ETV Bharat / sports

IND vs ENG: ವಿಶ್ವದಾಖಲೆ ಬರೆದ ಹರ್ಷಿತ್​ ರಾಣಾ, ಶ್ರೇಯಸ್​ ಅಯ್ಯರ್​! - SHREYAS IYER HARSHIT RANA RECORD

IND vs ENG ODI Series: ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಮತ್ತು ಹರ್ಷಿತ್​ ರಾಣಾ ವಿಶ್ವದಾಖಲೆ ಬರೆದಿದ್ದಾರೆ.

IND VS ENG 1ST ODI RECORDS  IND VS ENG ODI SERIES  SHREYAS IYER  HARSHIT RANA
Harshit Rana and Shreyas Iyer (IANS)
author img

By ETV Bharat Sports Team

Published : Feb 7, 2025, 1:38 PM IST

IND vs ENG ODI Series: ಗುರುವಾರ ನಡೆದ ಇಂಗ್ಲೆಂಡ್​ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳಿಂದ ಗೆಲುವು ಸಾಧಿಸಿರುವುದು ಗೊತ್ತೇ ಇದೆ. ಆದರೆ, ಈ ಪಂದ್ಯದಲ್ಲಿ ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್, ಅಕ್ಷರ್​ ಪಾಟೆಲ್​ ಬ್ಯಾಟಿಂಗ್​ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿದರೇ, ಬೌಲಿಂಗ್​ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಹರ್ಷಿತ್​ ರಾಣಾ ತಲಾ 3 ವಿಕೆಟ್​ಗಳನ್ನು ಕಬಳಿಸುವುದರ ಮೂಲಕ ಮಿಂಚಿದರು. ಇದೇ ಪಂದ್ಯದಲ್ಲಿ ಅಯ್ಯರ್​ ಮತ್ತು ಹರ್ಷಿತ್ ರಾಣಾ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ಶ್ರೇಯಸ್​ ಅಯ್ಯರ್​ ದಾಖಲೆ: ಈ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ಅಯ್ಯರ್​ ಉತ್ತಮ ಬ್ಯಾಟಿಂಗ್​ ಮಾಡಿ ವೇಗವಾಗಿ ಅರ್ಧಶತಕ ಸಿಡಿಸಿದರು. ತಮ್ಮ ಈ ಇನ್ನಿಂಗ್ಸ್​ನಲ್ಲಿ 36 ಎಸೆತಗಳನ್ನು ಎದುರಿಸಿದ ಅಯ್ಯರ್​ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಾಯದಿಂದ 59 ರನ್​ ಚಚ್ಚಿದರು. ಇದರೊಂದಿಗೆ ದಾಖಲೆಯನ್ನು ಬರೆದರು.

ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 50ಕ್ಕಿಂತ ಹೆಚ್ಚು ಸರಾಸರಿ ಮತ್ತು 100ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಮೊದಲ ಬ್ಯಾಟರ್​ ಎಂಬ ಅಪರೂಪದ ದಾಖಲೆ ಬರೆದರು. ಹಿಂದೆಯೂ ಈ ಸಾಧನೆ ಮಾಡಿದ ಬ್ಯಾಟರ್​ಗಳಲ್ಲಿ ಗಿಲ್ ಎರಡನೇ ಸ್ಥಾನದಲ್ಲಿದ್ದರೆ, ಎಬಿ ಡಿವಿಲಿಯರ್ಸ್ ಐದನೇ ಸ್ಥಾನದಲ್ಲಿದ್ದಾರೆ.

ಹರ್ಷಿತ್​ ರಾಣಾ ದಾಖಲೆ: ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯದೊಂದಿಗೆ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಹರ್ಷಿತ್ ರಾಣಾ ಪಂದ್ಯದ ಆರಂಭದಲ್ಲಿ ಹೆಚ್ಚಿನ ರನ್​ ಬಿಟ್ಟುಕೊಟ್ಟರು. ಅದರಲ್ಲೂ ಓವರ್​ ಒಂದರಲ್ಲೇ 26 ರನ್​ ಹೊಡಿಸಿಕೊಂಡು ದುಬಾರಿ ಬೌಲರ್​ ಎನಿಸಿಕೊಂಡರು.

ಬಳಿಕ ಕಮ್​ಬ್ಯಾಕ್​ ಮಾಡಿದ ರಾಣಾ ಉತ್ತಮ ಬೌಲಿಂಗ್​ ಮಾಡಿದರು. ಒಟ್ಟು 7 ಓವರ್‌ಗಳನ್ನು ಬೌಲ್ ಮಾಡಿ 53 ರನ್‌ಗಳನ್ನು ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ರಾಣಾ ಅಪರೂಪದ ದಾಖಲೆ ನಿರ್ಮಿಸಿದರು. ಟೆಸ್ಟ್, ಏಕದಿನ, ಟಿ20 ಮೂರು ಸ್ವರೂಪಗಳಲ್ಲಿ ಚೊಚ್ಚಲ ಪಂದ್ಯದಲ್ಲೇ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: IND vs ENG​ ಮೊದಲ ಪಂದ್ಯದಿಂದ ಹೊರಗುಳಿದ ವಿರಾಟ್​ ಕೊಹ್ಲಿ: ಕಾರಣ ಏನು?

ಇತ್ತೀಚೆಗೆ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಣಾ, ಮೊದಲ ಪಂದ್ಯದಲ್ಲೇ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಇದಾದ ಬಳಿಕ, ಇಂಗ್ಲೆಂಡ್​ ವಿರುದ್ಧ ನಡೆದ T20 ಚೊಚ್ಚಲ ಪಂದ್ಯದಲ್ಲೂ ಮೂರು ವಿಕೆಟ್ ಉರುಳಿಸಿದರು. ನಿನ್ನೆ ನಡೆದ ಏಕದಿನ ಪಂದ್ಯದಲ್ಲೂ 3 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

ಕಳಪೆ ದಾಖಲೆ ಬರೆದ ರಾಣಾ: ಈ ದಾಖಲೆ ಜೊತೆಗೆ ಕಳಪೆ ದಾಖಲೆಯನ್ನು ರಾಣಾ ಬರೆದಿದ್ದಾರೆ ಚೊಚ್ಚಲ ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಮೊದಲ ಭಾರತೀಯ ಬೌಲರ್ ಎಂಬ ಅತ್ಯಂತ ಕೆಟ್ಟ ದಾಖಲೆಯನ್ನೂ ಬರೆದಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ರಶೀದ್​ ಖಾನ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.