ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಇ-ಖಾತೆ ಮಾಡಿಕೊಡಲು 5 ಸಾವಿರ ರೂ‌. ಲಂಚ, ರೆಡ್​ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಪಿಡಿಒ - LOKAYUKTA TRAP

ಲಂಚ ಸ್ವೀಕರಿಸುತ್ತಿದ್ದ ಪಿಡಿಒನನ್ನು ಲೋಕಾಯುಕ್ತ ಪೊಲೀಸರು ರೆಡ್​ಹ್ಯಾಂಡಾಗಿ ಹಿಡಿದಿದ್ದಾರೆ.

LOKAYUKTA ARRESTS A PDO
ಲೋಕಾಯಕ್ತ ಬಲೆಗೆ ಬಿದ್ದ ಪಿಡಿಒ (ETV Bharat)

By ETV Bharat Karnataka Team

Published : Dec 24, 2024, 1:46 PM IST

ಶಿವಮೊಗ್ಗ: ಇ-ಖಾತೆ ಮಾಡಿಕೊಡಲು‌ 5 ಸಾವಿರ ರೂ‌ಪಾಯಿ ಲಂಚ ಪಡೆಯುವಾಗ ಸೊರಬ ತಾಲೂಕು ಇಂಡುವಳ್ಳಿಯ ಪ್ರಭಾರ ಪಿಡಿಒ ಈಶ್ವರಪ್ಪ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಹಮ್ಮದ್ ಗೌಸ್ ಎಂಬುವರು ಇಂಡುವಳ್ಳಿಯಲ್ಲಿ ಜಮೀನು ಹೊಂದಿದ್ದು, ಇದರಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿದ್ದಾರೆ. ಈ ಮನೆಯ ಮೇಲೆ ಬ್ಯಾಂಕ್​ನಲ್ಲಿ ಸಾಲ ಪಡೆಯಲು ಇ-ಖಾತೆ ಬೇಕಾಗಿರುವುದರಿಂದ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಪ್ರಭಾರ ಪಿಡಿಒ ಅವರು ಮಹಮ್ಮದ್ ಗೌಸ್ ಅವರ ಮನೆ ಬಳಿ ಬಂದು ಅಳತೆ ಮಾಡಿಕೊಂಡಿದ್ದರು. ಇದಾದ ನಂತರ ಹಲವು ಬಾರಿ ಪ್ರಭಾರಿ ಪಿಡಿಒ ಈಶ್ವರಪ್ಪ ಅವರ ಬಳಿ ಬಂದು ಕೇಳಿದಾಗ ಅವರು ಇ-ಖಾತೆ ನೀಡದೆ ಸತಾಯಿಸಿದ್ದರು. ಈ ಕುರಿತು ಮೊನ್ನೆ ಪಿಡಿಒ ಈಶ್ವರಪ್ಪ ಅವರ ಬಳಿ ಬಂದಾಗ ಅವರು 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಅಂದು ಲಂಚ ನೀಡದ ಗೌಸ್, ಲೋಕಾಯುಕ್ತ ಅಧಿಕಾರಿಗಳ ಬಳಿ ತೆರಳಿ ದೂರು ನೀಡಿದ್ದರು.

ಇಂದು ಸೊರಬ ಪಟ್ಟಣದ ಪೋಸ್ಟ್ ಆಫೀಸ್ ಬಳಿ ಪ್ರಭಾರ ಪಿಡಿಒ ಈಶ್ವರಪ್ಪ ಗೌಸ್​ ಕಡೆಯಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಕುರಿತು ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಹೆಚ್. ಎಸ್. ಸುರೇಶ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ನೇತೃತ್ವದಲ್ಲಿ ನಡೆಸಲಾಗಿದೆ. ದಾಳಿಯ ವೇಳೆ ಸಿಬ್ಬಂದಿಗಳಾದ ಯೋಗೀಶ್, ಮಂಜುನಾಥ್, ಸುರೇಂದ್ರ, ಪ್ರಶಾಂತ್ ಕುಮಾರ್, ಚನ್ನೇಶ್, ದೇವರಾಜ್ ಅರುಣ್ ಕುಮಾರ್, ಅಂಜಲಿ, ಜಯಂತ್ ಪ್ರದೀಪ್ ಹಾಜರಿದ್ದರು.

ಇದನ್ನೂ ಓದಿ: ಮಂಗಳೂರು: ಲೋಕಾಯುಕ್ತ ಹೆಸರಲ್ಲಿ ಪುರಸಭೆ ಕಂದಾಯ ಅಧಿಕಾರಿಗೆ ಹಣಕ್ಕೆ ಬೇಡಿಕೆ, ಆರೋಪಿ ಬಂಧನ

ABOUT THE AUTHOR

...view details