ಕರ್ನಾಟಕ

karnataka

ETV Bharat / state

ಮನೆಯವರು ನೋಡ ನೋಡುತ್ತಿದ್ದಂತೆ ಕುಸಿದ ಗುಡ್ಡ; ಪತಿ ಸಾವು, ಅವಘಡದಿಂದ ಪಾರಾದ ಪತ್ನಿ - Man died after a hill collapsed - MAN DIED AFTER A HILL COLLAPSED

ಕಾರವಾರದ ಕಿನ್ನರದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

House collapse
ಮನೆ ಕುಸಿತ (ETV Bharat)

By ETV Bharat Karnataka Team

Published : Jul 16, 2024, 3:11 PM IST

ಸ್ಥಳೀಯರಾದ ವಿಷ್ಣು ಗುರವ್ ಮಾತನಾಡಿದರು (ETV Bharat)

ಕಾರವಾರ (ಉತ್ತರ ಕನ್ನಡ) : ಭಾರಿ ಮಳೆಯಿಂದಾಗಿ ಕಾರವಾರದ ಕಿನ್ನರದಲ್ಲಿ ಗುಡ್ಡ ಕುಸಿದು ಮನೆಯಲ್ಲಿ ಸಿಲುಕಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.

ಕಿನ್ನರದ ಗ್ರಾಮದ ತಿಕರ್ಸ್ ಗುರವ (60) ಮೃತಪಟ್ಟ ವ್ಯಕ್ತಿ. ಮುಂಜಾನೆ 7 ಗಂಟೆಗೆ ಮನೆಯಲ್ಲಿ ಇದ್ದಾಗ ಮನೆಯ ಹಿಂಭಾಗದ ಗುಡ್ಡ ಏಕಾಏಕಿ ಕುಸಿದು ಬಿದ್ದಿದೆ. ಇದೇ ವೇಳೆ ವಿದ್ಯುತ್ ಲೈನ್ ಸಹಿತ ಬೃಹತ್ ಮರಗಳು ಮನೆ ಮೇಲೆ ಬಿದ್ದಿವೆ. ಹೆಂಡತಿ ಹಾಗೂ ಅಕ್ಕಪಕ್ಕದ ಮನೆಯವರು ಕೂಗಿ ಕರೆಯುವ ವೇಳೆಗೆ ಗಿಡ ಮರಗಳ ಸಹಿತ ಮನೆ ಮೇಲೆ ಬಿದ್ದು, ಸಂಪೂರ್ಣ ಮನೆ ಕುಸಿದು ಮಣ್ಣಿನಡಿ ಸಿಲುಕಿದ್ದರು. ಅದೃಷ್ಟವಶಾತ್ ಅವರ ಹೆಂಡತಿ ಮನೆಯಿಂದ ಹೊರಗೆ ಇದ್ದುದರಿಂದ ಬಚಾವ್​ ಆಗಿದ್ದಾರೆ.

ತಕ್ಷಣ ವಿಷಯ ತಿಳಿದ ಸ್ಥಳೀಯರು ಮನೆಯಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆಗೆ ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ತೆರಳಿ ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಈ ಬಗ್ಗೆ ಸ್ಥಳೀಯರಾದ ವಿಷ್ಣು ಗುರವ್ ಮಾತನಾಡಿ, ''ಮುಂಜಾನೆ ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದ್ದು, ಮನೆಯಲ್ಲಿದ್ದ ತಿಕರ್ಸ್ ಅವರನ್ನು ಕೂಗಿದಾಗ ಅವರು ಬರುವುದರೊಳಗೆ ಗುಡ್ಡಕುಸಿತವಾಗಿತ್ತು. ಬಳಿಕ ಅವರನ್ನು ರಕ್ಷಣೆ ಮಾಡಲು ಅವರಿದ್ದ ಕೋಣೆಯಲ್ಲಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಮತ್ತೊಂದು ಕೋಣೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ತಹಶೀಲ್ದಾರ್, ಕಾರವಾರ ಡಿವೈಎಸ್​ಪಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ'' ಎಂದು ತಿಳಿಸಿದರು.

ಇದನ್ನೂ ಓದಿ :ಮುಂಗಾರಿನ ಮೊದಲ ಮಳೆಗೆ ಚಾರ್ಮಾಡಿ ಹೆದ್ದಾರಿಯಲ್ಲಿ ಗುಡ್ಡ ಕುಸಿತ - Charmadi Hill Collapse

ABOUT THE AUTHOR

...view details