ಹಾವೇರಿ:"ನಮ್ಮ ನಾಯಕರ ಸೀಡಿ ಇದೆ ಎಂದು ಅವರು, ಅವರ ನಾಯಕರ ಸೀಡಿ ಇದೆ ಎಂದು ನಮ್ಮವರು ಬ್ಲ್ಯಾಕ್ಮೇಲ್ ಮಾಡಿದರೆ ರಾಜಕಾರಣಕ್ಕೆ ಅರ್ಥವಿದೆಯೇ?. ಈ ರೀತಿಯ ಹೇಳಿಕೆಗಳಿಗೆ ಮಾಧ್ಯಮದವರು ಅತಿದೊಡ್ಡ ಪ್ರಚಾರ ನೀಡುತ್ತಿರುವುದು ನಮ್ಮ ದೇಶದ ಪ್ರಜಾಪ್ರಭುತ್ವದ ದುರ್ದೈವ" ಎಂದು ಸಚಿವ ಹೆಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಂಗಳವಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಮಾತನಾಡಿದರು.
"ಎಸ್‌ಐಟಿ ತನಿಖೆಯ ಬಗ್ಗೆ ಅಪಸ್ವರ ಎತ್ತುತ್ತಿರುವ ಜೆಡಿಎಸ್ ಪಕ್ಷ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೇಕೆ?. ಈ ಪ್ರಕರಣದ ನಂತರ ಬಿಜೆಪಿ ನಾಯಕರು ಜೆಡಿಎಸ್‌ನಿಂದ ಏಕೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ?. ಎಸ್ಐಟಿ ಮೇಲೆ ನಂಬಿಕೆ ಇಲ್ಲದವರು ಪ್ರಜ್ವಲ್ ರೇವಣ್ಣರನ್ನು ಯಾಕೆ ಪಕ್ಷದಿಂದ ಉಚ್ಛಾಟಿಸಿದ್ದೀರಿ?. ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು" ಎಂದು ಟೀಕಿಸಿದರು.