ಹೈದರಾಬಾದ್: ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದು ಎನಿಸಿಕೊಂಡಿರುವ ಕ್ರಿಕೆಟ್ನಲ್ಲಿ ಆಟಗಾರರು ಬಳಸುವ ಬ್ಯಾಟ್ನಿಂದ ಹಿಡಿದು ಇದರಲ್ಲಿ ಬಳಕೆಯಾಗುವ ಪ್ರತಿಯೊಂದು ವಸ್ತುಗಳು ಬಲು ದುಬಾರಿ ಬೆಲೆಯದ್ದಾಗಿವೆ. ಅದರಲ್ಲೂ ಅಂಪೈರ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡವ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಎಲ್‌ಇಡಿ ಸ್ಟಂಪ್ಸ್ಗಳು ಕೂಡ ಹೆಚ್ಚಿನ ಬೆಲೆಯದ್ದಾಗಿವೆ. ಹಾಗಾದ್ರೆ ಕ್ರಿಕೆಟ್ನಲ್ಲಿ ಬಳಕೆಯಾಗುವ ಸ್ಟಂಪ್ಸ್ ಬೆಲೆ ಎಷ್ಟು ಎಂಬುದರ ಮಾಹಿತಿಯನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ವಿಕೆಟ್ ಬಳಕೆ: ಆರಂಭದಲ್ಲಿ ಕ್ರಿಕೆಟ್ನಲ್ಲಿ ಕೇವಲ ಎರಡು ವಿಕೆಟ್ಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ ಎರಡು ವಿಕೆಟ್ಗಳ ಮಧ್ಯ ಹೆಚ್ಚಿನ ಸ್ಥಳವಿರುವುದರಿಂದ ಬೌಲ್ ವಿಕೆಟ್ಗೆ ತಾಗದೇ ಹಿಂದೆ ಹೋಗುತ್ತಿತ್ತು. ಇದು ಬ್ಯಾಟರ್ಗಳಿಗೆ ಹೆಚ್ಚಿನ ಅನುಕೂಲಕರವಾಗಿತ್ತು. ಆದ್ರೆ 1775 ರಲ್ಲಿ, ಲಂಪಿ ಸ್ಟೀವನ್ಸನ್ ಎಂಬ ವ್ಯಕ್ತಿ ಮೊದಲ ಬಾರಿಗೆ ಕ್ರಿಕೆಟ್‌ಗೆ 3 ಸ್ಟಂಪ್‌ಗಳನ್ನು ಪರಿಚಯಿಸಿದರು. ನಂತರ ಆ ನಿಯಮವು ಆಟದಲ್ಲಿ ಮುಂದುವರೆಸಲಾಯಿತು ಎಂದು ಹೇಳಲಾಗುತ್ತದೆ. ಮೊದಲಿಗೆ ಕ್ರಿಕೆಟ್ನಲ್ಲಿ ಮರದ ಕಟ್ಟಿಗೆಯಿಂದ ಮಾಡಲಾದ ಸ್ಟಂಪ್ಸ್ಗಳನ್ನು ಬಳಕೆ ಮಾಡಲಾಗುತ್ತಿತ್ತು.
ಆದರೇ ಕೆಲವೊಮ್ಮೆ ಚೆಂಡು ಬ್ಯಾಟ್ಗೆ ತಾಗಿ ವಿಕೆಟ್ ಕೀಪರ್ ಕೈ ಸೇರಿದರೇ ಸರಿಯಾದ ನಿರ್ಧಾರ ಘೋಷಿಸಲು ಅಂಪೈರ್ಗೆ ಕಷ್ಟವಾಗುತ್ತಿತ್ತು. ನಂತರ ಆಟ ಹೆಚ್ಚು ಪ್ರಸಿದ್ಧಿ ಪಡೆಯುತ್ತ ಹೋದಂತೆ ಹಲವಾರು ಬದಲಾವಣೆಗಳು ಆದವು. ನಂತರ 2008ರಲ್ಲಿ ಆಸ್ಟ್ರೇಲಿಯಾದ BBG ಕಂಪನಿ ಕ್ಯಾಮೆರಾಗಳನ್ನು ಹೊಂದಿದ ಸ್ಟಂಪ್‌ಗಳನ್ನು ಪರಿಚಯಿಸಿತು. ಬಳಿಕ ಸ್ಟಂಪ್ಸ್ ಕಾಮಿ ಲಿಮಿಟೆಡ್ ಇದನ್ನು ಖರೀದಿ ಮಾಡಿತು. ಅದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಮೊದಲ ಬಾರಿಗೆ ಇವುಗಳನ್ನು ಬಳಕೆ ಮಾಡಲಾಯಿತು.