ಮೈಸೂರು :ಈ ಬಾರಿ ನಿಮಗೆ ಟಿಕೆಟ್ ಸಿಗಲಿದೆಯೇ ಎಂಬ ಈ ಟಿವಿ ಭಾರತ್ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ, ಮೀಡಿಯಾದವರು ಇನ್ನೂ ಒಂದು ನಾಲ್ಕೈದು ದಿನ ಇದೇ ತರಹ ಕೆಲಸ ಮಾಡುತ್ತಾ ಇರಿ. ನಾಮಿನೇಷನ್ ಫೈಲ್ ಮಾಡುವಾಗ ಎಲ್ಲರನ್ನೂ ಕರೆಯುತ್ತೇನೆ ಎಂದಿದ್ದಾರೆ. ಈ ಬಾರಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ನಾಮಿನೇಷನ್ ಸಲ್ಲಿಸುತ್ತೇನೆ, ಹ್ಯಾಟ್ರಿಕ್ ಗೆಲುವು ಸಾಧಿಸುತ್ತೇನೆ ಎಂದು ಸಂದರ್ಶನದಲ್ಲಿ ಅವರು ವಿವರಿಸಿದರು.
ಕೇವಲ 10 ವರ್ಷಗಳಲ್ಲಿ ಮಾಡಿದ ಸಾಧನೆಗಳ ಬಗ್ಗೆ ಮಾತ್ರ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದಿರುವ ಅವರು, ಕ್ಷೇತ್ರದಲ್ಲಿ ಎಲ್ಲ ಅಭಿವೃದ್ಧಿ ಕೆಲಸವನ್ನು ಮಾಡಲಾಗಿದೆ. ಇನ್ಯಾವ ಅಭಿವೃದ್ಧಿ ಕೆಲಸವೂ ಬಾಕಿ ಇಲ್ಲ. ಬಾಕಿ ಇದ್ದರೆ ನೀವೇ ಹೇಳಿ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಹತ್ತು ವರ್ಷಗಳಲ್ಲಿ ಸಂಸದ ಪ್ರತಾಪ್ ಸಿಂಹ ಮಾಡಿದ ಅಭಿವೃದ್ಧಿ ಕೆಲಸಗಳು: ಬೆಂಗಳೂರು - ಮೈಸೂರು ಹೈವೇ, ಮೈಸೂರು-ಕುಶಾಲನಗರ ಹೈವೇ, ರಿಂಗ್ ರೋಡ್ಗೆ ಲೈಟ್ ಹಾಕಿಸಿದ್ದು, ಏರ್ಪೋರ್ಟ್ ಅನ್ನು ಫಂಕ್ಷನಲ್ ಆಗಿ ಮಾಡಿದ್ದು, ಮತ್ತು ಏರ್ಪೋರ್ಟ್ನ ಎಕ್ಸ್ಸೆಪ್ಷನಲ್ ಮಾಡಿದ್ದು, 390 ಕೋಟಿ ವೆಚ್ಚದಲ್ಲಿ ಲ್ಯಾಂಡ್ ಅಕ್ವಿಸಿಷನ್, 1 ಸಾವಿರ ಕೋಟಿಯನ್ನ ಅದಕ್ಕೆ ಇನ್ವೆಸ್ಟ್ ಮಾಡಿದ್ದೇವೆ. ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ನಿರ್ಮಾಣ, 12 ಹೊಸ ಟ್ರೈನ್ಗಳನ್ನು ತಂದಿದ್ದೇನೆ. ಅಶೋಕ ಪುರಂ ರೈಲ್ವೆ ನಿಲ್ದಾಣವನ್ನು ಎರಡನೇ ರೈಲ್ವೆ ನಿಲ್ದಾಣವಾಗಿ ಡೆವಲಪ್ ಮಾಡುತ್ತಿದ್ದೇವೆ. ಟಿಪ್ಪು ಅರಮನೆ ಶಿಫ್ಟ್ ಮಾಡಿಸಿದ್ದೇವೆ.