ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಿಂದ ರಾಜ್ಯದ ಪರಮೋಚ್ಚ ಅಹಿಂದ ನಾಯಕ ಸಿದ್ದರಾಮಯ್ಯ, ಪರಮೋಚ್ಚ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್ ಅನ್ನೋದು ಸಾಬೀತಾಗಿದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ - ಜೆಡಿಎಸ್ ಮೈತ್ರಿ ಕರ್ನಾಟಕದಲ್ಲಿ ಕೆಲಸ ಮಾಡುವುದಿಲ್ಲ. ನಮ್ಮ ಗ್ಯಾರಂಟಿಗಳಿಂದ ಬಡವರು ಕೈ ಹಿಡಿದಿದ್ದಾರೆ. ಮುಡಾ ಪ್ರಕರಣ ಸಂಬಂಧ ಸಿದ್ದರಾಮಯ್ಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಡಿಕೆಶಿ ವಿರುದ್ಧ ಸುಳ್ಳು ಆರೋಪ ಮಾಡಿದರು. ಇದಕ್ಕೆ ಅಹಿಂದ ಸಮುದಾಯ ಉತ್ತರ ನೀಡಿದೆ ಎಂದರು.
ಅನಾಲಿಸಿಸ್ ಬೇರೆ, ಗ್ರೌಂಡ್ ರಿಯಾಲಿಟಿ ಬೇರೆ. ನಾನು ಯೋಗೇಶ್ವರ್ ಜೊತೆ ಹಳ್ಳಿ ಹಳ್ಳಿ ಸುತ್ತಿದ್ದೇನೆ. ನಮ್ಮ ಗ್ಯಾರಂಟಿ ತೆಗೆದುಕೊಂಡ ಮಹಿಳೆ ಹೇಗೆ ಮೋಸ ಮಾಡಲು ಸಾಧ್ಯ?. ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮಹಾರಾಷ್ಟ್ರದಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಒಂದು ಸೋಲು ಇನ್ನೊಂದು ಗೆಲುವಿಗೆ ಮುನ್ನುಡಿ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ನಮ್ಮ ಕಾರ್ಯಕ್ರಮ, ಯೋಜನೆಗೆ ಜನ ಬೆಂಬಲಿಸಿದ್ದಾರೆ. ಬಿಜೆಪಿಯ ಜಾತಿ ವಾದಕ್ಕೆ, ಕೋಮುವಾದಕ್ಕೆ ಜನ ತಿರುಗೇಟು ಕೊಟ್ಟಿದ್ದಾರೆ. ಜನಪರ ಸರ್ಕಾರಕ್ಕೆ ಜನಬೆಂಬಲ ಸಿಕ್ಕಿದೆ. ಇವರ ಆರೋಪಕ್ಕೆ ಯಾವುದೇ ಬುನಾದಿ ಇರಲಿಲ್ಲ. ಮೂರು ಕ್ಷೇತ್ರದಲ್ಲಿ ಒಳ್ಳೆಯ ಲೀಡ್ನಿಂದ ಗೆದ್ದಿದ್ದೇವೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಕೈ ಹಿಡಿದಿದೆ. ಪಾರದರ್ಶಕ ಆಡಳಿತ ಗೆದ್ದಿದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಅಭಾದಿತ: ಸಚಿವ ಬೈರತಿ ಸುರೇಶ್