ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಬಡ್ಡಿ ಕಟ್ಟದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ - Hubballi Assault Case - HUBBALLI ASSAULT CASE

ಹುಬ್ಬಳ್ಳಿಯ ಗಂಗಾಧರ ನಗರದಲ್ಲಿ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐದಾರು ಜನ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

Vinayaka Rona
ಹಲ್ಲೆಗೊಳಗಾದ ಯುವಕ ವಿನಾಯಕ ರೋಣ (ETV Bharat)

By ETV Bharat Karnataka Team

Published : Oct 1, 2024, 6:55 PM IST

ಹುಬ್ಬಳ್ಳಿ:ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಐದಾರು ಜನ ಯುವಕನೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ನಗರದಲ್ಲಿ ಕೇಳಿಬಂದಿದೆ. ಗಂಗಾಧರ ನಗರದಲ್ಲಿ ವಿನಾಯಕ ರೋಣ ಎಂಬಾತ ಹಲ್ಲೆಗೊಳಗಾದ ಯುವಕ. 5 ಸಾವಿರ ರೂ. ಹಣಕ್ಕೆ ಬಡ್ಡಿ ಕೊಡದಿರುವ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವುದಾಗಿ ಯುವಕ ಹಾಗೂ ಆತನ ಸಂಬಂಧಿಕರು ಆರೋಪಿಸಿದ್ದಾರೆ.

"ನಾನು ಸರಿಯಾಗಿ ಬಡ್ಡಿ ಕಟ್ಟಿಕೊಂಡು ಬಂದಿದ್ದೇನೆ. ಹೀಗಿದ್ದರೂ ಮನೆಗೆ ಕರೆದು ಗಣೇಶ ಸಿದ್ದಾಪುರ, ಅಭಿಷೇಕ ರಾಮಗೇರಿ, ಯಲ್ಲಪ್ಪ ರಾಮಗೇರಿ, ವರುಣ ಭಜಂತ್ರಿ, ಮಣಿಕಂಠ ಸಿದ್ದಾಪುರ, ನಾಗರಾಜ್ ಭಜಂತ್ರಿ ಹಾಗು ತಿರಕ್ ಭಜಂತ್ರಿ ಎಂಬವರು ಹಲ್ಲೆ ಮಾಡಿದ್ದಾರೆ" ಎಂದು ಗಾಯಾಳು ವಿನಾಯಕ ಹೇಳಿದರು.

ಹಲ್ಲೆಗೊಳಗಾದ ಯುವಕ ವಿನಾಯಕ ರೋಣ ಹೇಳಿಕೆ (ETV Bharat)

ಆದರೆ, ಪೊಲೀಸ್ ಮೂಲಗಳ ಪ್ರಕಾರ, ಗೃಹಿಣಿ ವಿಚಾರವಾಗಿ ಯುವಕನಿಗೆ ಬುದ್ಧಿಮಾತು ಹೇಳಲು ಹೋದಾಗ, ವಿನಾಯಕ ಓಡಿ ಹೋಗಿ ಗೋಡೆ ಹಾರಿ ಬಿದ್ದು ಗಾಯಗೊಂಡಿದ್ದಾನೆ. ಹೀಗಾಗಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಿಮ್ಸ್‌ ಆಸ್ಪತ್ರೆಗೆ ಕಾನೂನು ಸುವ್ಯಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ಬೆಂಡಿಗೇರಿ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ರೌಡಿಶೀಟರ್ ಮನೆಗೆ ನುಗ್ಗಿ ಹಲ್ಲೆ, 6 ಆರೋಪಿಗಳ ಬಂಧನ

ABOUT THE AUTHOR

...view details