ಕರ್ನಾಟಕ

karnataka

ETV Bharat / state

ದಾವಣಗೆರೆ: ಗ್ಯಾಸ್​ ಕಟರ್​ ಬಳಸಿ 12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು; ಸಾಕ್ಷಿ ನಾಶಕ್ಕೆ ಕಳ್ಳರ ಖತರ್ನಾಕ್​ ಪ್ಲಾನ್​ - GOLD THEFT

ನ್ಯಾಮತಿ ಎಸ್​ಬಿಐ ಬ್ಯಾಂಕ್​ ಶಾಖೆಗೆ ಕನ್ನ ಹಾಕಿದ್ದ ಖದೀಮರು 12.95 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

GOLD THEFT
ಚಿನ್ನಾಭರಣ ಕಳವು (ETV Bharat)

By ETV Bharat Karnataka Team

Published : Oct 29, 2024, 12:52 PM IST

Updated : Oct 29, 2024, 1:21 PM IST

ದಾವಣಗೆರೆ:ಇಷ್ಟು ದಿನಗಳ ಕಾಲ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಕಳ್ಳರು, ಇದೀಗ ಬ್ಯಾಂಕ್ ಗಳಿಗೆ ಕನ್ನ ಹಾಕುವ ಕೃತ್ಯಕ್ಕೆ ಇಳಿದಿದ್ದಾರೆ. ನಮ್ಮ ಚಿನ್ನಾಭರಣ ಹಣ, ಬ್ಯಾಂಕ್ ಅಲ್ಲಿ ಇರಿಸಿದ್ರು ಸೇಫ್ ಅಲ್ವಾ ಎಂದು ಜನಸಾಮಾನ್ಯರು ಚಿಂತಿಸುವಂತೆ ಆಗಿದೆ‌ ಜಿಲ್ಲೆಯ ನ್ಯಾಮತಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗೆ ಮೂರು ದಿನಗಳ ಹಿಂದೆ ನುಗ್ಗಿದ್ದ ದುಷ್ಕರ್ಮಿಗಳು ಬ್ಯಾಂಕ್ ನ್ನೇ ಲೂಟಿ ಮಾಡಿರುವ ಘಟನೆ ನಡೆದಿತ್ತು. ಅಲ್ಲದೆ ಕಿಟಕಿಯ ಸರಳು ಕಟ್ ಮಾಡಿದ ಖತರ್ನಾಕ್ ಕಳ್ಳರು ಬರೋಬ್ಬರಿ 12.95 ಕೋಟಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ನ್ಯಾಮತಿ ಪಟ್ಟಣದಲ್ಲಿ ನಡೆದಂತಹ ಬ್ಯಾಂಕ್ ಕಳ್ಳತನ ಪ್ರಕರಣ ಸಾಕಷ್ಟು ಸದ್ದು ಮಾಡ್ತಿದೆ. ಅಯ್ಯೋ ನಾವು ಬ್ಯಾಂಕ್ ಲ್ಲಿ ಇರಿಸಿದ್ದ ಬಂಗಾರ, ಹಣ ಹೋಯ್ತಲ್ಲ ಎಂದು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಅಲ್ಲದೆ ಬ್ಯಾಂಕ್ ಗೆ ಕಳ್ಳರು ಕನ್ನ ಹಾಕಿದ್ದಾರೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ಗ್ರಾಹಕರೆಲ್ಲರೂ ಬ್ಯಾಂಕ್ ಬಳಿ ಜಮಾಯಿಸಿದ್ದರು. ಪೊಲೀಸರು ಕೂಡ ಗ್ರಾಹಕರಿಗೆ ತಿಳಿಹೇಳಿ ವಾಪಸ್ ಕಳಿಸಿದ್ದರು. ಇನ್ನು ಈ ಕಳ್ಳತನ ಪ್ರಕರಣದಲ್ಲಿ ಒಟ್ಟು 12.95 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಈ ಕೃತ್ಯವನ್ನು ಅ. 25 ಅಥವಾ 26ರ ತಡರಾತ್ರಿ ಎಸಗಿರುವ ಶಂಕೆ ಇದೆ ಎಂದು ನ್ಯಾಮತಿ ಪೊಲೀಸರು ಹೇಳಿದ್ದಾರೆ.

12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು; ಎಸ್​ ಪಿ ಮಾಹಿತಿ ​ (ETV Bharat)

ನ್ಯಾಮತಿ ಪಟ್ಟಣದ ನೆಹರೂ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶಾಖೆಯ ಎಡಭಾಗದ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು, ಮೊದಲ ಲಾಕರ್‌ನಲ್ಲಿದ್ದ ಒಟ್ಟು12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ಸುನೀಲ್ ಕುಮಾರ್ ಯಾದವ್ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ‌ಈ ಘಟನೆ ಸೋಮವಾರ ಬೆಳಗ್ಗೆ ಸಿಬ್ಬಂದಿ ಬ್ಯಾಂಕ್ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ತೆಗೆದಿರುವ ಖದೀಮರು; ಒಂದಲ್ಲ, ಎರಡಲ್ಲ ಬರೋಬ್ಬರಿ 12.95 ಕೋಟಿ ಮೌಲ್ಯದ ಚಿನ್ನಾಭರಣವನ್ನು ಖದೀಮರು ದೋಚಿರುವುದು ಪೊಲೀಸರಿಗೆ ತಲೆಬಿಸಿಯಾಗಿ ಪರಿಣಮಿಸಿದೆ. ಇಷ್ಟೆಲ್ಲ ಕೃತ್ಯ ಎಸಗಲು ಕಳ್ಳರು ಬ್ಯಾಂಕ್ ಕಿಟಕಿಯ ಮೂಲಕ ಒಳಗೆ ಪ್ರವೇಶ ಮಾಡಿದ್ದು, ಗ್ಯಾಸ್ ಕಟರ್ ಸಹಾಯದಿಂದ ಭದ್ರತಾ ಕೋಣೆಯ ಬಾಗಿಲು ಮುರಿದಿದ್ದಾರೆ. ಬಳಿಕ ಬ್ಯಾಂಕ್ ನ ಮೂರು ಸೇಫ್ ಲಾಕರ್​ಗಳ ಪೈಕಿ ಚಿನ್ನಾಭರಣ ಇದ್ದ ಒಂದು ಲಾಕರ್ ನ್ನೇ ಗ್ಯಾಸ್ ಕಟರ್ ನಿಂದ ಮುರಿದು 12.95 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಇನ್ನೆರಡು ಲಾಕರ್ ಮುರಿಯುವ ಪ್ರಯತ್ನ ಫಲ ನೀಡದೆ ಇದ್ದಾಗ ಅ ಎರಡು ಲಾಕರ್​ನಲ್ಲಿದ್ದ 30 ಲಕ್ಷ ಹಣ ಹಾಗೂ ಚಿನ್ನಾಭರಣ ಸೇಫ್ ಆಗಿದೆ ಎಂದು ಎಫ್ಐಆರ್ ಅಲ್ಲಿ ಉಲ್ಲೇಖಿಸಲಾಗಿದೆ.‌

ಗ್ಯಾಸ್​ ಕಟರ್​ ಬಳಸಿ 12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು (ETV Bharat)
ಸಿ.ಸಿ.ಟಿವಿ ಕ್ಯಾಮರಾದ ಡಿವಿಆರ್‌ ಕೂಡ ಹೊತ್ತೊಯ್ದ ಕಳ್ಳರು; ಚಿನ್ನಾಭರಣದ ಜೊತೆಜೊತೆಗೆ ಕಳ್ಳರು ಬ್ಯಾಂಕ್‌ನಲ್ಲಿದ್ದ ಸಿ.ಸಿ. ಟಿವಿ ಕ್ಯಾಮರಾದ ಡಿವಿಆರ್‌ ಕೂಡ ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನ ಬ್ಯಾಂಕ್‌ಗೆ ರಜೆ ಇದ್ದ ಕಾರಣ ವಾರಾಂತ್ಯದಲ್ಲೇ ಕೃತ್ಯವೆಸಗಿದ್ದಾರೆ. ಬ್ಯಾಂಕ್‌ ಒಳಗೆ ನುಗ್ಗಿದ ತಕ್ಷಣ ಸಿ.ಸಿ.ಟಿ.ವಿ, ಸೈರನ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಅಂದಾಜು 30 ಲಕ್ಷ ಹಣ ಹಾಗೂ ಚಿನ್ನಾಭರಣ ಇದ್ದ ಇನ್ನೆರಡು ಲಾಕರ್‌ಗಳನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ. ಗ್ಯಾಸ್‌ ಖಾಲಿಯಾಗಿ ಅಥವಾ ಸಮಯ ಮೀರಿದ್ದರಿಂದ ಪರಾರಿಯಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು; ಗ್ರಾಹಕರು ಕಂಗಾಲು (ETV Bharat)
ಸಾಕ್ಷಿ ಸುಳಿವು ಸಿಗಬಾರದೆಂದು ಖಾರದ ಪುಡಿ ಎರಚಿದ ದುಷ್ಕರ್ಮಿಗಳು; ದುಷ್ಕರ್ಮಿಗಳು ಈ ಕೃತ್ಯ ಎಸಗಿದ ಬಳಿಕ ಯಾವುದೇ ಸಾಕ್ಷಿ ಸಿಗದಂತೆ, ಬ್ಯಾಂಕ್ ತುಂಬಾ ಖಾರದ ಪುಡಿ ಎರಚಿದ್ದಾರೆ. ಶ್ವಾನದಳಕ್ಕೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಈ ತಂತ್ರ ಅನುಸರಿಸಿದ್ದಾರೆ. ಬೆರಳಚ್ಚು ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಕ್ಕೆ ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶ್ವಾನದಳ ಸವಳಂಗ ರಸ್ತೆಯ ಸಾಲಬಾಳು ಗ್ರಾಮದವರೆಗೆ ತೆರಳಿವೆ. ಇದೇ ಮಾರ್ಗದಲ್ಲಿ ದುಷ್ಕರ್ಮಿಗಳು ಪರಾರಿಯಾಗಿರುವ ಸಾಧ್ಯತೆ ಇದೆ ಶಂಕೆ ಪೊಲೀಸರಿಗೆ ಮೂಡಿದೆ.

ಪೂರ್ವ ವಲಯದ ಡಿಐಜಿ, ಎಸ್ಪಿ ಭೇಟಿ ಪರಿಶೀಲನೆ; ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು ಪೂರ್ವ ವಲಯದ ಡಿಐಜಿ ಬಿ.ರಮೇಶ್‌, ಹಾಗು ಎಸ್ಪಿ ಉಮಾಪ್ರಶಾಂತ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. "ಬ್ಯಾಂಕ್‌ಗೆ ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಿಲ್ಲ. ಹಳೆಯ ಕಾಲದ ಸೈರನ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಬ್ಯಾಂಕ್‌ ಭದ್ರತಾ ಲೋಪದಿಂದ ಇದು ನಡೆದಿದೆ. ಪ್ರಕರಣದ ತನಿಖೆಗೆ ಐವರು ಪೊಲೀಸ್‌ ಇನ್‌ಸ್ಟೆಕ್ಟರ್‌ಗಳ ನೇತೃತ್ವದ 5 ತಂಡಗಳನ್ನು ರಚಿಸಲಾಗಿದೆ. 10 ಜನ ಪಿಎಸ್‌ಐಗಳು ಸೇರಿ ಹಲವು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ತನಿಖೆ ಆರಂಭವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಕಿಟಕಿ ಸರಳು ಮುರಿದು ಎಸ್​ಬಿಐ ಬ್ಯಾಂಕ್​ಗೆ ಕನ್ನ, ನಗದು-ಚಿನ್ನಾಭರಣ ಕದ್ದೊಯ್ದ ಕಳ್ಳರು

Last Updated : Oct 29, 2024, 1:21 PM IST

ABOUT THE AUTHOR

...view details