ಚಾಮರಾಜನಗರ: ಪತ್ನಿ ನಿಧನದ ಸುದ್ದಿ ಕೇಳಿ ಪತಿಯೂ ಮೃತಪಟ್ಟ ಘಟನೆ ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ. ಮಂಗಲ ಗ್ರಾಮದ ಶೇಖರ್ (70) ಹಾಗೂ ಸುಮಿತ್ರಮ್ಮ (65) ಸಾವಿನಲ್ಲೂ ಒಂದಾದ ದಂಪತಿ.
ಪತ್ನಿ ನಿಧನದ ಸುದ್ದಿ ಕೇಳಿ ಪತಿಗೆ ಹೃದಯಾಘಾತ: ಸಾವಿನಲ್ಲೂ ಜೊತೆಯಾದ ದಂಪತಿ - couple united in death - COUPLE UNITED IN DEATH
ದಂಪತಿ ಸಾವಿನಲ್ಲೂ ಒಂದಾಗಿರುವ ಹೃದಯವಿದ್ರಾವಕ ಘಟನೆ ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.
Published : Aug 24, 2024, 3:59 PM IST
ದಂಪತಿಗಳಿಬ್ಬರು ಕೃಷಿಕರಾಗಿದ್ದು ಮಂಗಲ ಸಮೀಪದ ರಾಮನಗುಡ್ಡ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸುಮಿತ್ರಮ್ಮಗೆ ಶುಕ್ರವಾರ ಮುಂಜಾನೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕಾಮಗೆರೆ ಬಳಿ ಇರುವ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸುಮಿತ್ರಮ್ಮ ಶುಕ್ರವಾರ ರಾತ್ರಿ ನಿಧನರಾಗಿದ್ದರು. ಈ ವಿಚಾರ ತಿಳಿದ ಪತಿ ಶೇಖರ್ ಹೃದಯಾಘಾತದಿಂದ ಸಾವನ್ನಪ್ಪಿದರು. ದಂಪತಿ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:ಹಾಸನ: ಜೀವ ವಿಮೆ ಹಣ ಪಡೆಯಲು ತದ್ರೂಪಿ ಭಿಕ್ಷುಕನ ಕೊಲೆ, ಸಮಾಧಿ ಕಟ್ಟಿದ ಬಳಿಕ ಸಿಕ್ಕಿಬಿದ್ದ ದಂಪತಿ - Hassan Murder