ಕರ್ನಾಟಕ

karnataka

ETV Bharat / state

ಒಂದೇ ಕುಟುಂಬದ ನಾಲ್ವರು 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ: ಆರೋಪಿಗಳ ಹೆಸರು ಬಹಿರಂಗಪಡಿಸಲ್ಲ ಎಂದ ಕಮಿಷನರ್‌ - Theft Case - THEFT CASE

ಒಂದೇ ಕುಟುಂಬದ ನಾಲ್ವರು ಮೈಸೂರು ನಗರ, ಮೈಸೂರು ಜಿಲ್ಲೆ, ಮಂಡ್ಯ, ದಕ್ಷಿಣ ಕನ್ನಡ, ಕೊಡಗು ಭಾಗಗಳಲ್ಲಿ ಕಳ್ಳತನ, ಸುಲಿಗೆ ಹಾಗೂ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್​ ಕಮಿಷನರ್‌ ಹೇಳಿದ್ದಾರೆ.

MYSURU THEFT CASE
ನಗರ ಪೊಲೀಸ್​ ಆಯುಕ್ತೆ ಸೀಮಾ ಲಾಟ್ಕರ್‌ (ETV Bharat)

By ETV Bharat Karnataka Team

Published : Aug 26, 2024, 2:33 PM IST

ನಗರ ಪೊಲೀಸ್​ ಆಯುಕ್ತೆ ಸೀಮಾ ಲಾಟ್ಕರ್‌ (ETV Bharat)

ಮೈಸೂರು: ಒಂದೇ ಕುಟುಂಬದ ನಾಲ್ವರು 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಅವರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 45 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ತನಿಖಾ ದೃಷ್ಟಿಯಿಂದ ಆರೋಪಿಗಳ ಹೆಸರನ್ನು ಬಹಿರಂಗಪಡಿಲಾಗದು ಎಂದು ನಗರ ಪೊಲೀಸ್​ ಆಯುಕ್ತೆ ಸೀಮಾ ಲಾಟ್ಕರ್‌ ಮಾಹಿತಿ ನೀಡಿದರು.

ಬಂಧಿತರಲ್ಲಿ ಅಪ್ಪ-ಮಕ್ಕಳಿದ್ದು ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ನಡೆದಿರುವ 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಈ ಒಂದೇ ಕುಟುಂಬದ ಕಳ್ಳರ ಜಾಲ ಭೇದಿಸಿದ ನಗರ ಸಿಸಿಬಿ ಪೊಲೀಸರು, ಆರೋಪಿಗಳಿಂದ 45 ಲಕ್ಷ ಮೌಲ್ಯದ ಚಿನ್ನಾಭರಣ, 3 ಬೈಕ್‌, 2 ಪಿಸ್ತೂಲ್‌, ಆರೋಪಿಗಳಿಂದ 4.6 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಸೀಮಾ ಲಾಟ್ಕರ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಗರದ ಮೇಟಗಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಮನೆಗಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬ ನೀಡಿದ ಸುಳಿವಿನ ಮೆರೆಗೆ ಒಂದೇ ಕುಟುಂಬದ ಅಪ್ಪ- ಮಕ್ಕಳ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಇವರು ಮೈಸೂರು ನಗರ, ಮೈಸೂರು ಜಿಲ್ಲೆ, ಮಂಡ್ಯ, ದಕ್ಷಿಣ ಕನ್ನಡ, ಕೊಡಗು ಭಾಗಗಳಲ್ಲಿ ಕಳ್ಳತನ, ಸುಲಿಗೆ ಹಾಗೂ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ನಾಲ್ವರು ಆರೋಪಿಗಳಲ್ಲಿ ಒಬ್ಬನ ಮೇಲೆ 3 ಪ್ರಕರಣ, ಮತ್ತೋರ್ವನ ಮೇಲೆ 36 ಪ್ರಕರಣ ಹಾಗೂ ಇನ್ನೊಬ್ಬನ ಮೇಲೆ 17 ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಇವರುಗಳ ಮೇಲೆ ಗಾಂಜಾ ಹೊಂದಿದ ಆರೋಪದ ಮೇಲೆ 18 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು, ಈ ದೃಷ್ಟಿಯಿಂದ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

6 ತಿಂಗಳಲ್ಲಿ 32 ಕೋಟಿ ವಂಚನೆ!: ಸುಲಭವಾಗಿ ಹಣ ಮಾಡುವ ಆಸೆಗೆ ಬಿದ್ದು ಹಲವರು ಹಣ ಕಳೆದುಕೊಳ್ಳುತ್ತಿದ್ದಾರೆ. ನಗರದಲ್ಲಿ ಕೇವಲ ಆರು ತಿಂಗಳಲ್ಲಿ ಆನ್​ಲೈನ್ ಟ್ರೇಡಿಂಗ್​​ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 32 ಕೋಟಿ ರೂ. ಕಳೆದುಕೊಂಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಹಣ ಕಳೆದುಕೊಂಡವರಲ್ಲಿ ವಿದ್ಯಾವಂತರೇ ಹೆಚ್ಚಿದ್ದಾರೆ. ಈ ಬಗ್ಗೆ ನಗರದ ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಲಭವಾಗಿ ಹಣ ಗಳಿಸುವ, ಟ್ರೇಡಿಂಗ್​​ನಲ್ಲಿ ಭಾಗಿಯಾಗಿ ಹಣ ದ್ವಿಗುಣ ಮಾಡುವ ಆಸೆಗೆ ಬಿದ್ದು ಹಲವರು ತಮ್ಮ ಜೇಬು ಖಾಲಿ ಮಾಡಿಕೊಂಡಿದ್ದಾರೆ. ಯುವಕರು ಈ ಬಗ್ಗೆ ಎಚ್ಚರ ವಹಿಸುವಂತೆ ಕಮಿಷನರ್‌ ಇದೇ ವೇಳೆ ಸೈಬರ್‌ ವಂಚನೆ ಬಗ್ಗೆಯೂ ಮಾಹಿತಿ ನೀಡಿದರು.

ಇದನ್ನೂ ಓದಿ:ಉಡುಪಿ: ಸೈಬರ್ ಪೊಲೀಸರ ಹೆಸರಿನಲ್ಲಿ ಟೆಕ್ಕಿಗೆ ಕರೆ ಮಾಡಿ 4.80 ಲಕ್ಷ ರೂ. ವಂಚನೆ! - Fraud Case

ABOUT THE AUTHOR

...view details