Rashid Khan: ಅಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅಂತರಾಷ್ಟ್ರೀಯ ಮತ್ತು ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ವಿಶ್ವದಾಖಲೆ ಬರೆದಿದ್ದಾರೆ. ಇದರೊಂದಿಗೆ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ದಾಖಲೆಯನ್ನು ಮುರಿದು ಹಾಕಿದ್ದಾರೆ.
ದಕ್ಷಿಣ ಆಫ್ರಿಕಾದ SAT20 ಲೀಗ್ನಲ್ಲಿ ಆಡುತ್ತಿರುವ ರಶೀದ್ ಖಾನ್ ಮಂಗಳವಾರ ನಡೆದ ಪಾರ್ಲ್ ರಾಯಲ್ಸ್ ವಿರುದ್ಧ ಕ್ವಾಲಿಫೈರ್ ಪಂದ್ಯದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ಅವರು, ನಾಯಕನಾಗಿ ಮೊದಲ ಬಾರಿಗೆ ಎಂಐ ಕೇಪ್ ಟೌನ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ರಶೀದ್ ಖಾನ್ ವಿಶ್ವದಾಖಲೆ: 26 ವರ್ಷದ ರಶೀದ್ ಈ ವರೆಗೂ ಒಟ್ಟು 461 ಟಿ20 ಪಂದ್ಯಗಳನ್ನು ಆಡಿ 633 ವಿಕೆಟ್‌ಗಳನ್ನು ಪಡೆದಿದ್ದರೆ. ಇದರೊಂದಿಗೆ ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಬ್ರಾವೋ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ತಲುಪಿದ್ದಾರೆ. ಬ್ರಾವೋ 582 ಪಂದ್ಯಗಳಲ್ಲಿ 631 ವಿಕೆಟ್‌ಗಳನ್ನು ಪಡೆದಿದ್ದಾರೆ. ರಶೀದ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 161 ವಿಕೆಟ್‌ಗಳನ್ನು ಪಡೆದಿದ್ದರೇ, ದೇಶಿ ಲೀಗ್ ಕ್ರಿಕೆಟ್‌ನಲ್ಲಿ 472 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ರಶೀದ್ ತಮ್ಮ ಟಿ20 ವೃತ್ತಿಜೀವನದಲ್ಲಿ ಅಫ್ಘಾನಿಸ್ತಾನ, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಎಂಐ ಕೇಪ್ ಟೌನ್, ಅಡಿಲೇಡ್ ಸ್ಟ್ರೈಕರ್ಸ್, ಗಯಾನಾ ಅಮೆಜಾನ್ ವಾರಿಯರ್ಸ್, ಎಂಐ ಎಮಿರೇಟ್ಸ್, ಲಾಹೋರ್ ಖಲಂದರ್ಸ್, ಸಸೆಕ್ಸ್ ಶಾರ್ಕ್ಸ್, ಟ್ರೆಂಟ್ ರಾಕೆಟ್ಸ್ ಮತ್ತು ಇತರ ತಂಡಗಳನ್ನು ಪ್ರತಿನಿಧಿಸಿದ್ದಾರೆ.
Captain. Leader. 𝐑𝐄𝐂𝐎𝐑𝐃-𝐁𝐑𝐄𝐀𝐊𝐄𝐑 💙💥
— MI Cape Town (@MICapeTown) February 4, 2025
Greatness unfolds right before our eyes 🫡#MICapeTown #OneFamily pic.twitter.com/rqbei5pYbf
ಟಿ20ಯಲ್ಲಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳು
- ರಶೀದ್ ಖಾನ್-633
- ಡ್ವೇನ್ ಬ್ರಾವೋ-631
- ಸುನಿಲ್ ನರೈನ್-574
- ಇಮ್ರಾನ್ ತಾಹಿರ್-531
- ಶಕೀಬ್ ಅಲ್ ಹಸನ್ - 492
IPL ದಾಖಲೆ: ರಶೀದ್ ಖಾನ್ ಐಪಿಎಲ್ನಲ್ಲೂ ನೂರಕ್ಕೂ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಈ ಮೊದಲು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಅವರು ಸದ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವರೆಗೂ ಐಪಿಎಲ್ನಲ್ಲಿ ಒಟ್ಟು 121 ಪಂದ್ಯಗಳನ್ನು ರಶೀದ್ ಖಾನ್ ಆಡಿದ್ದಾರೆ. ಈ ಅವಧಿಯಲ್ಲಿ 149 ವಿಕೆಟ್‌ಗಳನ್ನು ಪಡೆದಿದ್ದಾರೆ. 24 ರನ್ಗಳಿಗೆ 4 ವಿಕೆಟ್ ಪಡೆದಿರುವುದು ಇವರ ಬೆಸ್ಟ್ ಇನ್ನಿಂಗ್ಸ್ ಆಗಿದೆ. ಅಂತರಾಷ್ಟ್ರೀಯ ಮತ್ತು ಡೊಮೆಸ್ಟಿಕ್ ಲೀಗ್ ಸೇರಿ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿ ಒಟ್ಟು 1037 ವಿಕೆಟ್‌ಗಳನ್ನು ರಶೀದ್ ಖಾನ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: IND vs ENG ಮೊದಲ ಪಂದ್ಯದಿಂದ ಹೊರಗುಳಿದ ವಿರಾಟ್ ಕೊಹ್ಲಿ: ಕಾರಣ ಏನು?