ಬೆಂಗಳೂರು: ಫುಡ್ ಡೆಲಿವರಿ ಬಾಯ್ಗಳನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುವ ಗ್ಯಾಂಗ್ ನಗರದಲ್ಲಿ ಸಕ್ರಿಯವಾಗಿದ್ದು, ಮೂವರು ಸುಲಿಗೆಕೋರರು ತಲ್ವಾರ್ನಿಂದ ಹಲ್ಲೆ ಮಾಡಿ ಮೊಬೈಲ್ ಕಸಿದಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊನೇನ ಅಗ್ರಹಾರದ ವಿನಾಯಕ್ ನಗರ ಬಿ ಬ್ಲಾಕ್ನಲ್ಲಿ ಆಗಸ್ಟ್ 21ರ ಮುಂಜಾನೆ ನಡೆದಿದೆ.
"ಫುಡ್ ಡೆಲಿವರಿಯಾಗಿ ಕೆಲಸ ಮಾಡುತ್ತಿರುವ ಉತ್ತರ ಭಾರತದ ಮೂಲದ ಯುವಕ ಆ.21ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ವಿನಾಯಕ್ ಬ್ಲಾಕ್ನಲ್ಲಿನ ಮನೆಯೊಂದಕ್ಕೆ ಮಾಡಲು ಬೈಕಿನಲ್ಲಿ ಬಂದಿದ್ದ. ಡೆಲಿವರಿ ಮಾಡಿ ಬೈಕ್ ಹತ್ತಿ ಹೋಗುವಾಗ ಏಕಾಏಕಿ ದ್ವಿಚಕ್ರವಾಹನದಲ್ಲಿ ಬಂದ ಮೂವರು ಅಪರಿಚಿತರು ಮೊಬೈಲ್ ನೀಡುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ನಿರಾಕರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲ್ವಾರ್ ಬೀಸಿ ದಾಳಿ ಮಾಡಿ ಮೊಬೈಲ್ ಕಸಿದಿದ್ದಾರೆ. ಮೊಬೈಲ್ ನೀಡುವಂತೆ ಗೋಗರೆದರೂ ಕೇಳದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಸುಲಿಗೆ ದೃಶೃ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ದೂರುದಾರ ನೀಡಿದ ದೂರು ಆಧರಿಸಿ ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.