Yashasvi Jaiswal: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ರೀತಿಯಲ್ಲಿ ಔಟಾಗಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 184 ರನ್ಗಳಿಂದ ಸೋಲನುಭವಿಸಿದೆ. ಆದ್ರೆ ಈ ಟೆಸ್ಟ್ನ 5ನೇ ದಿನವಾದ ಇಂದು ಆಸ್ಟ್ರೇಲಿಯನ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದ ಜೈಸ್ವಾಲ್, ವಿವಾದಾತ್ಮಕ ತೀರ್ಪಿನಿಂದ ಔಟಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
🗣 " yeh optical illusion hai."#SunilGavaskar questions the 3rd umpire's decision to overlook the Snicko technology. OUT or NOT OUT - what’s your take on #Jaiswal’s dismissal? 👀#AUSvINDOnStar 👉 5th Test, Day 1 | FRI, 3rd JAN, 4:30 AM | #ToughestRivalry #BorderGavaskarTrophy pic.twitter.com/vnAEZN9SPw
— Star Sports (@StarSportsIndia) December 30, 2024
ಹೌದು, ಆರಂಭದಿಂದಲೂ ಏಕಾಂಗಿ ಹೋರಾಟ ನಡೆಸಿ 84 ರನ್ಗಳನ್ನು ಕಲೆಹಾಕಿದ್ದ ಜೈಸ್ವಾಲ್, 70.5ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆದ ಚೆಂಡನ್ನು ಪುಲ್ ಮಾಡಲು ಯತ್ನಿಸಿದರು. ಆದ್ರೆ ಮಿಸ್ ಆಗಿ ಚೆಂಡು ವಿಕೆಟ್ ಕೀಪರ್ ಕೈ ಸೇರಿತ್ತು. ಬಳಿಕ ಆಸೀಸ್ ಪಡೆ ಔಟ್ಗಾಗಿ ಮನವಿ ಮಾಡಿತ್ತು. ಆದರೆ ಆನ್ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಆಗ ನಾಯಕ ಕಮ್ಮಿನ್ಸ್ ತಕ್ಷಣವೇ DRS ತೆಗೆದುಕೊಂಡರು.
ಮೂರನೇ ಅಂಪೈರ್ ಪರಿಶೀಲಿಸುವಾಗ ಚೆಂಡು ಬ್ಯಾಟ್‌ಗೆ ತಾಕಿರಲಿಲ್ಲ. ಅಲ್ಲದೇ ಸ್ನಿಕೋ ಮೀಟರ್ನಲ್ಲೂ ಯಾವುದೇ ಸ್ಪೈಕ್‌ಗಳು ಕಂಡು ಬಂದಿರಲಿಲ್ಲ. ಆದರೆ, ಸ್ಪೈಕ್ ಗಳು ಕಂಡು ಬರದಿದ್ದರೂ ಚೆಂಡಿನಲ್ಲಿ ವೇರಿಯೇಷನ್ ಕಂಡು ಬಂದ ಕಾರಣ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜೈಸ್ವಾಲ್ ಮೈದಾನ ತೊರೆದರು.
ಈ ವಿವಾದಾತ್ಮಕ ತೀರ್ಪಿನ ನಡುವೆಯೇ ಹಾಟ್‌ಸ್ಪಾಟ್ ಟೆಕ್ನಾಲಜಿ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಒಂದು ವೇಳೆ ಹಾಟ್‌ಸ್ಪಾಟ್ ಟೆಕ್ನಾಲಜಿ ಬಳಸಿದ್ದರೆ ಚೆಂಡು ಬ್ಯಾಟ್‌ಗೆ/ ಕೈಗೆ ತಗುಲಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಟ್‌ಸ್ಪಾಟ್ ಎಂದರೇನು?: ಹಾಟ್‌ಸ್ಪಾಟ್ ಟೆಕ್ನಾಲಜಿಯನ್ನು ಮಿಲಿಟರಿಯಲ್ಲಿ ಬಳಸಲಾಗುತ್ತದೆ. ಇದು ಥರ್ಮಲ್ ಇಮೇಜಿಂಗ್ ತಂತ್ರಜ್ಞಾನವಾಗಿದ್ದು ಯುದ್ಧ ಟ್ಯಾಂಕರ್ಗಳು ಮತ್ತು ಜೆಟ್ ವಿಮಾನಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡುತ್ತದೆ. ಕತ್ತಲು ಅಥವಾ ದಟ್ಟವಾದ ಮಂಜು ಇರುವ ವಾತಾವಾರಣದಲ್ಲೂ ಈ ಟೆಕ್ನಾಲಜಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತದೆ.
ಕ್ರಿಕೆಟ್ನಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ?: ಹಾಟ್‌ಸ್ಪಾಟ್ ಟೆಕ್ನಾಲಜಿಯನ್ನು 2006-07 ಆ್ಯಶಸ್ ಸಮಯದಲ್ಲಿ ಕ್ರಿಕೆಟ್ಗೆ ಪರಿಚಯಿಸಲಾಯಿತು. ಇದು ಕ್ರಿಕೆಟ್ನಲ್ಲಿ ಚೆಂಡು ತಗುಲಿದ ಜಾಗವನ್ನು ನಿಖರವಾಗಿ ಗುರುತಿಸುತ್ತದೆ. ಉದಾಹರಣೆಗೆ, ಚೆಂಡು ಬ್ಯಾಟ್ಸ್‌ಮನ್‌ನ ದೇಹ ಅಥವಾ ಬ್ಯಾಟ್‌ನ ಯಾವ ಭಾಗಕ್ಕೆ ಸಂಪರ್ಕ ಹೊಂದಿದೆ ಎಂಬುದನ್ನು ನಿರ್ಧರಿಸಲು ಇದು ಸಹಾಯಕವಾಗುತ್ತದೆ.
ಇದಕ್ಕಾಗುವ ಖರ್ಚೆಷ್ಟು: ಈ ಟೆಕ್ನಾಲಜಿಯ ಕ್ಯಾಮೆರಾಗಳನ್ನು ಕ್ರಿಕೆಟ್ನಲ್ಲಿ ಬಳಸಿದರೆ ಹೆಚ್ಚಿನ ಖರ್ಚಾಗುತ್ತದೆ. ಎರಡು ಹಾಟ್‌ಸ್ಪಾಟ್ ಟೆಕ್ನಾಲಜಿ ಕ್ಯಾಮೆರಾಗಳನ್ನು ಬಳಸಿದರೆ ಒಂದು ದಿನಕ್ಕೆ $10,000 ಡಾಲರ್ (8.45 ಲಕ್ಷ ರೂ) ಖರ್ಚಾಗುತ್ತದೆ. ಇ ಹಿನ್ನೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಯಾವುದೇ ಈವೆಂಟ್‌ಗಳಲ್ಲಿ DRS ತಂತ್ರಜ್ಞಾನದ ಭಾಗವಾಗಿ ಹಾಟ್‌ಸ್ಪಾಟ್ ಬಳಸಲ್ಲ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 184 ರನ್ಗಳ ಹೀನಾಯ ಸೋಲು: WTC ಫೈನಲ್ ಕನಸು ಭಗ್ನ?