ಕರ್ನಾಟಕ

karnataka

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕೆಎಸ್ಆರ್​ಪಿ ಕಮಾಂಡೆಂಟ್ ಕೃಷ್ಣಪ್ಪ ನಿರ್ದೋಷಿ - Illegal Asset Case

By ETV Bharat Karnataka Team

Published : Jul 3, 2024, 10:27 AM IST

ಅಕ್ರಮ ಆಸ್ತಿ ಹೊಂದಿರುವ ಆರೋಪ ಪ್ರಕರಣದಲ್ಲಿ ಕೆಎಸ್‌ಆರ್‌ಪಿ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಕೃಷ್ಣಪ್ಪ ದೋಷಮುಕ್ತರಾಗಿದ್ದಾರೆ.

Dakshina Kannada Court Complex
ದಕ್ಷಿಣ ಕನ್ನಡ ನ್ಯಾಯಾಲಯ ಸಂಕೀರ್ಣ (ETV Bharat)

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಏಳನೇ ಕೆಎಸ್‌ಆರ್‌ಪಿ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಕೃಷ್ಣಪ್ಪ ಅವರನ್ನು ಅಕ್ರಮ ಆಸ್ತಿ ಹೊಂದಿರುವ ಆರೋಪ ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಸಂಧ್ಯಾ ಎಸ್. ತೀರ್ಪು ನೀಡಿದ್ದಾರೆ.

1991ರ ಬ್ಯಾಚ್‌ನ ಅಧಿಕಾರಿಯಾಗಿದ್ದ ಕೃಷ್ಣಪ್ಪ ಅವರ ಮನೆ ಮತ್ತು ಕಚೇರಿಗೆ 2006ನೇ ಇಸವಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು‌. ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಿದಾಗ ಸುಮಾರು 87 ಲಕ್ಷ ರೂ.ಗಿಂತಲೂ ಅಧಿಕ ಆಸ್ತಿ ಪಾಸ್ತಿ ಹೊಂದಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಸನ್ನ ವಿ.ರಾಜ್ ತನಿಖೆ ನಡೆಸಿ, ಡಾ.ಪ್ರಭುದೇವ ಮಾನೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಕೃಷ್ಣಪ್ಪ ಮೂಲತಃ ಹಾವೇರಿ ಜಿಲ್ಲೆಯ ಖಂಡೇರಾಯನ ಹಳ್ಳಿಯವರಾಗಿದ್ದು, ಖಂಡೇರಾಯನ ಹಳ್ಳಿ ಮತ್ತು ದಾವಣಗೆರೆಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದರು. ಕೆಎಸ್‌ಆರ್‌ಪಿ ಅಧಿಕಾರಿಯಾಗುವ ಪೂರ್ವದಲ್ಲಿ ಕೇಂದ್ರ ಸರ್ಕಾರದ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್​​ನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕೃಷ್ಣಪ್ಪನವರ ಪತ್ನಿಗೆ ಮದುವೆ ಸಂದರ್ಭದಲ್ಲಿ ತವರು ಮನೆಯವರು ಚಿನ್ನ, ಬೆಳ್ಳಿ ಅಲ್ಲದೇ ಸ್ಥಿರಾಸ್ತಿಗಳನ್ನು ಕೂಡ ಉಡುಗೊರೆಯಾಗಿ ಕೊಟ್ಟಿದ್ದರು. ಈ ಎಲ್ಲಾ ವಿಚಾರಗಳನ್ನು ಕೃಷ್ಣಪ್ಪ ಅವರು ಪ್ರತೀ ವರ್ಷ ಸರ್ಕಾರಕ್ಕೆ ಸಲ್ಲಿಸುವ ಆಸ್ತಿ ಮತ್ತು ದಾಯತ್ವ ಪಟ್ಟಿಯಲ್ಲಿ ತಿಳಿಸಿದ್ದರೂ ಕೂಡ ಈ ಆದಾಯಗಳನ್ನು ಪರಿಶೀಲಿಸದೇ ಅಧಿಕಾರಿಗಳು ಲೋಕಾಯುಕ್ತ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ:25 IPS ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ - Govt Transfers IPS Officers

ಕೆಪಿಎಸ್ ಅಧಿಕಾರಿಯಾಗಿದ್ದ ಕೃಷ್ಣಪ್ಪ ಅವರು ಮುಂದೆ ಐಪಿಎಸ್ ಅಧಿಕಾರಿಯಾಗಿ ಪದೋನ್ನತಿಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೃಷ್ಣಪ್ಪ ಅವರ ನ್ಯಾಯವಾದಿ ಪಿ.ಪಿ.ಹೆಗ್ಡೆ ಅಸೋಸಿಯೇಟ್ಸ್‌ನ ರಾಜೇಶ್ ಕುಮಾರ್ ಅಮ್ಮಾಡಿ ವಾದಿಸಿದ್ದರು.

ABOUT THE AUTHOR

...view details