ETV Bharat / state

ಟ್ಯೂಷನ್‌ಗೆ ಬರುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಪರಾರಿಯಾದ ಶಿಕ್ಷಕ ಒಂದೂವರೆ ತಿಂಗಳ ಬಳಿಕ ಸೆರೆ - TUITION TEACHER ARRESTED

ತನ್ನ ಬಳಿ ಟ್ಯೂಷನ್‌ಗೆ ಬರುತ್ತಿದ್ದ 10ನೇ ತರಗತಿಯ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು, ಒಂದೂವರೆ ತಿಂಗಳು ತಲೆಮರೆಸಿಕೊಂಡಿದ್ದ ಶಿಕ್ಷಕನನ್ನು ಬೆಂಗಳೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಇದು ಸಾಧ್ಯವಾಗಿದ್ದು ಲುಕ್‌ಔಟ್‌ ನೋಟಿಸ್‌ನಿಂದ ಎಂಬುದು ಗಮನಾರ್ಹ.

ಬಂಧಿತ ಟ್ಯೂಷನ್ ಟೀಚರ್
ಬಂಧಿತ ಟ್ಯೂಷನ್ ಟೀಚರ್ (ETV Bharat)
author img

By ETV Bharat Karnataka Team

Published : 17 hours ago

ಬೆಂಗಳೂರು: ಟ್ಯೂಷನ್‌ಗೆ ಬರುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಆರೋಪಿ ಶಿಕ್ಷಕನನ್ನು ಜೆ.ಪಿ.ನಗರ ಪೊಲೀಸರು ಒಂದೂವರೆ ತಿಂಗಳ ನಂತರ ಬಂಧಿಸಿದ್ದಾರೆ. ತನ್ನ ಮಗಳನ್ನು ಟ್ಯೂಷನ್ ಟೀಚರ್ ಕರೆದೊಯ್ದಿರುವುದಾಗಿ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಭಿಷೇಕ್ ಗೌಡ (25) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಪ್ರಾಪ್ತೆಯನ್ನು ಸರ್ಕಾರಿ ಬಾಲಮಂದಿರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪೂರ್ಣ ವಿವರ: ಕನಕಪುರದ ದೊಡ್ಡಸಾತೇನಹಳ್ಳಿಯ ಅಭಿಷೇಕ್‌ಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಒಂದು ಮಗುವಿದೆ. ವೈಯಕ್ತಿಕ ಕಾರಣಗಳಿಂದ ಪತ್ನಿಯಿಂದ ಆರೋಪಿ ದೂರವಾಗಿದ್ದ. ನ್ಯೂಟ್ರಿಷಿಯನ್ ಆಗಿಯೂ ಕೆಲಸ ಮಾಡುತ್ತಿದ್ದ. ಡಿಪ್ಲೋಮಾ ವ್ಯಾಸಂಗ ಮಾಡಿದ್ದ ಆರೋಪಿ, ಜೆ.ಪಿ.ನಗರದ ಸಾರಕ್ಕಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಹಲವು ವರ್ಷಗಳಿಂದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮನೆಯಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ಬಾಲಕಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಆರು ವರ್ಷಗಳಿಂದ ಟ್ಯೂಷನ್‌ಗೆ ಬರುತ್ತಿದ್ದಳು. ಕಳೆದ ನವೆಂಬರ್ 23ರಂದು ಎಂದಿನಂತೆ ಟ್ಯೂಷನ್‌ಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಮಗಳು ಬಾರದಿರುವುದರಿಂದ ಆತಂಕಗೊಂಡ ಪೋಷಕರು ಆರೋಪಿಯ ಮನೆಗೆ ಹೋದಾಗ ಬೀಗ ಹಾಕಿರುವುದನ್ನು ಕಂಡಿದ್ದರು. ಟ್ಯೂಷನ್ ಟೀಚರ್ ಪುಸಲಾಯಿಸಿ ಮಗಳನ್ನು ಕರೆದೊಯ್ದಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಒಂದೂವರೆ ತಿಂಗಳ ಬಳಿಕ ಇದೀಗ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಬಾಲಕಿಯನ್ನು ಮದುವೆಯಾಗಿದ್ದ ಟೀಚರ್: ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯ ಮನೆ ಜಾಲಾಡಿದಾಗ ಉದ್ದೇಶಪೂರ್ವಕವಾಗಿ ಮೊಬೈಲ್ ಬಿಟ್ಟುಹೋಗಿರುವುದನ್ನು ಕಂಡುಕೊಂಡಿದ್ದರು. ಒಂದು ವರ್ಷದಿಂದ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹಾಗೂ ಮದುವೆಯಾಗಿರುವ ಬಗೆಗಿನ ವಿಡಿಯೋ ಮೊಬೈಲ್‌ನಲ್ಲಿ ಇರುವುದನ್ನು ಪೊಲೀಸರು ಗಮನಿಸಿದ್ದರು. ಆರೋಪಿ ಹಾಗೂ ಬಾಲಕಿ ಬಳಿ ಮೊಬೈಲ್ ಇರದ ಕಾರಣ ಆರಂಭದಲ್ಲಿ ಪೊಲೀಸರಿಗೆ ಪತ್ತೆ ಹಚ್ಚುವುದು ಕಷ್ಟವಾಗಿತ್ತು. ದಾರಿಯಲ್ಲಿ ಆರೋಪಿ ಆಕೆಯನ್ನು ಕರೆದುಕೊಂಡು ಹೋಗಿರುವ ಬಗ್ಗೆ ಸಿಸಿಟಿವಿ ಕ್ಯಾಮರಾ ಮೂಲಕ ಖಚಿತಪಡಿಸಿದ್ದರು. ಪೊಲೀಸರಿಗೆ ತಾವಿರುವ ಬಗ್ಗೆ ಗೊತ್ತಾಗದಿರಲು ಆರೋಪಿ ಮನೆಯಲ್ಲೇ ಮೊಬೈಲ್ ಬಿಟ್ಟುಹೋಗಿದ್ದ. ಅಲ್ಲದೇ ಹೋಗುವಾಗ 70 ಸಾವಿರ ರೂಪಾಯಿ ಹಣ ತೆಗೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲಕಿ ಸ್ನಾನದ ವಿಡಿಯೋ ಚಿತ್ರೀಕರಿಸಿದ ಅಪರಾಧಿಗೆ ಜೈಲು ಶಿಕ್ಷೆ: ಮಂಗಳೂರು ಕೋರ್ಟ್ ತೀರ್ಪು

ಲುಕ್‌ಔಟ್ ನೋಟಿಸ್‌ನಿಂದ ಸಿಕ್ಕಿಬಿದ್ದ: ಯಾರಿಗೂ ತಿಳಿಯದಿರಲು ಆರೋಪಿ ಮಂಡ್ಯದ ಮಳವಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಬಾಲಕಿಯನ್ನು ಇರಿಸಿದ್ದ. ತಾವಿರುವ ಸ್ಥಳದ ಬಗ್ಗೆ ಗೊತ್ತಾಗದಿರಲು ಆನ್‌ಲೈನ್ ಸೇರಿದಂತೆ ಇತರ ಹಣದ ವಹಿವಾಟು ಮಾಡದೇ ಚಾಣಾಕ್ಷತನ ಮರೆದಿದ್ದ. ಈತನ ಪತ್ತೆಗೆ ವಿವಿಧ ಆಯಾಮಗಳಿಂದ ತನಿಖೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಆರೋಪಿ ಪತ್ತೆಗಾಗಿ ಎಲ್ಲಾ ಪೊಲೀಸ್ ಠಾಣೆಗಳಿಗೂ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಆರೋಪಿಯ ಇರುವಿಕೆಯ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ರೂ ನಗದು ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿತ್ತು.

ಮಳವಳ್ಳಿ ಸಮೀಪ ಸಾರ್ವಜನಿಕರೊಬ್ಬರು ಪ್ರಕಟಣೆಯನ್ನು ಕಂಡು, ಕೂಡಲೇ ಅಭಿಷೇಕ್ ಬಗ್ಗೆ ಮನೆ ಮಾಲೀಕರ ಗಮನಕ್ಕೆ ತಂದಿದ್ದರು. ಈ ವಿಷಯಯನ್ನು ಜೆ.ಪಿ.ನಗರ ಪೊಲೀಸರಿಗೆ ಮುಟ್ಟಿಸಿದ್ದರು. ಇದರ ಆಧಾರದಲ್ಲಿ ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಘೋಷಿಸಲಾದ 25 ಸಾವಿರ ರೂ. ನಗದು ಬಹುಮಾನ ಸ್ವೀಕರಿಸಲು ಮಾಹಿತಿದಾರರು ತಿರಸ್ಕರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಯುವತಿಯನ್ನು ಮದುವೆ ಮಾಡಿಕೊಡುವಂತೆ ಕೇಳಲು ಹೋಗಿದ್ದ ವಿವಾಹಿತನ ಹತ್ಯೆ, ನಾಲ್ವರು ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.