ETV Bharat / state

ತಮ್ಮದಲ್ಲದ ತಪ್ಪಿಗೆ ಒಂದೇ ಕುಟುಂಬದ ನಾಲ್ವರು ಸಾವು; ರಸ್ತೆ ಅಪಘಾತಕ್ಕೆ ಕಾರಣ ತಿಳಿಸಿದ ಹಾವೇರಿ ಎಸ್​ಪಿ - CAR ACCIDENT

ಹಾವೇರಿ ಜಿಲ್ಲೆಯ ತಡಸ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

CAR ACCIDENT IN HAVERI
ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸ್​ ಸಿಬ್ಬಂದಿ (ETV Bharat)
author img

By ETV Bharat Karnataka Team

Published : 12 hours ago

Updated : 12 hours ago

ಹಾವೇರಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕು ತಡಸ-ನೀರಲಗಿ ಗ್ರಾಮದ ಬಳಿ ಇಂದು ನಡೆದಿದೆ.

ಬೆಂಗಳೂರಿನ ಚಾಮರಾಜಪೇಟೆಯ ಚಂದ್ರಮ್ಮ (59 ವರ್ಷ), ಇವರ ಪುತ್ರಿಯೂ ಆದ ದಾವಣಗೆರೆ ಜಿಲ್ಲೆ ಹರಿಹರ ಮೂಲದ ಮೀನಾ (38 ವರ್ಷ), ಮಹೇಶ್ ಕುಮಾರ್ ಸಿ (41 ವರ್ಷ) ಮತ್ತು ಧನವೀರ್ (12 ವರ್ಷ) ಮೃತ ದುರ್ದೈವಿಗಳು.

ಅಪಘಾತದ ಬಗ್ಗೆ ಎಸ್​ ಪಿ ಅಂಶುಕುಮಾರ್ ಮಾಹಿತಿ ನೀಡುತ್ತಿರುವುದು (ETV Bharat)

ಇವರೆಲ್ಲರೂ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಕಡೆ ಆಲ್ಟ್ರೋಜ್ ಕಾರಿನಲ್ಲಿ ಹೊರಟಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿ ನಾಲ್ವರು ಉಸಿರು ಚೆಲ್ಲಿದ್ದಾರೆ.

ಅಪಘಾತಕ್ಕೆ ಎಕ್ಸ್​ಯುವಿ ಕಾರು ಚಾಲಕನ ಅತಿವೇಗ ಕಾರಣ; ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿಗ್ಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಟಿದ್ದ ಎಕ್ಸ್​ಯುವಿ ಕಾರಿನ ಚಾಲಕ ಅತಿಯಾದ ವೇಗದಲ್ಲಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲು ರಸ್ತೆ ಡಿವೈಡರ್​ಗೆ ಗುದ್ದಿದೆ. ಬಳಿಕ ಎದುರಿಗೆ ಬರುತ್ತಿದ್ದ ಕೆಂಪುಬಣ್ಣದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಆಲ್ಟ್ರೋಜ್ ಕಾರಿನಲ್ಲಿದ್ದ 12 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

Four people died due to car accident in Haveri
ನಜ್ಜುಗುಜ್ಜಾದ ಕಾರು (ETV Bharat)

ಸ್ಥಳಕ್ಕೆ ಹಾವೇರಿ ಎಸ್. ಪಿ ಅಂಶುಕುಮಾರ್ ಭೇಟಿ ನೀಡಿ ಪರಶೀಲನೆ ನಡೆಸಿದರು. ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತಡಸ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಇವತ್ತು ಮಧ್ಯಾಹ್ನ 12 ಗಂಟಗೆ ಸುಮಾರಿಗೆ ಹಾವೇರಿ - ಧಾರವಾಡ ಜಿಲ್ಲೆಯ ಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯ 48 ರಲ್ಲಿ ಅಪಘಾತ ಸಂಭವಿಸಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಂಪು ಬಣ್ಣದ ಕಾರು ಮತ್ತು ಶಿಗ್ಗಾವಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಎಕ್ಸ್​ಯುವಿ ಕಾರಿನ ಮಧ್ಯೆ ರಸ್ತೆ ಅಪಘಾತ ನಡೆದಿದೆ. ಎಕ್ಸ್​ಯುವಿ ಕಾರು ವೇಗದಲ್ಲಿ ಚಲಿಸುತ್ತಿತ್ತು. ಈ ವೇಳೆ ಡಿವೈಡರ್​ಗೆ ಗುದ್ದಿದ ಬಳಿಕ ಕೆಂಪು ಬಣ್ಣದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಕೆಂಪು ಕಾರಿನಲ್ಲಿದ್ದ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಗೆ ಕರೆದೊಯ್ದಾಗ ಅವರು ಕೂಡ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಹೇಳಿದ್ದಾಗಿ ಎಸ್​ ಪಿ ಅಂಶುಕುಮಾರ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಧಾರವಾಡ: ಪಲ್ಟಿಯಾದ ಕ್ಯಾಂಟರ್ ಟಿಟಿ ವಾಹನಕ್ಕೆ ಡಿಕ್ಕಿ; ಮೂವರು ಸಾವು, ಮೂವರಿಗೆ ಗಾಯ - ROAD ACCIDENT

Last Updated : 12 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.