ಕರ್ನಾಟಕ

karnataka

ಬೆಳ್ತಂಗಡಿ, ಕಡಬ, ಸುಳ್ಯದಲ್ಲೂ ಭಾರಿ ಮಳೆ; ಏರಿದ ನದಿ ನೀರು, ಹಲವೆಡೆ ನೆರೆ - Heavy Rain in Mangaluru

By ETV Bharat Karnataka Team

Published : Aug 1, 2024, 12:25 PM IST

Updated : Aug 1, 2024, 2:56 PM IST

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಜಾಸ್ತಿಯಾಗಿ, ಹಲವೆಡೆ ನೆರೆ ಸೃಷ್ಟಿಯಾಗಿದೆ.

Heavy rains in Belthangadi, Kadaba Sulya: Falguni, Netravati, Kumaradhara rivers water level rise, floods in many places
ಬೆಳ್ತಂಗಡಿ, ಕಡಬ ಸುಳ್ಯದಲ್ಲಿ ಭಾರಿ ಮಳೆ: ಫಲ್ಗುಣಿ, ನೇತ್ರಾವತಿ, ಕುಮಾರಧಾರ ನದಿ ನೀರು ಏರಿಕೆ, ಹಲವೆಡೆ ನೆರೆ (ETV Bharat)

ಬೆಳ್ತಂಗಡಿ, ಕಡಬ, ಸುಳ್ಯದಲ್ಲೂ ಭಾರಿ ಮಳೆ; ಏರಿದ ನದಿ ನೀರು, ಹಲವೆಡೆ ನೆರೆ (ETV Bharat)

ಮಂಗಳೂರು:ಕಳೆದ ವರ್ಷ ಮಳೆ ಕೊರತೆ ಕಂಡಿದ್ದ ಕರಾವಳಿ ಮತ್ತು ಮಲೆನಾಡಿನಲ್ಲಿ ಈ ಬಾರಿ ವರುಣನ ಆರ್ಭಟ ಜೋರಾಗಿದೆ. ಈ ಮುಂಗಾರಿನಲ್ಲಿ ಹೆಚ್ಚಿನ ಅತಿವೃಷ್ಟಿ ಉಂಟಾಗಿದ್ದಲ್ಲದೆ, ನೆರೆ ಪ್ರವಾಹ ಜನರನ್ನು ಸಂಕಷ್ಟಕ್ಕೆ ದೂಡಿದೆ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ‌ ಘಟ್ಟದ ತಪ್ಪಲಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ನೀರಿನ ಮಟ್ಟ ಏರುತ್ತಿದ್ದು, ಹಲವೆಡೆ ನೆರೆ ಕಾಣಿಸಿಕೊಂಡಿದೆ. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮ ಫಲ್ಗುಣಿ, ನೇತ್ರಾವತಿ, ಕುಮಾರಧಾರ ನದಿಗಳ ನೀರಿ ಮಟ್ಟ ಏರಿಕೆಯಾಗಿದೆ.

ಬೆಳ್ತಂಗಡಿ, ಕಡಬ, ಸುಳ್ಯದಲ್ಲೂ ಭಾರಿ ಮಳೆ; ಏರಿದ ನದಿ ನೀರು, ಹಲವೆಡೆ ನೆರೆ (ETV Bharat)

ಕುಸಿದ ಕಿರುಸೇತುವೆ:ಬೆಳ್ತಂಗಡಿ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಸೊಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಕಿರು ಸೇತುವೆ ಕುಸಿತವಾಗಿದೆ. ಇದರಿಂದ ಈ ಭಾಗದಲ್ಲಿ ಸಂಪರ್ಕ ಕಡಿತಗೊಂಡಿದೆ.

ವೇಣೂರು ನದಿ ಪ್ರವಾಹ:ವೇಣೂರಿನಲ್ಲಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡ ಪರಿಣಾಮ ವೇಣೂರಿನ ಚರ್ಚ್ ಬಳಿ ನೆರೆ ನೀರಲ್ಲಿ ಹಲವು ಬಸ್​ಗಳು ಸಿಲುಕಿದ ಘಟನೆ ನಡೆದಿದೆ. ರಾತ್ರಿ 1.30ಕ್ಕೆ ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿದರು. ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮ ದೆರಾಜೆಬೆಟ್ಟ ರಸ್ತೆಯಲ್ಲಿ ನೆರೆ ನೀರು ಕಾಣಿಸಿಕೊಂಡ ಪರಿಣಾಮ ಸಂಪರ್ಕ ಅಸ್ತವ್ಯಸ್ತವಾಗಿದೆ.

ಬೆಳ್ತಂಗಡಿ, ಕಡಬ, ಸುಳ್ಯದಲ್ಲೂ ಭಾರಿ ಮಳೆ; ಏರಿದ ನದಿ ನೀರು, ಹಲವೆಡೆ ನೆರೆ (ETV Bharat)

ಅಮ್ಮುಂಜೆ ದೇವಸ್ಥಾನಕ್ಕೆ ನೀರು:ಮಂಗಳೂರು ತಾಲೂಕಿನ ಅಮ್ಮುಂಜೆಯಲ್ಲಿ ನೆರೆ ಕಾಣಿಸಿಕೊಂಡಿದ್ದು, ಅಮ್ಮುಂಜೆ ದೇವಸ್ಥಾನಕ್ಕೂ ನೆರೆ ನೀರು ಪ್ರವೇಶಿಸಿದೆ. ದೇವಸ್ಥಾನ ಜಲ ದಿಗ್ಬಂಧನಕ್ಕೊಳಗಾಗಿದೆ.

ಬೆಳ್ತಂಗಡಿಯಲ್ಲಿ ಮಳೆ- ಮಂಗಳೂರಿನಲ್ಲಿ ನೆರೆ:ಬೆಳ್ತಂಗಡಿ ತಾಲೂಕಿನ ಹಲವೆಡೆ ಭಾರಿ ಮಳೆ ಸುರಿಯುತ್ತಿರುವುದರಿಂದ ಫಲ್ಗುಣಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಪರಿಣಾಮ ಮಂಗಳೂರು ಹೊರವಲಯದ ಗುರುಪುರ ಭಾಗದಲ್ಲಿ ನೆರೆ ಕಾಣಿಸಿಕೊಂಡಿದೆ.

24 ಗಂಟೆಯಲ್ಲಿ ಸುರಿದ ಭಾರಿ ಮಳೆ:ಮೂಡಬಿದಿರೆಯ ಶಿರ್ತಾಡಿಯಲ್ಲಿ 269 ಮಿಲಿ ಮೀಟರ್​, ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ 264 ಎಂಎಂ, ಬೆಳ್ತಂಗಡಿಯ ಬಳಂಜ 250 ಎಂಎಂ, ಬೆಳ್ತಂಗಡಿಯ ಮಲೆಂತಬೆಟ್ಟುವಿನಲ್ಲಿ 205 ಎಂಎಂ, ಮಂಗಳೂರಿನ ಬೆಳುವಾಯಿಯಲ್ಲಿ 202 ಎಂ.ಎಂ, ಬೆಳ್ತಂಗಡಿ ಲಾಯಿಲಾದಲ್ಲಿ 195.5 ಎಂ.ಎಂ ಮಳೆ ಸುರಿದಿದೆ.

ಸ್ಥಳಾಂತರ:ಭಾರಿ ಮಳೆಗೆ ನೆರೆ ಕಾಣಿಸಿಕೊಂಡ ಪರಿಣಾಮ ಹಲವೆಡೆ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಅಮ್ಮುಂಜೆ, ಮೂಡುಶೆಡ್ಡೆ‌ ಭಾಗದಲ್ಲಿ ನೆರೆ ಪೀಡಿತರನ್ನು ಸ್ಥಳಾಂತರಗೊಳಿಸಲಾಗಿದೆ.

ಇದನ್ನೂ ಓದಿ:ದೆಹಲಿಯಲ್ಲಿ ರೆಡ್​ ಅಲರ್ಟ್, ಶಾಲೆಗಳಿಗೆ ರಜೆ​: ಚರಂಡಿಯಲ್ಲಿ ಕೊಚ್ಚಿಹೋದ ತಾಯಿ-ಮಗು, ಭಾರಿ ಮಳೆಗೆ ಜನ ತತ್ತರ - Heavy Rain in Delhi

Last Updated : Aug 1, 2024, 2:56 PM IST

ABOUT THE AUTHOR

...view details