ಕರ್ನಾಟಕ

karnataka

ETV Bharat / sports

IND Vs End: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್‌ ಗೆದ್ದ ಟೀಂ ಇಂಡಿಯಾ: ಭಾರತದ ಆಟಗಾರ ಧ್ರುವ್ ಜುರೆಲ್ ಟ್ವೀಟ್​ ಮಾಡಿದ್ದು ಹೀಗೆ - ರೋಹಿತ್​ ಶರ್ಮಾ

ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ನಲ್ಲಿ ಭಾರತ ತಂಡ ಗೆಲವು ದಾಖಲಿಸಿದೆ. ಈ ಟೆಸ್ಟ್​ ಸರಣಿಯಲ್ಲಿ 3-1 ಅಂತರದಿಂದ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. ಅಂತಿಮ ಟೆಸ್ಟ್​ನ ಕೊನೆಯ ಇನಿಂಗ್ಸ್​ನಲ್ಲಿ ಶುಭಮನ್ ಗಿಲ್ ಮತ್ತು ಧ್ರುವ್ ಜುರೆಲ್ ಉತ್ತಮ ಪ್ರದರ್ಶನ ನೀಡಿದರು.

ಧ್ರುವ್ ಜುರೆಲ್  ಶುಭಮನ್ ಗಿಲ್  ರಾಹುಲ್​ ದ್ರಾವಿಡ್​ ರೋಹಿತ್​ ಶರ್ಮಾ  India Vs England
IND Vs End: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್‌ ಗೆದ್ದ ಟೀಂ ಇಂಡಿಯಾ: ಭಾರತದ ಆಟಗಾರ ಧ್ರುವ್ ಜುರೆಲ್ ಟ್ವೀಟ್​ ಮಾಡಿದ್ದು ಹೀಗೆ

By ETV Bharat Karnataka Team

Published : Feb 27, 2024, 10:53 AM IST

ರಾಂಚಿ (ಜಾರ್ಖಂಡ್):ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಜಯಗಳಿಸಿದ ನಂತರ, ಭಾರತದ ವಿಕೆಟ್‌ ಕೀಪರ್ - ಬ್ಯಾಟರ್ ಧ್ರುವ್ ಜುರೆಲ್ ಅವರು, ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಯುವ ಆಟಗಾರರಾದ ಶುಭಮನ್ ಗಿಲ್ ಮತ್ತು ಧ್ರುವ್ ಜುರೆಲ್ ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಟೆಸ್ಟ್ ಪಂದ್ಯದಲ್ಲಿ ​ಐದು ವಿಕೆಟ್‌ಗಳ ಜಯದೊಂದಿಗೆ ಐದು ಪಂದ್ಯಗಳ ಸರಣಿಯನ್ನು 3-1 ರಿಂದ ಭಾರತ ಗೆಲುವು ದಾಖಲಿಸಿತು.

ಧ್ರುವ್ ಜುರೆಲ್ ಟ್ವೀಟ್ ಮಾಡಿದ್ದು ಹೀಗೆ​:ಧ್ರುವ್ ಜುರೆಲ್ ಅವರು, "ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕಾಗಿ ರೋಹಿತ್ ಭಯ್ಯಾ, ರಾಹುಲ್ ಸರ್ ಅವರಿಗೆ ಧನ್ಯವಾದಗಳು" ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

4ನೇ ಟೆಸ್ಟ್‌ ಪಂದ್ಯದ ವಿವರ:4ನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 353ಕ್ಕೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಪ್ರಧಾನ ಬ್ಯಾಟ್ಸ್​ಮನ್ ಮತ್ತು ಮಾಜಿ ನಾಯಕ ಜೋ ರೂಟ್ (274 ಎಸೆತಗಳಲ್ಲಿ 122*, 10 ಬೌಂಡರಿ) ಉತ್ತಮ ಕಂಬ್ಯಾಕ್​ ಮಾಡಿದರು. ಓಲಿ ರಾಬಿನ್ಸನ್ (96 ಎಸೆತಗಳಲ್ಲಿ 58, ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್) ಮತ್ತು ಬೆನ್ ಫೋಕ್ಸ್ (126 ಎಸೆತಗಳಲ್ಲಿ 47, ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್) ಅವರು ತಂಡಕ್ಕೆ ಬಲ ನೀಡಿದರು. ಭಾರತದ ಬೌಲರ್‌ಗಳಾದ ರವೀಂದ್ರ ಜಡೇಜಾ (4/67) ಮತ್ತು ಆಕಾಶ್ ದೀಪ್ (3/83) ಉತ್ತಮ ಪ್ರದರ್ಶನ ನೀಡಿದರು.

ಬಶೀರ್, ಹಾರ್ಟ್ಲಿ, ಆಂಡರ್ಸನ್ ಪ್ರಭಾವಶಾಲಿ ಬೌಲಿಂಗ್:ಇಂಗ್ಲೆಂಡ್‌ನ 353 ರನ್‌ಗಳಿಗೆ ಟಾರ್ಗೆಟ್​ಗೆ ಉತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್‌ಗಳಿಗೆ ಆಲೌಟ್ ಆಯಿತು. ಯಶಸ್ವಿ ಜೈಸ್ವಾಲ್ (117 ಎಸೆತಗಳಲ್ಲಿ 73, ಜೊತೆಗೆ ಎಂಟು ಬೌಂಡರಿಗಳು ಮತ್ತು ಒಂದು ಸಿಕ್ಸರ್) ಒಳ್ಳೆಯ ಆಟವಾಡಿದರು. ಭಾರತವು 219 ರನ್​ 7 ವಿಕೆಟ್​ ಕಳೆದುಕೊಂಡಿತ್ತು. ಜುರೆಲ್ (149 ಎಸೆತಗಳಲ್ಲಿ 90, ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ) ಕುಲದೀಪ್ (131 ಎಸೆತಗಳಲ್ಲಿ 28) ಜೊತೆಗೂಡಿ 76 ರನ್‌ಗಳ ಜೊತೆಯಾಟ ಆಡಿದರು. ಎಂಟನೇ ವಿಕೆಟ್ ಕಳೆದುಕೊಂಡಿದ್ದ ಭಾರತ 300 ರನ್ ಗಡಿ ದಾಟಿತು. ಸ್ಪಿನ್ನರ್ ಶೋಯೆಬ್ ಬಶೀರ್ ಐದು ವಿಕೆಟ್ (5/119) ಪಡೆದು ಭಾರತೀಯ ಬ್ಯಾಟ್ಸ್​ಮನಗಳನ್ನ ಕಾಡಿದರು. ಟಾಮ್ ಹಾರ್ಟ್ಲಿ (3/68) ಮತ್ತು ಜೇಮ್ಸ್ ಆಂಡರ್ಸನ್ (2/48) ಸಹ ಪ್ರಭಾವಶಾಲಿ ಬೌಲಿಂಗ್​ ದಾಳಿ ಮಾಡಿದರು.

ಅಶ್ವಿನ್, ಕುಲದೀಪ್ ಬೌಲಿಂಗ್ ಮಿಂಚು:ಎರಡನೇ ಇನ್ನಿಂಗ್ಸ್‌ನಲ್ಲಿ, ಝಾಕ್ ಕ್ರಾಲಿ (91 ಎಸೆತಗಳಲ್ಲಿ 7 ಬೌಂಡರಿ ಸಹಿತ 60 ರನ್​) ಮತ್ತು ಜಾನಿ ಬೈರ್‌ಸ್ಟೋವ್ (42 ಎಸೆತಗಳಲ್ಲಿ 3 ಬೌಂಡರಿ ಸಹಿತ 30 ರನ್) ಸ್ವಲ್ಪ ಪ್ರತಿರೋಧ ತೋರುವುದರೊಂದಿಗೆ ಇಂಗ್ಲೆಂಡ್ ಕೇವಲ 145 ರನ್‌ಗಳಿಗೆ ಆಲೌಟ್ ಆಯಿತು. ರವಿಚಂದ್ರನ್ ಅಶ್ವಿನ್ (5/51) ಮತ್ತು ಕುಲದೀಪ್ ಯಾದವ್ (4/22) ಬೌಲಿಂಗ್​ನಲ್ಲಿ ಮಿಂಚಿದರು. ಬೌಲಿಂಗ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಸ್ಪಿನ್ನರ್‌ಗಳು 10 ವಿಕೆಟ್‌ಗಳನ್ನು ಪಡೆದರು.

ಶುಭಮನ್ ಗಿಲ್, ಧ್ರುವ್ ಜುರೆಲ್ ಉತ್ತಮ ಪ್ರದರ್ಶನ:ಸರಣಿಯಲ್ಲಿ ಅಜೇಯ 3-1 ಮುನ್ನಡೆಗಾಗಿ 192 ರನ್ ಬೆನ್ನಟ್ಟಿದ ಆತಿಥೇಯರು ಉತ್ತಮ ಆರಂಭವನ್ನೇ ಪಡೆದರು, ನಾಯಕ ರೋಹಿತ್ ಶರ್ಮಾ (81 ಎಸೆತಗಳಲ್ಲಿ 55, ಐದು ಬೌಂಡರಿ ಮತ್ತು ಒಂದು ಸಿಕ್ಸರ್) ಮತ್ತು ಯಶಸ್ವಿ ಜೈಸ್ವಾಲ್ (44 ಎಸೆತಗಳಲ್ಲಿ 37, 5 ಬೌಂಡರಿಗಳು) 84 ರನ್ ಗಳಿಸುವ ಮೂಲಕ ಆರಂಭಿಕ ಭದ್ರ ಬುನಾದಿ ಹಾಕಿದರು. ಇಂಗ್ಲೆಂಡ್​​ ಬೌಲರ್ ಬಶೀರ್ 79 ರನ್​ ನೀಡಿ, 3 ವಿಕೆಟ್​ ಪಡೆದಕೊಂಡರು. ಆಗ ಭಾರತವು 120/5 ಸ್ಕೋರ್​ ಆಗಿತ್ತು. ಶುಭಮನ್ ಗಿಲ್ (124 ಎಸೆತಗಳಲ್ಲಿ 52*, ಎರಡು ಸಿಕ್ಸರ್‌ಗಳೊಂದಿಗೆ) ಮತ್ತು ಧ್ರುವ್ ಜುರೆಲ್ (77ಎಸೆತ್​ಗಳಲ್ಲಿ 39*, ಎರಡು ಬೌಂಡರಿಗಳೊಂದಿಗೆ) ಅವರ ಪ್ರದರ್ಶನವು ಭಾರತವನ್ನು ಐದು ವಿಕೆಟ್‌ಗಳಿಂದ ಸರಣಿ ಗೆಲುವಿಗೆ ಕಾರಣವಾಯಿತು.

ಇದನ್ನೂ ಓದಿ:WTC: ಭಾರತಕ್ಕೆ 2ನೇ ಸ್ಥಾನ ಭದ್ರ, ಸತತ ಸೋಲಿನಿಂದ 8ನೇ ಸ್ಥಾನಕ್ಕೆ ಕುಸಿದ ಇಂಗ್ಲೆಂಡ್​

ABOUT THE AUTHOR

...view details