ಕರ್ನಾಟಕ

karnataka

ETV Bharat / sports

ಶಿಖರ್​ ಧವನ್​ ನಿವೃತ್ತಿಗೆ ವಿಶೇಷ ರೀತಿಯಲ್ಲಿ​ ಶುಭ ಹಾರೈಸಿದ ಕಿಂಗ್​ ಕೊಹ್ಲಿ - Virat Kohli Wishes to Dhawan

ಶಿಖರ್​ ಧವನ್​ ಅವರ ನಿವೃತ್ತಿಗೆ ವಿರಾಟ್​ ಕೊಹ್ಲಿ ಎಕ್ಸ್​ ಖಾತೆಯಲ್ಲಿ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಶಿಖರ್​ ಧವನ್​
ವಿರಾಟ್​ ಕೊಹ್ಲಿ ಮತ್ತು ಶಿಖರ್​ ಧವನ್​ (AFP Photos)

By ETV Bharat Sports Team

Published : Aug 25, 2024, 2:36 PM IST

ನವದೆಹಲಿ: ಟೀಂ ಇಂಡಿಯಾದ ಸ್ಟಾರ್​ ಓಪನರ್​ ಶಿಖರ್​ ಧವನ್​ ಶನಿವಾರ (ಆ.24)ಕ್ಕೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ದೀರ್ಘಕಾಲದ ವರೆಗೆ ಭಾರತ ಕ್ರಿಕೆಟ್​ ತಂಡದಿಂದ ಹೊರಗುಳಿದಿದ್ದ ಅವರು ನಿನ್ನೆ ದಿಢೀರ್​ ಆಗಿ ಎಲ್ಲಾ ಸ್ವರೂಪದ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಧವನ್​ ಅವರ ನಿವೃತ್ತಿ ಘೋಷಣೆ ಬೆನ್ನಲ್ಲೆ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮುಂದಿನ ಭವಿಷ್ಯಕ್ಕಾಗಿ ಅವರಿಗೆ ಶುಭಕೋರಿದ್ದಾರೆ. ಇದೀಗ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ತಮ್ಮ ಹಳೆಯ ಡೆಲ್ಲಿ ತಂಡದ ಸಹ ಆಟಗಾರನಿಗೆ ಮುಂದಿನ ಇನ್ನಿಂಗ್ಸ್‌ಗಾಗಿ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.

ವಿರಾಟ್ ತಮ್ಮ ಸಾಮಾಜಿಕ ಮಾಧ್ಯಮವಾದ ಎಕ್ಸ್​ ಖಾತೆಯಲ್ಲಿ ಧವನ್‌ಗೆ ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ, "ಶಿಖರ್ ಧವನ್​ ನಿಮ್ಮ ನಿರ್ಭೀತ ಚೊಚ್ಚಲ ಪಂದ್ಯದಿಂದ ಹಿಡಿದು ಭಾರತದ ಅತ್ಯಂತ ವಿಶ್ವಾಸಾರ್ಹ ಓಪನರ್‌ ಆಗುವವರೆಗೆ ನೀವು ನಮಗೆ ಎಣಿಸಲು ಆಗದಷ್ಟು ನೆನಪುಗಳನ್ನು ನೀಡಿದ್ದೀರಿ. ಆಟದ ಮೇಲಿನ ನಿಮ್ಮ ಉತ್ಸಾಹ, ನಿಮ್ಮ ಕ್ರೀಡಾ ಮನೋಭಾವ ಮತ್ತು ನಿಮ್ಮ ಟ್ರೇಡ್‌ಮಾರ್ಕ್ ಸ್ಮೈಲ್ ಇನ್ಮುಂದೆ ನೋಡಲು ಆಗದೇ ಇರಬಹುದು ಆದರೆ ನಿಮ್ಮ ಕೊಡುಗೆಗಳು ಸದಾ ಜೀವಂತವಾಗಿರಲಿವೆ. ನೆನಪುಗಳು, ಮರೆಯಲಾಗದ ಪ್ರದರ್ಶನಗಳಿಗೆ ಧನ್ಯವಾದಗಳು. ಗಬ್ಬರ್ ನಿಮ್ಮ ಮುಂದಿನ ಇನ್ನಿಂಗ್ಸ್​ಗಾಗಿ ಶುಭ ಹಾರೈಸುತ್ತೇನೆ ಎಂದು ಬರೆದಿದ್ದಾರೆ.

ಶಿಖರ್ ಧವನ್ ಅವರು ಡಿಸೆಂಬರ್ 2022ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇದು ಬಾಂಗ್ಲಾದೇಶ ವಿರುದ್ಧ ಆಡಿದ ಏಕದಿನ ಪಂದ್ಯವಾಗಿತ್ತು. ಇದರ ಬಳಿಕ 38 ವರ್ಷದ ಬ್ಯಾಟರ್​ಗೆ ಮರಳಿ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ ಅಂತಿಮವಾಗಿ ನಿನ್ನೆ ದಿನ ಎಲ್ಲಾ ಸ್ವರೂಪದ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಧವನ್​ರ ಅಂತಾರಾಷ್ಟ್ರೀಯ ಕ್ರಿಕೆಟ್​ ಜರ್ನಿ ಹೀಗಿತ್ತು: ಶಿಖರ್​ ಧವನ್ 2010 ರಿಂದ 2022ರವರೆಗೆ ಭಾರತ ತಂಡವನ್ನು ಪ್ರನಿಧಿಸಿದ್ದಾರೆ. 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. 34 ಟೆಸ್ಟ್​, 167 ಏಕದಿನ, 68 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಟೆಸ್ಟ್​ನಲ್ಲಿ 2315 ರನ್​ ಗಳಿಸಿದ್ದು ಇದರಲ್ಲಿ 7 ಶತಕಗಳು ಸೇರಿವೆ. ಏಕದಿನ ಪಂದ್ಯದಲ್ಲಿ 6793 ರನ್​ಗಳನ್ನು ಕಲೆ ಹಾಕಿದ್ದು ಇದರಲ್ಲಿ ಒಟ್ಟು 17 ಶತಕಗಳು ಸೇರಿವೆ 143 ಹೈಸ್ಕೋರ್​ ಆಗಿದೆ. ಟಿ20ಯಲ್ಲಿ 27.92ರ ಸರಾಸರಿಯಲ್ಲಿ 1759 ರನ್​ಗಳನ್ನು ದಾಕಲಿಸಿದ್ದಾರೆ.

ಇದನ್ನೂ ಓದಿ:U-17 ವಿಶ್ವ ಚಾಂಪಿಯನ್‌ಶಿಪ್ ಕುಸ್ತಿ ಪಂದ್ಯದಲ್ಲಿ ಚಿನ್ನ ಗೆದ್ದ ಯುವ ಮಹಿಳಾ ಕುಸ್ತಿಪಟು ಕಾಜಲ್! - world championship wrestling

ABOUT THE AUTHOR

...view details