ದುಬೈ: ಐಸಿಸಿ ಪ್ರಕಟಿಸಿರುವ ನೂತನ ಡಬ್ಲ್ಯೂಟಿ20ಐ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಲ್ವರು ಆಟಗಾರ್ತಿಯರು ಟಾಪ್ 20 ಕಾಣಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಐದನೇ ಸ್ಥಾನ, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಶಫಾಲಿ ವರ್ಮಾ ಅವರು ಜಂಟಿಯಾಗಿ 11ನೇ ಸ್ಥಾನ, ಜೆಮಿಮಾ ರಾಡ್ರಿಗಸ್ 19 ನೇ ಪಡೆದುಕೊಂಡಿದ್ದಾರೆ.
ಬ್ಯಾಟರ್ಗಳ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಒಂದು ಸ್ಥಾನ, ಶಫಾಲಿ ನಾಲ್ಕು ಸ್ಥಾನ ಮೇಲೇರಿದ್ದಾರೆ. ಬಿಗ್ ಹಿಟ್ಟರ್ ರಿಚಾ ಘೋಷ್ ಪ್ರಸ್ತುತ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದಾರೆ. ಬೆತ್ ಮೂನಿ 769 ಅಂಕಗಳೊಂದಿಗೆ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಮೂರನೇ ಸ್ಥಾನದಲ್ಲಿದ್ದರೆ, ವೇಗಿ ರೇಣುಕಾ ಸಿಂಗ್ ಒಂಬತ್ತನೇ ಸ್ಥಾನಕ್ಕೆ ಜಿಗಿದಿದ್ದಾರೆ. ಎಡಗೈ ಸ್ಪಿನ್ನರ್ ರಾಧಾ ಯಾದವ್ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ.