ಕರ್ನಾಟಕ

karnataka

ETV Bharat / sports

ಪತ್ನಿ ಅನುಷ್ಕಾ ಜೊತೆ ಭಕ್ತಿ ಕೀರ್ತನೆಯಲ್ಲಿ ಮಗ್ನರಾದ ವಿರಾಟ್​ ಕೊಹ್ಲಿ: ವಿಡಿಯೋ ವೈರಲ್​ - VIRAT KOHLI ANUSHKA SHARMA

ವಿರುಷ್ಕಾ ಜೋಡಿ ಮುಂಬೈನಲ್ಲಿ ನಡೆದ ಭಕ್ತಿ ಕೀರ್ತನೆಯಲ್ಲಿ ಪಾಲ್ಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (X video Screengrab)

By ETV Bharat Sports Team

Published : Oct 21, 2024, 2:11 PM IST

Virat Kohli and Anushka Sharma at Krishna Das Kirtan: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾನುವಾರ ಬೆಂಗಳೂರು ಟೆಸ್ಟ್ ಮುಕ್ತಾಯಗೊಳ್ಳುತ್ತಿದ್ದಂತೆ ಮುಂಬೈಗೆ ತಲುಪಿದ್ದಾರೆ. ಮುಂಬೈಗೆ ಬಂದಿಳಿದ ವಿರಾಟ್, ಪತ್ನಿ ಅನುಷ್ಕಾ ಶರ್ಮಾ ಜೊತೆ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಭಾನುವಾರ ದೇಶದೆಲ್ಲೆಡೆ ‘ಕರ್ವಾ ಚೌತ್’ ಹಬ್ಬದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದಂಪತಿ ಕೀರ್ತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಯಿಂದ ಹಬ್ಬವನ್ನು ಆಚರಿಸಿದರು. ಕೃಷ್ಣದಾಸ್ ಅವರ ಕೀರ್ತನಾ ಕಾರ್ಯಕ್ರಮದಲ್ಲಿ ಇಬ್ಬರೂ ಹಾಜರಾಗಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಈ ಜೋಡಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅನುಷ್ಕಾ ಭಜನೆಯಲ್ಲಿ ತಲ್ಲೀನರಾಗಿ ಕೀರ್ತನೆಯನ್ನು ಆನಂದಿಸುತ್ತಿರುವುದು ಮತ್ತು ಅದಕ್ಕೆ ಕೊಹ್ಲಿ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ನೀಡಿದ್ದು ಕಂಡುಬಂದಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೀರ್ತನೆ ಯಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ.

ಜುಲೈ ಆರಂಭದಲ್ಲಿ, ದಂಪತಿಗಳು ಲಂಡನ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಜೂನ್‌ನಲ್ಲಿ ಭಾರತ ಟಿ-20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡು ಲಂಡನ್​ ಪ್ರವಾಸಕ್ಕೆ ತೆರಳಿದ್ದರು. ಆಗ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್​ ವೈರಲ್ ಆಗಿತ್ತು.

ಟೆಸ್ಟ್​ ಸರಣಿ:ನ್ಯೂಜಿಲೆಂಡ್​ ವಿರುದ್ದದ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಮೊದಲ ಇನ್ನಿಂಗ್ಸ್ ನಲ್ಲಿ ಡಕ್ ಔಟ್ ಆಗಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ 70 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಬೆಂಗಳೂರಿನಲ್ಲಿ ಪಂದ್ಯ ಮುಗಿದ ತಕ್ಷಣ ಮುಂಬೈನಲ್ಲಿರುವ ತಮ್ಮ ಮನೆಗೆ ಕೊಹ್ಲಿ ತೆರಳಿದ್ದರು. ಸರಣಿ ಆರಂಭಕ್ಕೂ ಮುನ್ನ ಮುನ್ನ ಕೊಹ್ಲಿ ಕುಟುಂಬದೊಂದಿಗೆ ಲಂಡನ್‌ನಲ್ಲಿ ಕೆಲಕಾಲ ತಂಗಿದ್ದರು.

ಇದನ್ನೂ ಓದಿ:ಭಾರತಕ್ಕೂ ಮೊದಲು ಪಾಕಿಸ್ತಾನ ಪರ ಕ್ರಿಕೆಟ್​ ಪಂದ್ಯ ಆಡಿದ್ದ ಸಚಿನ್​ ತೆಂಡೂಲ್ಕರ್!

ABOUT THE AUTHOR

...view details