Jaiswal vs Sam Constas Viral Video: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ಸ್ಲೆಡ್ಜಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ 19 ವರ್ಷದ ಸ್ಯಾಮ್ ಕಾನ್ಸ್ಟಾಸ್ಗೆ ತಕ್ಕ ಉತ್ತರ ನೀಡಿದ್ದಾರೆ.
ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕಾನ್ಸ್ಟಾಸ್ ಬ್ಯಾಟಿಂಗ್ ಮಾಡುತ್ತಿದ್ದ ಜೈಸ್ವಾಲ್ ಅವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದಾನೆ. ಅಲ್ಲದೇ ಪ್ರತಿ ಬೌಲಿಂಗ್ ವೇಳೆ ಕೂಗಾಡುತ್ತ ಜೈಸ್ವಾಲ್ ಅವರ ಏಕಾಗ್ರತೆಗೆ ಭಂಗ ತರಲು ಯತ್ನಿಸಿದ್ದಾನೆ. ಇದರಿಂದ ಕುಪಿತಗೊಂಡ ಜೈಸ್ವಾಲ್ " ಮೊದಲು ನಿನ್ನ ಕೆಲಸವನ್ನು ನೆಟ್ಟಗೆ ಮಾಡು" ಎಂದು ಮಾತಿನಿಂದ ಚಾಟಿ ಬೀಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಜೈಸ್ವಾಲ್ ಮುಂದಿನ ಎಸೆತದಲ್ಲಿ, ಸ್ಯಾಮ್ ಕಾನ್ಸ್ಟಾಸ್ ಕಡೆ ಬಲವಾಗಿ ಹೊಡೆದಿದ್ದಾರೆ. ಚೆಂಡು ನೇರವಾಗಿ ಹೋಗಿ ಕಾನ್ಸ್ಟಾಸ್ ದೇಹಕ್ಕೆ ಬಲವಾಗಿ ತಾಗಿದೆ. ಚೆಂಡು ಬಿದ್ದ ರಭಸಕ್ಕೆ ನೋವುಂಟಾದರೂ, ಅದನ್ನು ತೋರಿಸಿಕೊಂಡರೆ ಎಲ್ಲಿ ಮರ್ಯಾದೆ ಹೋಗುತ್ತೆ ಎಂದು ತುಟಿ ಪಿಟಕ್ ಅನ್ನದೆ ಕಾನ್ಸ್ಟಾಸ್ ಫೀಲ್ಡಿಂಗ್ ಮುಂದುವರೆಸಿದ್ದಾರೆ. ಜೈಸ್ವಾಲ್ ಕೊಟ್ಟ ಉತ್ತರಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.
Sam Konstas sledging Yashasvi Jaiswal & then Yashasvi Jaiswal replied to him:
— Tanuj Singh (@ImTanujSingh) December 30, 2024
Jaiswal- " do your job. why you are talking?".
- yashasvi jaiswal you beauty..!!! 🙇👌pic.twitter.com/FgmjZDijBS
ವಿವಾದಿತ ತೀರ್ಪಿಗೆ ಬಲಿಯಾದ ಜೈಸ್ವಾಲ್ ; ಏತನ್ಮಧ್ಯೆ, ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ತೋರಿದರು. ಆದರೇ 70.5ನೇ ಓವರ್‌ನಲ್ಲಿ ವಿವಾದಾತ್ಮಕ ತೀರ್ಪಿನಿಂದಾಗಿ 84 ರನ್‌ಗಳಿಗೆ ಔಟಾಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ 4ನೇ ಪಂದ್ಯದಲ್ಲಿ ಎರಡನೇ ಬಾರಿಗೆ ಶತಕ ವಂಚಿತರಾದರು.
ಇನಿಂಗ್ಸ್‌ನ 71ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಅವರ ಎಸೆದ ಲೆಗ್‌ಸೈಡ್ ಬೌನ್ಸರ್ ಬಾಲ್ ಪುಲ್ ಮಾಡಲು ಜೈಸ್ವಾಲ್ ಯತ್ನಿಸಿದ್ದರು. ಆದರೇ ಬೌಲ್ ಮಿಸ್ ಆಗಿ ಕೀಪರ್ ಕೈ ಸೇರಿತ್ತು. ಬಳಿಕ ಆಸೀಸ್ ಪಡೆ ಔಟ್ಗಾಗಿ ಮನವಿ ಮಾಡಿತ್ತು. ಆದ್ರೆ ಫೀಲ್ಡ್ ಅಂಪೈರ್ ಅವರ ಮನವಿಯನ್ನು ತಿರಸ್ಕರಿಸಿದ್ದರು. ಆಗ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ತಕ್ಷಣವೇ DRS ತೆಗೆದುಕೊಂಡರು.
ಈ ವೇಳೆ ಮೂರನೇ ಅಂಪೈರ್ ಬೌಲ್ ಟ್ರಾಕಿಂಗ್ ಮಾಡುವಾಗ ಚೆಂಡು ಬ್ಯಾಟ್‌ಗೆ ತಾಕಿದ್ದು ಕಂಡು ಬಂದಿರಲಿಲ್ಲ. ಅಲ್ಲದೇ ಸ್ನಿಕೋ ಮೀಟರ್ನಲ್ಲೂ ಯಾವುದೇ ಸ್ಪೈಕ್‌ಗಳು ಕಾಣಿಸಿಕೊಂಡಿರಲಿಲ್ಲ. ಕೇವಲ ಚೆಂಡಿನಲ್ಲಿ ವೇರಿಯೇಷನ್ ಕಂಡು ಬಂದ ಕಾರಣ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದ್ದರು. ಇದು ಭಾರೀ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: 4ನೇ ಟೆಸ್ಟ್ ಸೋತರೂ WTC ಫೈನಲ್ ತಲುಪಲು ಭಾರತಕ್ಕಿರೋದು ಇದೋಂದೆ ದಾರಿ: ಹೀಗಾದ್ರೆ ಫೈನಲ್ ಫಿಕ್ಸ್!