How To Find Adulteration In Green Vegetables: ಪ್ರತಿಯೊಬ್ಬರೂ ಶುದ್ಧ ಆಹಾರ ಸೇವಿಸಲು ಬಯಸುತ್ತಾರೆ. ನೀವು ಮಾರುಕಟ್ಟೆಗೆ ಹೋದಾಗ ತಾಜಾ ಹಸಿರು ತರಕಾರಿಗಳು ಹಾಗೂ ತಾಜಾ ಹಣ್ಣುಗಳನ್ನು ಆರಿಸಿಕೊಳ್ಳುತ್ತೀರಿ. ತರಕಾರಿಗಳು ಹಸಿರಾಗಿರುವಷ್ಟೂ ತಾಜಾ ಕೂಡ ಇರುತ್ತದೆ. ಈ ಹಸಿರು ತರಕಾರಿಗಳಲ್ಲಿ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.
ತರಕಾರಿಗಳನ್ನು ತಾಜಾವಾಗಿ ಕಾಣುವಂತೆ ಮಾಡಲು ಆಹಾರದಲ್ಲಿ ಮ್ಯಾಲಕೈಟ್ ಗ್ರೀನ್, ಕಾಪರ್ ಸಲ್ಫೇಟ್, ರೋಡಮೈನ್ ಬಿ ಮತ್ತು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೀಡಿರುವ ಸಲಹೆಗಳನ್ನು ಅನುಸರಿಸಿ ತರಕಾರಿಗಳಲ್ಲಿನ ಕಲಬೆರಕೆ ಪತ್ತೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಏನಿದು ಮ್ಯಾಲಕೈಟ್ ಗ್ರೀನ್?: ಮಲಾಕೈಟ್ ಗ್ರೀನ್ ಒಂದು ಬಟ್ಟೆ ಹಾಕಲಾಗುವ ಬಣ್ಣವಾಗಿದೆ. ಮತ್ತು ಇದನ್ನು ಮೀನುಗಳಿಗೆ ಆ್ಯಂಟಿಪ್ರೊಟೊಜೋಲ್ ಮತ್ತು ಆ್ಯಂಟಿಫಂಗಲ್ ಔಷಧಿಯಾಗಿ ಬಳಸಲಾಗುತ್ತದೆ. ಇದು ಜಲಚರಗಳಲ್ಲಿ ಶಿಲೀಂಧ್ರಗಳ ದಾಳಿ, ಪ್ರೊಟೊಜೋವನ್ ಸೋಂಕುಗಳು ಮತ್ತು ಇತರ ರೋಗಗಳನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಆದರೆ, ಮೆಣಸಿನಕಾಯಿ, ಬಟಾಣಿ ಮತ್ತು ಪಾಲಕ್ ಸೊಪ್ಪಿನಂತಹ ತರಕಾರಿಗಳನ್ನು ಹಸಿರಾಗಿ ಕಾಣಲು ಈ ರಾಸಾಯನಿಕ ಬಣ್ಣವನ್ನು ಬಳಸಲಾಗುತ್ತದೆ ಎಂದು ಅವರು ಹೇಳುತ್ತಾರೆ.
ಈ ಬಣ್ಣ ಅಪಾಯಕಾರಿ: ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ಪ್ರಕಾರ, ಈ ಬಣ್ಣವು ವಿಷಕಾರಿಯಾಗಿದೆ. ಇದು ಕಾರ್ಸಿನೋಜೆನೆಸಿಸ್, ಮ್ಯುಟಾಜೆನೆಸಿಸ್, ಕ್ರೋಮೋಸೋಮಲ್ ಫ್ರಾಕ್ಚರ್, ಟೆರಾಟೋಜೆನಿಸಿಟಿ, ಉಸಿರಾಟದ ಕಾಯಿಲೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಮಾಹಿತಿ ನೀಡುತ್ತಾರೆ.
![TIPS FOR PURITY OF GREEN VEGETABLES ADULTERATION IN GREEN VEGETABLES VEGETABLES PURITY CHECKING TIPS HOW TO FIND PURITY OF VEGETABLES](https://etvbharatimages.akamaized.net/etvbharat/prod-images/24-11-2024/22968063_thu1.jpg)
ತರಕಾರಿಗಳಲ್ಲಿ ಮ್ಯಾಲಕೈಟ್ ಹಸಿರು ಪತ್ತೆ: ಮೊದಲು ಹತ್ತಿ ಉಂಡೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅಥವಾ ಸಸ್ಯಜನ್ಯ (ವೆಜಿಟೆಬಲ್ ಆಯಿಲ್) ಎಣ್ಣೆಯಲ್ಲಿ ಅದ್ದಿ. ದ್ರವ ಪ್ಯಾರಾಫಿನ್ನಲ್ಲಿ ನೆನೆಸಿದ ಹತ್ತಿ ಉಂಡೆಯನ್ನು ತೆಗೆದುಕೊಳ್ಳಬಹುದು. ಈಗ ಆ ಹತ್ತಿಯ ಸಹಾಯದಿಂದ ಬೆಂಡೆಕಾಯಿಯನ್ನು ಒರೆಸಿ. ಹತ್ತಿಯ ಬಣ್ಣವನ್ನು ಬದಲಾಯಿಸದಿದ್ದರೆ ಅದು ತಾಜಾವಾಗಿರುತ್ತದೆ. ಒಂದು ವೇಳೆ ಬಣ್ಣವು ಹತ್ತಿಗೆ ಹತ್ತಿದರೆ, ಅಂತಹ ವಸ್ತುಗಳನ್ನು ಬಳಸದಿರುವುದು ಉತ್ತಮ.
ಎರಡನೇ ವಿಧಾನ: ಮೊದಲು ಒದ್ದೆಯಾದ ಬಿಳಿ ಬ್ಲಾಟಿಂಗ್ ಪೇಪರ್ ಮೇಲೆ ಕೆಲವು ತರಕಾರಿಗಳನ್ನು ಹಾಕಿ. ಕಾಗದವು ಬಣ್ಣಬಣ್ಣವಾಗಿದ್ದರೆ ಅದು ಮ್ಯಾಲಕೈಟ್ ಗ್ರೀನ್ (malachite green) ಬಣ್ಣದಿಂದ ಕಲಬೆರಕೆಯಾದಂತೆ, ಬಣ್ಣವಿಲ್ಲದಿದ್ದರೆ ಅದು ತಾಜಾವಾಗಿರುತ್ತದೆ.
![TIPS FOR PURITY OF GREEN VEGETABLES ADULTERATION IN GREEN VEGETABLES VEGETABLES PURITY CHECKING TIPS HOW TO FIND PURITY OF VEGETABLES](https://etvbharatimages.akamaized.net/etvbharat/prod-images/24-11-2024/22968063_thu2.jpg)
ಬಟಾಣಿಗಳಲ್ಲಿ ಕೃತಕ ಬಣ್ಣ ಪತ್ತೆ: ಮೊದಲು ಒಂದು ಗ್ಲಾಸಿನ ಲೋಟದಲ್ಲಿ ಸ್ವಲ್ಪ ಬಟಾಣಿ ಹಾಕಿ. ಈಗ ಅದಕ್ಕೆ ನೀರು ಹಾಕಿ ಮಿಕ್ಸ್ ಮಾಡಿ. ಅರ್ಧ ಗಂಟೆ ಕಾಲ ಇಡಿ. ನೀರಿನ ಬಣ್ಣ ಬದಲಾದರೆ ಕಲಬೆರಕೆ ಎಂದರ್ಥ, ಬಣ್ಣ ಬದಲಾಗದೆ ಉಳಿದರೆ ಅವು ತಾಜಾವಾಗಿವೆ ಎಂದರ್ಥ.
![TIPS FOR PURITY OF GREEN VEGETABLES ADULTERATION IN GREEN VEGETABLES VEGETABLES PURITY CHECKING TIPS HOW TO FIND PURITY OF VEGETABLES](https://etvbharatimages.akamaized.net/etvbharat/prod-images/24-11-2024/22968063_thu3.jpg)
ಸಿಹಿ ಆಲೂಗಡ್ಡೆಯಲ್ಲಿ ರೋಡಮೈನ್ ಬಿ ಪತ್ತೆ: ಮೊದಲು ಹತ್ತಿ ಉಂಡೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅಥವಾ ಸಸ್ಯಜನ್ಯ ಎಣ್ಣೆಯಲ್ಲಿ ಅದ್ದಿ. ದ್ರವ ಪ್ಯಾರಾಫಿನ್ನಲ್ಲಿ ನೆನೆಸಿದ ಹತ್ತಿ ಉಂಡೆಯನ್ನು ತೆಗೆದುಕೊಳ್ಳಬಹುದು. ಈಗ ಆ ಹತ್ತಿಯ ಸಹಾಯದಿಂದ ಸಿಹಿ ಗೆಣಸುಗಳನ್ನು ಒರೆಸಿ. ಹತ್ತಿ ಬಣ್ಣ ಬದಲಾಗದಿದ್ದರೆ ಅದು ತಾಜಾವಾಗಿರುತ್ತದೆ. ಹಾಗಾಗಿ ಅಂತಹ ವಸ್ತುಗಳನ್ನು ಬಳಸದಿರುವುದು ಉತ್ತಮ.