ಬೆಂಗಳೂರು:ಮಾಜಿ ಸಚಿವ ಹಾಗು ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ಸುರೇಶ್ ಕುಮಾರ್‌ಗೆ ಚಿಕೂನ್‌ಗುನ್ಯಾ, ಐಸಿಯುನಲ್ಲಿ ಚಿಕಿತ್ಸೆ - BJP MLA Suresh Kumar - BJP MLA SURESH KUMAR
ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ಎಸ್.ಸುರೇಶ್ ಕುಮಾರ್ (IANS)
Published : Sep 4, 2024, 6:58 AM IST
ಮೈಸೂರು ಪಾದಯಾತ್ರೆ ಬಳಿಕ ತಿರುಪತಿ ಪ್ರವಾಸ ಮಾಡಿದ್ದ ಸುರೇಶ್ ಕುಮಾರ್‌ಗೆ ಕಳೆದ ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಅಪರೂಪದ ಮ್ಯೂಟೆಂಟ್ ಚಿಕೂನ್‌ಗುನ್ಯಾ ತಗುಲಿರಬಹುದು ಎಂದು ಹೇಳಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರು ಇನ್ನೂ 7 ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಈ ಕುರಿತು ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ನಿರೀಕ್ಷಿಸಲಾಗಿದೆ.