ಆನೇಕಲ್:ವ್ಯಕ್ತಿಯೊಬ್ಬ ವಕೀಲನಿಗೆ ಚೂರಿಯಿಂದ ಇರಿದು ಪೊಲೀಸರಿಗೆ ಶರಣಾದ ಘಟನೆ ಆನೇಕಲ್ ಪೊಲೀಸ್ ಠಾಣೆ ಬಳಿ ಬುಧವಾರ ನಡೆದಿದೆ. ಆನೇಕಲ್ ನಿವಾಸಿ ಮಂಜುನಾಥ್ ಚೂರಿ ಇರಿತಕ್ಕೊಳಗಾದ ವಕೀಲನಾಗಿದ್ದು, ಕಮ್ಮಸಂದ್ರ ಅಗ್ರಹಾರದ ರಮೇಶ್ ಆರೋಪಿಯಾಗಿದ್ದಾನೆ.
ಇರಿತದ ನಂತರ ಆನೇಕಲ್ ಠಾಣೆಗೆ ನೇರವಾಗಿ ಬಂದು ಶರಣಾದ ಆರೋಪಿ ರಮೇಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಂಭೀರ ಗಾಯಗೊಂಡ ವಕೀಲ ಮಂಜುನಾಥ ಅವರನ್ನು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇದೀಗ ನಾರಾಯಣ ಹೆಲ್ತ್ ಸಿಟಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.