ರಾಮನಗರ :ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹಾರೋಬೆಲೆಯ ಜ್ಯೋತಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ, ಜಿಂಕೆ ಮಾಂಸವನ್ನು ಸಾತನೂರು ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಪ್ರದೀಪ, ಶಶಿಕುಮಾರ, ಮಣಿಕಂಠ ಹಾಗೂ ಇತರರು ಸೇರಿ ನಾಡ ಬಂದೂಕು ಬಳಸಿ, ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಮೂರು ಜಿಂಕೆಗಳನ್ನು ಬೇಟೆಯಾಡಿ, ಆರೋಪಿ ಪ್ರದೀಪನ ತೋಟದ ಮನೆಗೆ ತಂದು, ಮಾಂಸವನ್ನಾಗಿ ಪರಿವರ್ತಿಸಿ ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನದಲ್ಲಿ ತಂಡ ರಚಿಸಿ ಆಗಮಿಸಿದ್ದ ವೇಳೆ, ಆರೋಪಿ ಪ್ರದೀಪ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಮನೆಯ ಮೇಲೆ ದಾಳಿ ಮಾಡಿದಾಗ, ಮಾಹಿತಿ ತಿಳಿದು ಆರೋಪಿ ಪ್ರದೀಪ ಮನೆಯ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿರುತ್ತಾನೆ.