ETV Bharat / sports

ಚಾಂಪಿಯನ್ಸ್​ ಟ್ರೋಫಿಗಾಗಿ ಲಾಹೋರ್​ನ ಗಡಾಫಿ ಸ್ಟೇಡಿಯಂ ಸಜ್ಜು; ಫೆ.7 ರಂದು ಉದ್ಘಾಟನೆ - CHAMPIONS TROPHY 2025

ಚಾಂಪಿಯನ್ಸ್​ ಟ್ರೋಫಿ ಪಂದ್ಯಾವಳಿಗಾಗಿ ಲಾಹೋರ್​ನ ಗಡಾಫಿ ಸ್ಟೇಡಿಯಂ ಸಜ್ಜುಗೊಂಡಿದೆ.

ಗಡಾಫಿ ಸ್ಟೇಡಿಯಂ
ಗಡಾಫಿ ಸ್ಟೇಡಿಯಂ (ians)
author img

By ETV Bharat Karnataka Team

Published : Feb 6, 2025, 6:23 PM IST

ನವದೆಹಲಿ: ಲಾಹೋರ್​ನಲ್ಲಿರುವ ನವೀಕರಿಸಲಾದ ಗಡಾಫಿ ಕ್ರೀಡಾಂಗಣವನ್ನು ಶುಕ್ರವಾರ ಉದ್ಘಾಟಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಘೋಷಿಸಿದೆ. ಫೆಬ್ರವರಿ 8 ರಿಂದ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡ ತ್ರಿಕೋನ ಏಕದಿನ ಸರಣಿ ಆರಂಭವಾಗಲಿದ್ದು, ಅದಕ್ಕೂ ಒಂದು ದಿನ ಮುಂಚೆ ಗಡಾಫಿ ಕ್ರೀಡಾಂಗಣ ಉದ್ಘಾಟನೆಯಾಗಲಿದೆ.

117 ದಿನಗಳ ದಾಖಲೆಯ ಸಮಯದಲ್ಲಿ ಕ್ರೀಡಾಂಗಣದ ನವೀಕರಣ ಕಾರ್ಯಗಳು ಪೂರ್ಣಗೊಂಡಿವೆ ಮತ್ತು ಈಗ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಪ್ರಮುಖ ಐಸಿಸಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಕ್ರೀಡಾಂಗಣ ಸಿದ್ಧವಾಗಿದೆ ಎಂದು ಪಿಸಿಬಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ರೂಪವನ್ನು ಪಡೆದುಕೊಂಡಿರುವ ಕ್ರೀಡಾಂಗಣದಲ್ಲಿ ಪ್ರಕಾಶಮಾನವಾದ ಎಲ್ಇಡಿ ದೀಪಗಳು, ಎರಡು ಹೊಸ ದೊಡ್ಡ ಸ್ಕೋರ್ ಪರದೆಗಳು ಮತ್ತು ಎಲ್ಲಾ ಕಡೆಗೂ ಆರಾಮದಾಯಕ ಆಮದು ಮಾಡಿಕೊಳ್ಳಲಾದ ಆಸನಗಳನ್ನು ಅಳವಡಿಸಲಾಗಿದೆ. ಇದು ಪ್ರೇಕ್ಷಕರಿಗೆ ಅತ್ಯುತ್ತಮ ವೀಕ್ಷಣೆಯ ಅನುಭವ ನೀಡಲಿದೆ.

ಈ ಬಗ್ಗೆ ಮಾತನಾಡಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, "ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿದ ಕಾರ್ಮಿಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಫ್ರಂಟಿಯರ್ ವರ್ಕ್ಸ್ ಆರ್ಗನೈಸೇಶನ್ (ಎಫ್ ಡಬ್ಲ್ಯುಒ), ಎನ್ ಇಎಸ್ ಪಿಎಕೆ, ಗುತ್ತಿಗೆದಾರರು ಮತ್ತು ಪಿಸಿಬಿ ತಂಡಗಳ ಸಂಯೋಜಿತ ಪ್ರಯತ್ನಗಳು ಈ ಕನಸನ್ನು ನನಸಾಗಿಸಿದೆ." ಎಂದು ಹೇಳಿದರು.

"ನಮ್ಮ ಕ್ರೀಡಾಂಗಣಗಳು ಈಗ ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮಾನವಾಗಿವೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಸಾಧ್ಯವಾದಷ್ಟು ಉತ್ತಮ ಅನುಭವವನ್ನು ನೀಡಲು ನಾವು ಹೆಮ್ಮೆಪಡುತ್ತೇವೆ. ಇಷ್ಟು ಕಡಿಮೆ ಸಮಯದಲ್ಲಿ ಈ ಕ್ರೀಡಾಂಗಣದ ರೂಪಾಂತರವು ನಮ್ಮ ಇಡೀ ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ" ಎಂದು ಅವರು ತಿಳಿಸಿದರು.

ಪ್ರಧಾನಿ ಶೆಹಬಾಜ್ ಷರೀಫ್ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದು, ಸಮಾರಂಭದಲ್ಲಿ ಪಟಾಕಿ ಸಿಡಿಸುವಿಕೆ, ವಿಶಿಷ್ಟ ಬೆಳಕಿನ ಪ್ರದರ್ಶನ, ಖ್ಯಾತ ಗಾಯಕರಾದ ಅಲಿ ಜಾಫರ್, ಆರಿಫ್ ಲೋಹರ್ ಮತ್ತು ಐಮಾ ಬೇಗ್ ಅವರ ಪ್ರದರ್ಶನಗಳು ಹಾಗೂ ಬೆರಗುಗೊಳಿಸುವ ಡ್ರಮ್ ಮತ್ತು ಪಟಾಕಿ ಪ್ರದರ್ಶನ ನಡೆಯಲಿವೆ.

ಅಧ್ಯಕ್ಷ ನಖ್ವಿ ಖುದ್ದಾಗಿ ನಿಂತು ಪುನರ್ ನಿರ್ಮಾಣ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಆಗಾಗ ಹಗಲು ಮತ್ತು ರಾತ್ರಿ ಸಮಯದಲ್ಲಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ ಎಂದು ಪಿಸಿಬಿ ತಿಳಿಸಿದೆ. ಅವರ ಸಮರ್ಪಣಾ ಮನೋಭಾವದ ಕೆಲಸದಿಂದಾಗಿ ವಿಶ್ವದರ್ಜೆಯ ಸೌಲಭ್ಯಗಳು ನಿರ್ಮಾಣವಾಗಿವೆ. ಇದರಲ್ಲಿ ಹೊಸದಾಗಿ ನಿರ್ಮಿಸಲಾದ ಆತಿಥ್ಯ ಆಸನಗಳು, ಆಟಗಾರರು ಮತ್ತು ಪ್ರೇಕ್ಷಕರಿಗೆ ನವೀಕರಿಸಿದ ಸೌಲಭ್ಯಗಳು ಸೇರಿವೆ ಎಂದು ಅದು ಹೇಳಿದೆ.

ಲಾಹೋರ್ ಹೊರತುಪಡಿಸಿ, ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ ಮತ್ತು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಫೆಬ್ರವರಿ 19 ರಿಂದ ಪ್ರಾರಂಭವಾಗುವ 2025 ರ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಆತಿಥ್ಯ ವಹಿಸಲು ಮೇಲ್ದರ್ಜೆಗೇರಿಸಲಾಗುತ್ತಿದೆ. ಫೆಬ್ರವರಿ 12 ರಂದು ಕ್ರೀಡಾಂಗಣಗಳನ್ನು ಐಸಿಸಿಗೆ ಹಸ್ತಾಂತರಿಸಲಾಗುವುದು.

ಇದನ್ನೂ ಓದಿ : IND vs ENG​ ಮೊದಲ ಪಂದ್ಯದಿಂದ ಹೊರಗುಳಿದ ವಿರಾಟ್​ ಕೊಹ್ಲಿ: ಕಾರಣ ಏನು? - WHY VIRAT KOHLI NOT PLAYING 1ST ODI

ETV Bharat Logo

Copyright © 2025 Ushodaya Enterprises Pvt. Ltd., All Rights Reserved.