ಮುಂಬೈ(ಮಹಾರಾಷ್ಟ್ರ): 288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 21 ಮಹಿಳಾ ಅಭ್ಯರ್ಥಿಗಳು ಜಯಗಳಿಸಿದ್ದು, ಈ ಪೈಕಿ ಒಬ್ಬರು ಮಾತ್ರ ಪ್ರತಿಪಕ್ಷದವರಾಗಿದ್ದಾರೆ.
ಬಿಜೆಪಿಯಿಂದ ಅತೀ ಹೆಚ್ಚು 14 ಮಹಿಳಾ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದು, ಇದರಲ್ಲಿ 10 ಮಂದಿ ಮರುಆಯ್ಕೆಯಾದರು ಎಂಬುದು ಗಮನಾರ್ಹ. ಚುನಾವಣೆಯಲ್ಲಿ ವಿಜೇತ ಮಹಿಳಾ ಅಭ್ಯರ್ಥಿಗಳ ವಿವರ:
- ಶ್ವೇತಾ ಮಹಾಲೆ (ಚಿಕ್ಲಿ ಕ್ಷೇತ್ರ)
- ಮೇಘನಾ ಬೋರ್ಡಿಕರ್ (ಜಿಂಟೂರ್)
- ದೇವಯಾನಿ ಫರಾಂಡೆ (ನಾಸಿಕ್ ಸೆಂಟ್ರಲ್)
- ಸೀಮಾ ಹಿರೇ (ನಾಸಿಕ್ ಪಶ್ಚಿಮ)
- ಮಂದಾ ಮಾತ್ರೆ (ಬೇಲಾಪುರ)
- ಮನೀಶಾ ಚೌಧರಿ (ದಹಿಸರ್)
- ವಿದ್ಯಾ ಠಾಕೂರ್ (ಗೋರೆಗಾಂವ್)
- ಮಾಧುರಿ ಮಿಸಾಲ್ (ಪಾರ್ವತಿ)
- ಮೋನಿಕಾ ರಾಜಾಲೆ (ಶೇವಗಾಂವ್)
- ನಮಿತಾ ಮುಂಡಾಡ (ಕೈಜ್)
ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಫಲಿತಾಂಶಗಳ ಪ್ರಕಾರ, ಬಿಜೆಪಿಯಿಂದ ಹೊಸ ಶ್ರೀಜಯ ಚವ್ಹಾಣ್ (ಭೋಕರ್), ಸುಲಭಾ ಗಾಯಕ್ವಾಡ್ (ಕಲ್ಯಾಣ ಪೂರ್ವ), ಸ್ನೇಹಾ ಪಂಡಿತ್ (ವಸಾಯಿ) ಮತ್ತು ಅನುರಾಧಾ ಚವಾಣ್ (ಫುಲಾಂಬರಿ) ಅವರು ಇದೇ ಮೊದಲ ಬಾರಿಗೆ ಚುನಾವಣೆ ಗೆದ್ದು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.
ಆಡಳಿತಾರೂಢ ಶಿವಸೇನೆಯ ಟಿಕೆಟ್‌ನಿಂದ ಮಂಜುಳಾ ಗಾವಿತ್ (ಸಕ್ರಿ) ಮತ್ತು ಸಂಜನಾ ಜಾಧವ್ (ಕನ್ನಡ) ಆಯ್ಕೆಯಾಗಿದ್ದಾರೆ.
ಸುಲ್ಭಾ ಖೋಡ್ಕೆ (ಅಮರಾವತಿ), ಸರೋಜ್ ಅಹಿರೆ (ಡಿಯೋಲಾಲಿ), ಸನಾ ಮಲಿಕ್ (ಅನುಶಕ್ತಿನಗರ) ಮತ್ತು ಅದಿತಿ ತಟ್ಕರೆ (ಶ್ರೀವರ್ಧನ್) ಆಡಳಿತಾರೂಢ ಎನ್‌ಸಿಪಿ(ಅಜಿತ್ ಪವಾರ್ ಬಣ) ಟಿಕೆಟ್‌ನಲ್ಲಿ ಗೆದ್ದಿದ್ದಾರೆ.
ಕಾಂಗ್ರೆಸ್‌ನ ಜ್ಯೋತಿ ಗಾಯಕ್ವಾಡ್ (ಧಾವರಿ) ಪ್ರತಿಪಕ್ಷದ ಏಕೈಕ ಮಹಿಳಾ ಶಾಸಕಿಯಾಗಿದ್ದಾರೆ.
ಇದನ್ನೂ ಓದಿ: ಮಹಾ ಎಲೆಕ್ಷನ್: ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ಗೆ ಸೋಲುಣಿಸಿದ ಅತುಲ್ ಬಾಬಾ ಸುರೇಶ್ ಭೋಸ್ಲೆ