ಕರ್ನಾಟಕ

karnataka

ETV Bharat / state

ರೈಲ್ವೆ ಅಂಡರ್ ಪಾಸ್​ ಬ್ರಿಡ್ಜ್​ಗೆ ಲಾರಿ ಡಿಕ್ಕಿ: ಎರಡು ಗಂಟೆ ತಡವಾಗಿ ರೈಲುಗಳ ಸಂಚಾರ, ಕಾದು ಕಾದು ಸುಸ್ತಾದ ಜನ - Delayed train service - DELAYED TRAIN SERVICE

ಭದ್ರಾವತಿಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಎದುರಿನ ಅಂಡರ್​ ಬ್ರಿಡ್ಜ್​ಗೆ ಲಾರಿ ಡಿಕ್ಕಿ ಹೊಡೆದು, ರೈಲ್ವೆ ಹಳಿಗಳಲ್ಲಿ ವ್ಯತ್ಯಾಸ ಉಂಟಾದ ಘಟನೆ ನಡೆದಿದೆ.

ರೈಲ್ವೆ ಅಂಡರ್ ಪಾಸ್​ ಬ್ರಿಡ್ಜ್​ಗೆ ಲಾರಿ ಡಿಕ್ಕಿ
ರೈಲ್ವೆ ಅಂಡರ್ ಪಾಸ್​ ಬ್ರಿಡ್ಜ್​ಗೆ ಲಾರಿ ಡಿಕ್ಕಿ

By ETV Bharat Karnataka Team

Published : Apr 18, 2024, 12:15 PM IST

ಶಿವಮೊಗ್ಗ:ರೈಲ್ವೆ ಅಂಡರ್​ ಪಾಸ್​ ಬ್ರಿಡ್ಜ್​ಗೆ ಲಾರಿಯೊಂದು ಡಿಕ್ಕಿ ಹೊಡೆದು ರೈಲ್ವೇ ಹಳಿಗಳು ಅಂಕುಕೊಂಡಾದ ಘಟನೆ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

ಭದ್ರಾವತಿಯ ಕೆ.ಎಸ್.ಆರ್.ಟಿ.ಸಿ ಬಸ್​ ನಿಲ್ದಾಣದ ಎದುರಿನ ಅಂಡರ್​ ಬ್ರಿಡ್ಜ್​ಗೆ ಬೆಳಗಿನ ಜಾವ ಲಾರಿಯೊಂದು ಡಿಕ್ಕಿ‌ ಹೊಡೆದಿದೆ. ಇದರಿಂದ ಬ್ರಿಡ್ಜ್​ನಲ್ಲಿದ್ದ ರೈಲ್ವೆ ಹಳಿಗಳು ಅಂಕುಡೊಂಕಾಗಿ ತಾಂತ್ರಿಕ ದೋಷ ಉಂಟಾಗಿವೆ. ರೈಲ್ವೆ ಸಿಬ್ಬಂದಿ ತಕ್ಷಣ ಹಳಿ ಸರಿ ಮಾಡುವ ಕೆಲಸಕ್ಕೆ ಮುಂದಾಗಿದ್ದು, ಶಿವಮೊಗ್ಗ–ಭದ್ರಾವತಿ ನಡುವೆ ರೈಲು ಸಂಚಾರ ರದ್ದುಗೊಳಿಸಿದ್ದರು.

ಕಾದು ಕಾದು ಹೈರಾಣಾದ ಪ್ರಯಾಣಿಕರು:ಹಳಿ ರಿಪೇರಿ ಕಾರ್ಯದ ಹಿನ್ನೆಲೆ ಎರಡು ರೈಲುಗಳು ವಿಳಂಬವಾಗಿ ಸಂಚಾರ ನಡೆಸಿದವು. ಬೆಳಗ್ಗೆ 4.45ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 6.45ಕ್ಕೆ ತಲುಪಿದೆ. ಅಲ್ಲಿಯವರೆಗೂ ಈ ರೈಲು ಭದ್ರಾವತಿ ನಿಲ್ದಾಣದಲ್ಲಿ ನಿಂತಿತ್ತು. ಇನ್ನು, ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ಬೆಂಗಳೂರು ಜನಶತಾಬ್ದಿ ರೈಲು ಸುಮಾರು ಬೆಳಗ್ಗೆ 6.35ಕ್ಕೆ ಹೊರಟಿದೆ. ವಿಳಂಬಕ್ಕೆ ಕಾರಣ ಗೊತ್ತಾಗದೇ ಪ್ರಯಾಣಿಕರು ಕಾದು ಕಾದು ಸುಸ್ತಾದರು.

ಇದನ್ನೂ ಓದಿ:ದುಬೈನಲ್ಲಿ ಮಳೆ ಅಬ್ಬರ: ಮಂಗಳೂರು ಸೇರಿ ವಿವಿಧೆಡೆಗಳಿಂದ ತೆರಳುವ ವಿಮಾನಗಳು ರದ್ದು - Rain in Dubai

ABOUT THE AUTHOR

...view details