ಕರ್ನಾಟಕ

karnataka

ETV Bharat / state

ಒಡಿಶಾದಿಂದ ಹರಿಹರಕ್ಕೆ ಗಾಂಜಾ ಸಾಗಾಟ: 10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಅರೆಸ್ಟ್​ - Marijuana smuggling case - MARIJUANA SMUGGLING CASE

ಒಡಿಶಾದಿಂದ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ 10 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.

Odisha  Marijuana smuggling case  Police seize marijuana
ಒಡಿಶಾದಿಂದ ಹರಿಹರಕ್ಕೆ ಗಾಂಜಾ ಸಾಗಾಟ: 10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಅರೆಸ್ಟ್​ (ETV Bharat)

By ETV Bharat Karnataka Team

Published : Aug 10, 2024, 12:43 PM IST

ದಾವಣಗೆರೆ:ಒಡಿಶಾ ರಾಜ್ಯದಿಂದ ಹರಿಹರಕ್ಕೆ ಗಾಂಜಾ ಸಾಗಾಟ ಮಾಡಿ ಮಾರಾಟಕ್ಕಾಗಿ ದಾಸ್ತಾನು ಮಾಡಿದ್ದ ಸ್ಥಳದ ಮೇಲೆ ಹರಿಹರ ಪೊಲೀಸರು ದಾಳಿ ನಡೆಸಿ 10 ಲಕ್ಷ ರೂ. ಮೌಲ್ಯದ ಗಾಂಜಾ ವಶ ಪಡಿಸಿಕೊಂಡು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

ಹರಿಹರ ನಗರದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು, ಈ ಸಂದರ್ಭದಲ್ಲಿ ಮಾದಕ ವ್ಯಸನಿಗಳಿಗೆ ಸಿಗುತ್ತಿದ್ದ ಗಾಂಜಾದ ಮೂಲವನ್ನು ಬೆನ್ನು ಹತ್ತಿದ್ದರು. ಒಡಿಶಾ ರಾಜ್ಯದಿಂದ ಹರಿಹರಕ್ಕೆ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಹರಿಹರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ದಾಸ್ತಾನು ಮಾಡಿದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.

ಒಡಿಶಾ ರಾಜ್ಯ ಮೂಲದ ಕೇಸಬಾ ಮೊಹಂತಿ (24), ಸುಮಂತ ಸಾಹು(25) ಹಾಗೂ ಹರಿಹರದ ಸೈಯದ್ ಸಾದಿಕ್ (27) ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 10 ಲಕ್ಷ ರೂಪಾಯಿ ಮೌಲ್ಯದ 10 ಕೆ.ಜಿ. ಗಾಂಜಾವನ್ನು ಹಾಗೂ ಒಂದು ಬೈಕ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಶಕ್ಕೆ ಪಡೆದಿರುವ ಕೇಸಬಾ ಮೊಹಂತಿ (24), ಸುಮಂತ ಸಾಹು(25) ಈ ಇಬ್ಬರು ಆರೋಪಿಗಳು ಒಡಿಶಾ ರಾಜ್ಯದ ಮೂಲದವರಾಗಿದ್ದು, ಇವರಿಬ್ಬರು ಹರಿಹರ ರೈಲ್ವೆ ನಿಲ್ಧಾಣದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೈಲ್ವೆ ಹಳಿ ಕಾಮಗಾರಿಯ ಕಾಂಕ್ರಿಟ್ ಕೆಲಸ ಮಾಡಲು ಬಂದಿದ್ದರು. 10 ಕೆಜಿ ಗಾಂಜಾವನ್ನು ಒಡಿಶಾ ರಾಜ್ಯದಿಂದ ತಂದು ಹರಿಹರದಲ್ಲಿ ಮರಾಟ ಮಾಡುತ್ತಿದ್ದರು ಎಂದು ಪೊಲೀಸರು ತನಿಖೆ ವೇಳೆ ತಿಳಿದಿದೆ. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್​ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಉಮಾಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆಳಗಾವಿ: ಬೊಲೆರೋ-ಕಾರು ಅಪಘಾತದಲ್ಲಿ ಇಬ್ಬರು ಸಾವು; ಲಾರಿ ಡಿಕ್ಕಿಯಾಗಿ ಆಟೋ ಚಾಲಕ ಮೃತ - Belagavi Accidents

ABOUT THE AUTHOR

...view details