ನವದೆಹಲಿ: ಮಧ್ಯಪ್ರದೇಶದ ಶಿವಪುರಿ ಬಳಿ ಮಿರಾಜ್ 2000 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ. ಸುನಾರಿ ಚೌಕಿ ಬಳಿ ಈ ಅಪಘಾತ ಸಂಭವಿಸಿದೆ.
ಶಿವಪುರಿ ಎಸ್ಪಿ ಅಮನ್ ಸಿಂಗ್ ರಾಥೋಡ್ ಈ ಘಟನೆಯನ್ನು ದೃಢಪಡಿಸಿದ್ದು, ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ನೆಲಕ್ಕೆ ಬಿದ್ದ ವಿಮಾನವು ತುಂಡಾಗಿದ್ದು, ಅದಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಘಟನಾ ಸ್ಥಳದ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.
A Mirage 2000 aircraft of the IAF crashed near Shivpuri (Gwalior), during a routine training sortie today, after encountering a system malfunction. Both the pilots ejected safely.
— Indian Air Force (@IAF_MCC) February 6, 2025
An enquiry has been ordered by the IAF, to ascertain the cause of the accident.
ಅಪಘಾತದ ಬಗ್ಗೆ ಭಾರತೀಯ ವಾಯುಪಡೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ಭಾರತೀಯ ವಾಯುಪಡೆಯ ಮಿರಾಜ್ 2000 ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ವಾಡಿಕೆಯ ತರಬೇತಿಯ ಸಮಯದಲ್ಲಿ ಶಿವಪುರಿ (ಗ್ವಾಲಿಯರ್) ಬಳಿ ಅಪಘಾತಕ್ಕೀಡಾಗಿದೆ. ಇಬ್ಬರೂ ಪೈಲಟ್ ಗಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಐಎಎಫ್ ತನಿಖೆಗೆ ಆದೇಶಿಸಿದೆ." ಎಂದು ಬರೆದಿದೆ.
2024 ರ ನವೆಂಬರ್ನಲ್ಲಿ ಮಿಗ್ -29 ಫೈಟರ್ ಜೆಟ್ ಉತ್ತರ ಪ್ರದೇಶದ ಆಗ್ರಾ ಬಳಿ ವಾಡಿಕೆಯ ತರಬೇತಿಯ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ನೆಲಕ್ಕೆ ಅಪ್ಪಳಿಸಿತ್ತು. ಅಪಘಾತದ ಸಮಯದಲ್ಲಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.
ಇದನ್ನೂ ಓದಿ : ನವಜಾತ ಶಿಶುಗಳ ಅದಲು ಬದಲು: ಡಿಎನ್‌ಎ ಪರೀಕ್ಷೆಗೆ ನಿರ್ಧಾರ - SWAPPING OF NEWBORN BABIES