ಕರ್ನಾಟಕ

karnataka

ETV Bharat / sports

'ಕ್ಯಾಚ್​ ವಿನ್​ ದ ಮ್ಯಾಚ್​' ಗೆಲುವಿನ ಮಂತ್ರ ಪಾಲಿಸಿದ ಭಾರತಕ್ಕೆ ವಿಶ್ವಕಪ್​ ಕಿರೀಟ - Stunning Catches - STUNNING CATCHES

ಕ್ರಿಕೆಟ್​ನಲ್ಲಿ ಬ್ಯಾಟಿಂಗ್​, ಬೌಲಿಂಗ್​ನಷ್ಟೇ ಫೀಲ್ಡಿಂಗ್​ ಕೂಡ ಮುಖ್ಯ. ಬಿಗಿಯಾದ ಕ್ಷೇತ್ರರಕ್ಷಣೆ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತದೆ. ಟಿ20 ವಿಶ್ವಕಪ್​ಲ್ಲಿ ಭಾರತ ಉತ್ತಮ ಫೀಲ್ಡಿಂಗ್​ ಪ್ರದರ್ಶಿಸಿ ಟ್ರೋಫಿ ಎತ್ತಿಹಿಡಿದಿದೆ.

ಕ್ಯಾಚ್​ ವಿನ್​ ದ ಮ್ಯಾಚ್
ಕ್ಯಾಚ್​ ವಿನ್​ ದ ಮ್ಯಾಚ್ (ETV Bharat)

By ETV Bharat Karnataka Team

Published : Jun 30, 2024, 2:26 PM IST

ಹೈದರಾಬಾದ್​:ಕ್ರಿಕೆಟ್​​ನಲ್ಲಿ ಕ್ಯಾಚ್​​ಗಳು ಎಷ್ಟು ಮಹತ್ವ ಎಂದರೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿ, ಗೆಲುವು ತಂದುಕೊಡಬಲ್ಲವು. ಕೈಚೆಲ್ಲುವ ಒಂದು ಕ್ಯಾಚ್​ ಪಂದ್ಯವನ್ನೇ ಸೋಲಿನ ದವಡೆಗೆ ಸಿಲುಕಿಸುವ ತಾಕತ್ತೂ ಇರುತ್ತವೆ. ಅದಕ್ಕೆ ಹೇಳೋದು 'ಕ್ಯಾಚ್​ ವಿನ್​ ದ ಮ್ಯಾಚ್​' ಅಂತ.

ಈ ವಿಶ್ವಕಪ್​ನಲ್ಲಿ ಭಾರತ ತಂಡವೂ ಕೂಡ ಹಲವು ಅದ್ಭುತ ಕ್ಯಾಚ್​ಗಳನ್ನು ಹಿಡಿದು ಸೈ ಎನಿಸಿಕೊಂಡಿದೆ. ಕ್ಯಾಚ್​ ಹಿಡಿಯುವ ಪ್ರಮಾಣದಲ್ಲಿ ಎಲ್ಲ ತಂಡಗಳಂತೆ ಭಾರತವೂ ರೇಟಿಂಗ್​ನಲ್ಲಿ ಮುಂದಿದೆ. ಶೇಕಡಾ 75ರಷ್ಟು ನಿಖರವಾಗಿ ಪಂದ್ಯದಲ್ಲಿ ಕ್ಯಾಚ್​ಗಳನ್ನು ಹಿಡಿದ ದಾಖಲೆ ಹೊಂದಿದೆ.

ಅದರಲ್ಲೂ ಸೆಮಿಫೈನಲ್​ನಲ್ಲಿ ಅಕ್ಷರ್​ ಪಟೇಲ್​​, ಫೈನಲ್​ನಲ್ಲಿ ಸೂರ್ಯಕುಮಾರ್​ ಹಿಡಿದ ಕ್ಯಾಚ್​​ಗಳು ಬಹುಕಾಲ ನೆನಪು ಉಳಿಯುವ ಹಿಡಿತಗಳಾಗಿವೆ. ಇವೆರಡೂ ತಂಡದ ಫಲಿತಾಂಶವನ್ನೂ ಬದಲಿಸಿವೆ. ಸಲೀಸಾಗಿ ಕ್ಯಾಚ್​ಗಳನ್ನು ಬಿಟ್ಟ ಅದೆಷ್ಟೋ ತಂಡಗಳು ಪಂದ್ಯವನ್ನೇ ಕಳೆದುಕೊಂಡಿವೆ.

ಅಕ್ಷರ್​ ಅಕ್ಷರಶಃ ಸ್ಟನ್ನಿಂಗ್​ ಕ್ಯಾಚ್​:ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಅಕ್ಷರ್​ ಪಟೇಲ್​ ಹಿಡಿದ ಕ್ಯಾಚ್​ ಟೂರ್ನಿಯಲ್ಲಿ ಹಿಡಿದ ಅತ್ಯುತ್ತಮ ಕ್ಯಾಚ್​​ಗಳಲ್ಲಿ ಒಂದಾಗಿದೆ. ಮೊದಲು ಬ್ಯಾಟ್​ ಮಾಡಿದ್ದ ಭಾರತ 206 ರನ್​ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 8 ಓವರ್​ ವೇಳೆಗೆ 1 ವಿಕೆಟ್ ಕಳೆದುಕೊಂಡು 87 ರನ್​ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. 42 ಗಳಿಸಿ ಆಡುತ್ತಿದ್ದ ಟ್ರಾವಿಸ್​ ಹೆಡ್​, 37 ರನ್​ ಗಳಿಸಿದ್ದ ನಾಯಕ ಮಿಚೆಲ್​ ಮಾರ್ಷ್ ಕ್ರೀಸ್​ನಲ್ಲಿದ್ದರು.

ಇಬ್ಬರೂ ಬಿಡುಬೀಸಾಗಿ ಬ್ಯಾಟ್​ ಮಾಡುತ್ತಿದ್ದರು. ಈ ವೇಳೆ ಕುಲದೀಪ್​ ಯಾದವ್​ ಎಸೆದ 9ನೇ ಓವರ್​ನ ಕೊನೆಯ ಎಸೆತದಲ್ಲಿ ಮಿಚೆಲ್ ಮಾರ್ಷ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಬೌಂಡರಿ ಗೆರೆಯಲ್ಲಿದ್ದ ಅಕ್ಷರ್​ ಪಟೇಲ್​ ಗಾಳಿಯಲ್ಲಿ ಹಾರಿ ಒಂಟಿ ಕೈಯಲ್ಲಿ ಚೆಂಡನ್ನು ಹಿಡಿದು ದೊಪ್ಪನೆ ನೆಲಕ್ಕೆ ಬಿದ್ದರು. ಅಷ್ಟೇ ಇಡೀ ಕ್ರೀಡಾಂಗಣವೇ ಸ್ಟನ್​. ಗಾಳಿಯ ವೇಗದಲ್ಲಿ ಓಡುತ್ತಿದ್ದ ಚೆಂಡನ್ನು ಅಕ್ಷರ್​ ತಡೆದು ನಿಲ್ಲಿಸಿದ್ದೇ ಸಾಹಸ. ಇದರ ಫಲಿತ ಆಸೀಸ್​ ಆಟಗಾರ ಔಟ್​. ಇದಾದ ಬಳಿಕ ತಂಡ ಒತ್ತಡಕ್ಕೆ ಸಿಲುಕಿ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿ ಪಂದ್ಯವನ್ನೇ ಸೋಲಬೇಕಾಯಿತು.

ಫೈನಲ್​ನಲ್ಲಿ ಸೂರ್ಯ ಫೈನ್​ ಕ್ಯಾಚ್​:ಇಂಥದ್ದೇ ಒಂದು ಕ್ಯಾಚ್​ ಅನ್ನು ಸೂರ್ಯಕುಮಾರ್​ ಯಾದವ್​ ಫೈನಲ್​ ಪಂದ್ಯದಲ್ಲಿ ಹಿಡಿದು ಟ್ರೋಫಿಯನ್ನೇ ಗೆಲ್ಲುವಂತೆ ಮಾಡಿದರು. ದಕ್ಷಿಣ ಆಫ್ರಿಕಾ ತಂಡದ ಡೇವಿಡ್​ ಮಿಲ್ಲರ್​ ತೋಳ್ಬಲದ ಹೊಡೆತಕ್ಕೆ ಹಾರಿ ಬಂದ ಚೆಂಡು ಲಾಂಗ್​ಆನ್​ನಲ್ಲಿ ಇನ್ನೇನು ಸಿಕ್ಸರ್​ ಗೆರೆ ದಾಟಬೇಕಿತ್ತು. ಅಲ್ಲಿಯೇ ಇದ್ದ ಸೂರ್ಯಕುಮಾರ್​ ಚೆಂಗನೆ ಹಾರಿಬಂದು ಚೆಂಡನ್ನು ಬೌಂಡರಿ ಗೆರೆಯಲ್ಲಿ ಅಮೋಘವಾಗಿ ಹಿಡಿದರು. ಈ ವೇಳೆ ಆಫ್ರಿಕಾಕ್ಕೆ ಗೆಲ್ಲಲು 6 ಎಸೆತಗಳಲ್ಲಿ 16 ರನ್​ ಬೇಕಿತ್ತು. ಮಿಲ್ಲರ್​ ಔಟಾದ ಬಳಿಕ ತಂಡ ಸೋಲು ಕಂಡಿತು. ಈ ಮೂಲಕ ಭಾರತ ಎರಡನೇ ಬಾರಿಗೆ ವಿಶ್ವಕಪ್​ ಎತ್ತಿ ಹಿಡಿಯಿತು.

ಇದನ್ನೂ ಓದಿ:ಸೋಲಿನ ಅಂಚಿನಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಬುಮ್ರಾ - Jasprit Bumrah

ABOUT THE AUTHOR

...view details