ಹೈದರಾಬಾದ್: ಟೆಸ್ಟ್ ಕ್ರಿಕೆಟ್ಗೆ ತನ್ನದೇ ಆದ ಇತಿಹಾಸವಿದೆ. ದೀರ್ಘ ಸ್ವರೂಪದ ಕ್ರಿಕೆಟ್ ಆದ ಇದರಲ್ಲಿ ದಾಖಲೆಗಳು ನಿರ್ಮಾಣವಾಗುತ್ತಿರು ಮತ್ತು ಮುರಿಯಲ್ಪಡುತ್ತವೆ. ಆದ್ರೆ ಕೆಲ ಅಪರೂಪದ ದಾಖಲೆಗಳು ಇಂದಿಗೂ ಯಾರಿಂದಲು ಮುರಿಯಲು ಸಾಧ್ಯವಾಗಿಲ್ಲ. ಇದರಲ್ಲಿ ಅತ್ಯಂತ ವೇಗದ ಮತ್ತು ನಿಧಾನಗತಿಯಲ್ಲಿ ಶತಕ-ಅರ್ಧಶತಕ ಸಿಡಿಸಿರುವುದು ಸೇರಿದೆ.
ಹೌದು, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ ಶತಕ, ಅರ್ಧಶತಕ ಸಿಡಿಸಿ ಬ್ಯಾಟರ್ಗಳು ದಾಖಲೆ ಬರೆದಿದ್ದರೇ, ಮತ್ತಿಬ್ಬರು ಅತ್ಯಂತ ನಿಧಾನಗತಿಯಲ್ಲಿ ಶತಕ-ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಹಾಗಾದ್ರೆ ಅವರು ಯಾರು ಎಂದು ಇದೀಗ ತಿಳಿಯಿರಿ.
ವೇಗದ ಶತಕ: ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿರುವ ಬ್ಯಾಟರ್ ಎಂಬ ದಾಖಲೆ ನ್ಯೂಜಿಲೆಂಡ್ನ ಸ್ಪೋಟಕ ಆಟಗಾರ ಬ್ರೆಂಡಮ್ ಮೆಕ್ಕಲಮ್ ಹೆಸರಲ್ಲಿದೆ. 2015-16ರಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಮೆಕ್ಕಲಂ ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ವೇಗದ ಶತಕವಾಗಿದೆ. ಈ ಪಟ್ಟಿಯಲ್ಲಿ ವಿವಿ ರಿಚರ್ಡ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 56 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಮಿಸ್ಬಾ ಉಲ್ ಹಖ್ (56), ಗಿಲ್ಕ್ರಿಸ್ಟ್ (57) ಕ್ರಮವಾಗಿ ನಂತರ ಸ್ಥಾನದಲ್ಲಿದ್ದಾರೆ.
ವೇಗದ ಅರ್ಧಶತಕ: ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ್ದು ಪಾಕಿಸ್ತಾನದ ಮಿಸ್ಭಾ-ಉಲ್-ಹಖ್. ಇವರು ಆಸ್ಟ್ರೇಲಿಯಾ ವಿರುದ್ದ 2014ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 21 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದರು. ಉಳಿದಂತೆ ಡೆವಿಡ್ ವಾರ್ನರ್ (23), ಜಾಕ್ ಖಲ್ಲಿಸ್ (24), ಬೆನ್ ಸ್ಟೋಕ್ಸ್ (24) ಕ್ರಮವಾಗಿ ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
ಟೆಸ್ಟ್ನಲ್ಲಿ ದಾಖಲಾದ ನಿಧಾನಗತಿಯ ಶತಕ/ಅರ್ಧಶತಕ
ಶತಕ: ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ಅತ್ಯಂತ ನಿಧಾನಗತಿಯ ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಪಾಕ್ ಆಟಗಾರನ ಹೆಸರಲ್ಲಿದೆ. 1977-78 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ನಲ್ಲಿ ಈ ದಾಖಲೆ ನಿರ್ಮಾಣವಾಗಿತ್ತು. ಮುದಾಸರ್ ನಜರ್ ತಮ್ಮ ಇನ್ನಿಂಗ್ಸ್ನಲ್ಲಿ 557 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿ, 449 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ್ದರು.
ಇದು ಕ್ರಿಕೆಟ್ ಇತಿಹಾಸದಲ್ಲೆ ಬ್ಯಾಟರ್ವೊಬ್ಬ ದಾಖಲಿಸಿದ ಅತ್ಯಂತ ನಿಧಾನಗತಿಯ ಶತಕವಾಗಿದೆ. ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಡಿಜೆ ಮೆಕ್ಗ್ಲೇವ್ ಇದ್ದು ಅವರ ಟೆಸ್ಟ್ನಲ್ಲಿ ಶತಕ ಬಾರಿಸಲು 535 ನಿಮಿಷಗಳನ್ನು ತೆಗೆದುಕೊಂಡಿದ್ದರು.
ಅರ್ಧಶತಕ: ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ನಿಧಾನಗತಿಯ ಅರ್ಧಶತಕವೂ ದಾಖಲಾಗಿದೆ. 1958-59 ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದಿದ್ದ ಪಂದ್ಯದಲ್ಲಿ ಇದು ದಾಖಲಾಗಿತ್ತು. ಇಂಗ್ಲೆಂಡ್ ಪರ ಬ್ಯಾಟ್ ಮಾಡಿದ್ದ ಟಿಇ ಬೇಲಿ 357 ನಿಮಿಷ ಸಮಯದಲ್ಲಿ 350 ಬಾಲ್ ಎದುರಿಸಿ ಅರ್ಧಶತಕ ಪೂರ್ಣಗೊಳಿಸಿದ್ದರು. ಇದು ಈವರೆಗಿನ ಅತ್ಯಂತ ನಿಧಾನಗತಿಯ ಟೆಸ್ಟ್ ಅರ್ಧಶತಕವಾಗಿದೆ.
ಇದನ್ನೂ ಓದಿ: ವಿವಾದಾತ್ಮಕ ತೀರ್ಪಿನಿಂದ ಜೈಸ್ವಾಲ್ ಔಟ್: ಕ್ರಿಕೆಟ್ನಲ್ಲಿ Hotspot ಟೆಕ್ನಾಲಜಿ ಏಕೆ ಬಳಸಲಾಗುತ್ತಿಲ್ಲ?