಾರತ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಈ ಕುರಿತು ನಮ್ಮ ಹುಬ್ಬಳ್ಳಿ ಪ್ರತಿನಿಧಿ ಹೆಚ್​​ ಬಿ ಗಡ್ಡದ ನೀಡಿರುವ ವಿಶೇಷ ವರದಿ ಇಲ್ಲಿದೆ

vande-bharat-train
ವಂದೇ ಭಾರತ್ ರೈಲು (ETV Bharat)

By ETV Bharat Karnataka Team

Published : Feb 3, 2025, 9:52 PM IST

ಹುಬ್ಬಳ್ಳಿ:ಕಡಿಮೆ ಸಮಯದಲ್ಲಿ ಪ್ರಯಾಣಿಸಲು ಅನುವಾಗುವಂತೆ ಭಾರತೀಯ ರೈಲ್ವೆ, ವಂದೇ ಭಾರತ್ ಎಂಬ ವೇಗದ ರೈಲುಗಳನ್ನು ಪರಿಚಯಿಸಿದೆ. ವಾಣಿಜ್ಯ ‌ನಗರಿ ಹುಬ್ಬಳ್ಳಿ-ಧಾರವಾಡ ನಡುವೆ ಎರಡು ವಂದೇ ಭಾರತ್ ರೈಲುಗಳು‌ ಸಂಚಾರ ನಡೆಸುತ್ತಿದ್ದು, ಎರಡೂ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಧಾರವಾಡ-ಬೆಂಗಳೂರು ಹಾಗೂ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ದಿನದಿನಕ್ಕೆ ‌ಪ್ರಯಾಣಿಕರು ವಂದೇ ಭಾರತ್‌ದತ್ತ ಒಲವು ತೋರುತ್ತಿದ್ದು, ಶೇ.85ರಿಂದ ಶೇ.100ರಷ್ಟು ಸೀಟುಗಳು ಭರ್ತಿಯಾಗಿ ಉತ್ತಮ ಆದಾಯ ಬರುತ್ತಿದೆ.

ಹುಬ್ಬಳ್ಳಿಯಿಂದ ಸಂಚರಿಸುವ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಳ (ETV Bharat)

ಈ ಕುರಿತು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ‌ಅಧಿಕಾರಿ ಡಾ.ಮಂಜುನಾಥ ಕನಮಡಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, ''ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಇದರಲ್ಲಿ ನೈರುತ್ಯ ರೈಲ್ವೆಯ 8 ವಂದೇ ಭಾರತ ರೈಲುಗಳಿದ್ದು, ಹುಬ್ಬಳ್ಳಿಯಿಂದ ಎರಡು ವಂದೇ ಭಾರತ್ ರೈಲು ಸಂಚಾರ ಮಾಡುತ್ತಿವೆ. ಧಾರವಾಡ-ಬೆಂಗಳೂರು, ಹುಬ್ಬಳ್ಳಿ-ಪುಣೆಗೆ ರೈಲುಗಳಿವೆ‌‌‌. ಇವುಗಳಲ್ಲಿ ಧಾರವಾಡ-ಬೆಂಗಳೂರು ನಡುವೆ ಒಂದೂವರೆ ವರ್ಷದಿಂದ ರೈಲುಗಳು ಸಂಚಾರ ನಡೆಸುತ್ತಿದ್ದು, ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಸುಮಾರು 23 ಕೋಟಿ ಆದಾಯ ಗಳಿಸಿದೆ. ಇದರಲ್ಲಿ 2,25,000 ಜನ ಪ್ರಯಾಣ ಬೆಳೆಸಿದ್ದಾರೆ. ಧಾರವಾಡ-ಬೆಂಗಳೂರು ಶೇ.88ರಷ್ಟಿದ್ದು, ಬೆಂಗಳೂರು -ಧಾರವಾಡ ಶೇ.84ರಷ್ಟು ಸೀಟುಗಳು ಭರ್ತಿಯಾಗಿವೆ‌. ವಾರಂತ್ಯ ಸೇರಿ ಎರಡೂ ಕಡೆಯಿಂದಲೂ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ'' ಎಂದು ಮಾಹಿತಿ ನೀಡಿದರು.

ಹುಬ್ಬಳ್ಳಿ-ಪುಣೆ ವಂದೇ ಭಾರತ ರೈಲು ಸೇವೆಯಿಂದ ನೈರುತ್ಯ ರೈಲ್ವೆಯು ಕಳೆದ ನಾಲ್ಕು ತಿಂಗಳಲ್ಲಿ 4.5 ಕೋಟಿ ರೂ ಆದಾಯ ಗಳಿಸಿದೆ. ಇಲ್ಲಿಯವರೆಗೂ 34 ಸಾವಿರ ಜನ ಪ್ರಯಾಣಿಸಿದ್ದಾರೆ. ಹುಬ್ಬಳ್ಳಿ-ಪುಣೆ ಒಂದು ಕಡೆಯಿಂದ ಶೇ.76ರಷ್ಟು ಸೀಟುಗಳು ಭರ್ತಿಯಾಗಿವೆ. ಅದೇ ರೀತಿ ‌ಪುಣೆ-ಹುಬ್ಬಳ್ಳಿ ಶೇ.82ರಷ್ಟು ಸೀಟು ಭರ್ತಿಯಾಗಿವೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಶೇ.88ರಷ್ಟು ಸೀಟು ಭರ್ತಿಯಾಗುವ ಮೂಲಕ ಕಳೆದ 4 ತಿಂಗಳಲ್ಲಿ ಅತೀ ಹೆಚ್ಚು ಪ್ರಯಾಣಿಕರು‌ ಸಂಚಾರ ನಡೆಸಿದ್ದಾರೆ ಎಂದರು.

ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಸೆಪ್ಟೆಂಬರ್ ‌ತಿಂಗಳಲ್ಲಿ ಆರಂಭವಾಗಿದ್ದು, ತಿಂಗಳಿಂದ ತಿಂಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ತಿಂಗಳಾಂತ್ಯದಲ್ಲಿ ಅತೀ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಕೆಲವೊಮ್ಮೆ ಹುಬ್ಬಳ್ಳಿ-ಬೆಂಗಳೂರು ಶೇ‌.100‌ರ ಗಡಿ ದಾಟಿದೆ ಎಂದು ಮಾಹಿತಿ ನೀಡಿದರು.

ಧಾರವಾಡ- ಬೆಂಗಳೂರು
ತಿಂಗಳುವಾರು ಟ್ರಿಪ್ ಅಕ್ಟೋಬರ್-26 ಟ್ರಿಪ್
ಒಟ್ಟು ಸೀಟು 13780
ಸೀಟು ಭರ್ತಿ 12068
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 87.57
ಬೆಂಗಳೂರು-ಧಾರವಾಡ
ತಿಂಗಳುವಾರು ಟ್ರಿಪ್ ನವೆಂಬರ್ 26 ಟ್ರಿಪ್
ಒಟ್ಟು ಸೀಟು 13780
ಭರ್ತಿಯಾದ ಸೀಟು 12607
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 91.48
ಧಾರವಾಡ- ಬೆಂಗಳೂರು
ತಿಂಗಳುವಾರು ಟ್ರಿಪ್ 26 ಟ್ರಿಪ್
ಒಟ್ಟು ಸೀಟು 13780
ಭರ್ತಿಯಾದ ಸೀಟು 13197
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 95.76
ಬೆಂಗಳೂರು-ಧಾರವಾಡ
ತಿಂಗಳುವಾರು ಟ್ರಿಪ್ ಡಿಸೆಂಬರ್ 26 ಟ್ರಿಪ್
ಒಟ್ಟು ಸೀಟು 13780
ಭರ್ತಿಯಾದ ಸೀಟು 13781
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 100
ಧಾರವಾಡ - ಬೆಂಗಳೂರು
ತಿಂಗಳುವಾರು ಟ್ರಿಪ್ ಡಿಸೆಂಬರ್ -26 ಟ್ರಿಪ್
ಒಟ್ಟು ಸೀಟು 13780
ಭರ್ತಿಯಾದ ಸೀಟು 13325
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 96.79
ಹುಬ್ಬಳ್ಳಿ-ಪುಣೆ
ತಿಂಗಳುವಾರು ಟ್ರಿಪ್ ಅಕ್ಟೋಬರ್‌ - ಟ್ರಿಪ್ 13
ಒಟ್ಟು ಸೀಟು 6890
ಭರ್ತಿಯಾದ ಸೀಟು 4479
ಆದಾಯ ₹ 50,86,301
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 65
ಪುಣೆ-ಹುಬ್ಬಳ್ಳಿ
ತಿಂಗಳುವಾರು ಟ್ರಿಪ್ 13 ಟ್ರಿಪ್
ಒಟ್ಟು ಸೀಟು 6890
ಭರ್ತಿಯಾದ ಸೀಟು 5755
ಆದಾಯ ₹11,44,283
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 83.87
ಹುಬ್ಬಳ್ಳಿ-ಪುಣೆ
ಟ್ರಿಪ್ 13 ಟ್ರಿಪ್
ಒಟ್ಟು ಸೀಟು 6890
ಭರ್ತಿಯಾದ ಸೀಟು 5839
ಆದಾಯ ₹ 65,95,414
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 84.74
ಪುಣೆ - ಹುಬ್ಬಳ್ಳಿ
ಟ್ರಿಪ್ 13 ಟ್ರಿಪ್
ಭರ್ತಿಯಾದ ಸೀಟು 6174
ಒಟ್ಟು ಸೀಟು 6890
ಆದಾಯ ₹67,04,680
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 89.90
ಹುಬ್ಬಳ್ಳಿ-ಪುಣೆ
ಟ್ರಿಪ್ 13 ಟ್ರಿಪ್
ಒಟ್ಟು ಸೀಟು 6890
ಭರ್ತಿಯಾದ ಸೀಟು 6050
ಆದಾಯ ₹ 67,74,263
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 87.86
ಪುಣೆ-ಹುಬ್ಬಳ್ಳಿ
ಟ್ರಿಪ್ 13
ಒಟ್ಟು ಸೀಟು 6890
ಭರ್ತಿಯಾದ ಸೀಟು 6752
ಆದಾಯ ₹75,09,738
ಪ್ರಯಾಣಿಕರ ಶೇಕಡಾವಾರು ಫಲಿತಾಂಶ 97.99

ಇದನ್ನೂ ಓದಿ:ಮಹಾಕುಂಭ ಮೇಳಕ್ಕೆ ತೆರಳುವವರಿಗೆ ಗುಡ್ ನ್ಯೂಸ್: ಮೈಸೂರು-ವಾರಾಣಸಿ ಎಕ್ಸ್​​ಪ್ರೆಸ್‌ ರೈಲಿಗೆ ಹೆಚ್ಚುವರಿ ಬೋಗಿ - MYSURU VARANASI EXPRESS TRAIN

ABOUT THE AUTHOR

...view details