ETV Bharat / state

ರಾಜ್ಯದಲ್ಲಿ ಹೊಸ ಬಿಯರ್ ನೀತಿ ಜಾರಿ: ಶೇ.25ರ ಸಕ್ಕರೆ ಅಂಶ ಮಿತಿಯಿಂದ ಅಗ್ಗದ ಬಿಯರ್​ಗೆ ಬ್ರೇಕ್! - NEW BEER POLICY

ಕರ್ನಾಟಕ ಅಬಕಾರಿ (ಬ್ರೀವರಿ) ತಿದ್ದುಪಡಿ ನಿಯಮವನ್ನು ಜಾರಿಗೆ ತರುವ ಮೂಲಕ ಹೊಸ ನೀತಿ ರೂಪಿಸಲಾಗಿದ್ದು, ಜನವರಿ 20ರಿಂದ ರಾಜ್ಯದಲ್ಲಿ ಹೊಸ ಬಿಯರ್ ನಿಯಮ ಜಾರಿಯಾಗಲಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jan 10, 2025, 10:22 PM IST

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿ ಹೊಸ ಬಿಯರ್ ನೀತಿ ಜಾರಿಗೆ ತಂದಿದೆ. ಈ ಬಿಯರ್ ನೀತಿ ಮೂಲಕ ರಾಜ್ಯ ಸರ್ಕಾರ ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಬೀಳಿಸುವ ಕೆಲಸ ಮಾಡಿದೆ. ಒಂದೆಡೆ ಆದಾಯ ಹೆಚ್ಚಳ, ಇನ್ನೊಂದೆಡೆ ಆರೋಗ್ಯದ‌ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಬಿಯರ್​ಗಳಿಗೆ ಕಡಿವಾಣ.‌

ಜ.20ರಿಂದ ರಾಜ್ಯದಲ್ಲಿ ಹೊಸ ಬಿಯರ್ ನಿಯಮ ಜಾರಿಗೆ ಬರಲಿದೆ. ಕರ್ನಾಟಕ ಅಬಕಾರಿ (ಬ್ರೀವರಿ) ತಿದ್ದುಪಡಿ ನಿಯಮವನ್ನು ಜಾರಿಗೆ ತರುವ ಮೂಲಕ ಹೊಸ ನೀತಿಯನ್ನು ರೂಪಿಸಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ ಈ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಪಡೆದ ಬಳಿಕ ಇದೀಗ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ತಿದ್ದುಪಡಿ ನಿಯಮದ ಮೂಲಕ ಹೊಸ ಬಿಯರ್ ನೀತಿ ರಾಜ್ಯದಲ್ಲಿ ಜಾರಿಗೆ ಬರಲಿದೆ.

ಏನಿದು ಹೊಸ ಬಿಯರ್ ನೀತಿ?: ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಹೊಸ ಬಿಯರ್ ನೀತಿ ಜಾರಿಗೆ ತರಲಾಗಿದೆ. ಹೊಸ ನಿಯಮದಂತೆ "ಬಿಯರ್" ಎಂದರೆ ಏನು ಎಂಬುದನ್ನು ವ್ಯಾಖ್ಯಾನ ಮಾಡಲಾಗಿದೆ. ಬಿಯರ್ ಎಂದರೆ ಮಾಲ್ಟ್ ಅಥವಾ ಧಾನ್ಯದಿಂದ ತಯಾರಿಸಿದ ಯಾವುದೇ ಫರ್ಮೆಂಟೆಡ್ ಮದ್ಯವನ್ನು ಸಕ್ಕರೆ ಮತ್ತು ಹಾಪ್‌ಗಳ ಜೊತೆಗೆ ಅಥವಾ ಇಲ್ಲದೆಯೇ ಉತ್ಪಾದಿಸಲಾಗುತ್ತದೆ ಮತ್ತು ಏಲ್, ಕಪ್ಪು ಬಿಯರ್, ಪೋರ್ಟರ್, ಸ್ಪೆಟ್ ಮತ್ತು ಸ್ಪೂಸ್ ಬಿಯರ್ ಅನ್ನು ಒಳಗೊಂಡಿರುತ್ತದೆ.

ಈ ಹಿಂದಿನ ನಿಯಮದಂತೆ ಬಿಯರ್ ಅಂದರೆ ಮಾಲ್ಟ್ ಅಥವಾ ಧಾನ್ಯದಿಂದ ತಯಾರಿಸಿದ ಯಾವುದೇ ಮದ್ಯವನ್ನು ಸಕ್ಕರೆ ಮತ್ತು ಹಾಪ್ಸ್ ಜೊತೆಗೆ ಅಥವಾ ಇಲ್ಲದೇ ಉತ್ಪಾದಿಸುವುದು ಎಂದು ವ್ಯಾಖ್ಯಾನಿಸಲಾಗಿತ್ತು. ಹೊಸ ನಿಯಮದಲ್ಲಿ ಯಾವುದೇ ಮದ್ಯ ಎಂಬುದರ ಬದಲಾಗಿ ಫರ್ಮೆಂಟೆಡ್ ಮದ್ಯವನ್ನು ಸಕ್ಕರೆ ಪ್ರಮಾಣ ಮಿತಗೊಳಿಸಿ ಸಕ್ಕರೆ ಅಥವಾ ಇಲ್ಲದೇ ತಯಾರಿಸುವುದು ಎಂದು ತಿದ್ದುಪಡಿ ಮಾಡಲಾಗಿದೆ.

ಬಿಯರ್ ನಲ್ಲಿ ಸಕ್ಕರೆ ಪ್ರಮಾಣ ಶೇ.25ರಷ್ಟು ಮಿತಿ: ಹೊಸ ನೀತಿಯಂತೆ ಬಿಯರ್​ನಲ್ಲಿ ಬಳಸುವ ಸಕ್ಕರೆ ಪ್ರಮಾಣಕ್ಕೆ ಮಿತಿ ಹಾಕಲಾಗಿದೆ. ಆ ಮೂಲಕ ಮಿತಿ ಮೀರಿ ಬಿಯರ್​ನಲ್ಲಿ ಹೆಚ್ಚು ಸಕ್ಕರೆ ಅಂಶವನ್ನು ಬಳಕೆ ಮಾಡುವುದಕ್ಕೆ ನಿಯಂತ್ರಣ ಹೇರಲಾಗಿದೆ. ಸಕ್ಕರೆಯ ಸೇರ್ಪಡೆಯು ತೂಕದ ಶೇ.25ಕ್ಕಿಂತ ಹೆಚ್ಚಿರಬಾರದು ಎಂದು ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.‌ ಈ ಮುಂಚೆ ಬಿಯರ್​ನಲ್ಲಿ ಮಿತಿ ಮೀರಿ ಸಕ್ಕರೆ ಅಂಶವನ್ನು ಬಳಸಲಾಗುತ್ತಿತ್ತು. ಅದಕ್ಕೆ ತಿದ್ದುಪಡಿ ನಿಯಮದಲ್ಲಿ ನಿಯಂತ್ರಣ ಹಾಕಲಾಗಿದೆ.

ತಾಂತ್ರಿಕ ಸಮಿತಿ ಶಿಫಾರಸಿನ ಮೇರೆಗೆ ಈ ಮಿತಿಯನ್ನು ಹಾಕಲಾಗಿದೆ. ತಾಂತ್ರಿಕ ಸಮಿತಿ ಸುಮಾರು ನಾಲ್ಕೈದು ತಿಂಗಳು ಅಧ್ಯಯನ ನಡೆಸಿದ್ದರು. ಮಾರುಕಟ್ಟೆಗಳಿಂದ ಬಿಯರುಗಳನ್ನು ಸಂಗ್ರಹಿಸಿದ್ದರು‌. ಈ ಸ್ಯಾಂಪಲ್ ಬಿಯರುಗಳ ಮೇಲೆ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಬಿಯರುಗಳಲ್ಲಿ ಗರಿಷ್ಠ ಸಕ್ಕರೆ ಅಂಶ ಇರುವುದು ಪತ್ತೆಯಾಗಿತ್ತು. ಇದು ಮದ್ಯಪಾನಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ. ಈ ನಿಟ್ಟಿನಲ್ಲಿ ಸರ್ಕಾರ ಸಕ್ಕರೆ ಅಂಶಕ್ಕೆ ಶೇ.25ರಷ್ಟು ಮಿತಿ ಹಾಕಿದೆ.

ಬಾಟಲ್​ನಲ್ಲಿ ಸಕ್ಕರೆ ಪ್ರಮಾಣ ನಮೂದು ಕಡ್ಡಾಯ: ಹೊಸ ಬಿಯರ್ ನೀತಿ ಪ್ರಕಾರ ಇನ್ಮುಂದೆ ಬಿಯರ್ ಬಾಟಲ್ ಮೇಲೆ ಬಳಸಿದ ಸಕ್ಕರೆ ಅಂಶ ಹಾಗೂ ಮಾಲ್ಟ್ ಶೇಕಡವಾರು ತೂಕವನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಕರ್ನಾಟಕ ಅಬಕಾರಿ (ಬಾಟ್ಲಿಂಗ್ ಆಫ್ ಲಿಕ್ಕರ್) ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದರಂತೆ ಮಾಲ್ಟ್ ಮತ್ತು ಸಕ್ಕರೆಯ ಕನಿಷ್ಠ ಶೇಕಡಾವಾರು ತೂಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.

ಹೊಸ ಬಿಯರ್ ನೀತಿಯಿಂದ ಆದಾಯ ಹೆಚ್ಚಳದ ನಿರೀಕ್ಷೆ: ಲಿಕ್ಕರ್ ಉತ್ಪಾದಕರು ಮಿತಿ ಮೀರಿ ಸಕ್ಕರೆ ಅಂಶ ಹೊಂದಿರುವ ಬಿಯರ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಸಕ್ಕರೆ ಹೆಚ್ಚು ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ‌. ಆ ಮೂಲಕ ಅಗ್ಗದ ಬಿಯರುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಹೆಚ್ಚು ಸಕ್ಕರೆ ಅಂಶ ಹೊಂದಿರುವ ಬಿಯರ್​​ ಐದಾರು ಬ್ರ್ಯಾಂಡ್​ಗಳು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿದೆ. ಹೆಚ್ಚಿನವರು ಈ ಅಗ್ಗದ ಬಿಯರನ್ನೇ ಖರೀದಿ ಮಾಡುತ್ತಿದ್ದಾರೆ.

ಇದರಿಂದ ಸರ್ಕಾರಕ್ಕೆ ಬರುವ ಅಬಕಾರಿ ಆದಾಯವೂ ಖೊತಾ ಆಗುತ್ತಿದೆ. ಒಂದೆಡೆ ಜನರ ಆರೋಗ್ಯ ಹಾಗೂ ಇನ್ನೊಂದೆಡೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಸಕ್ಕರೆ ಅಂಶಕ್ಕೆ ಮಿತಿ ಹೇರಿ ಬಿಯರ್ ಉತ್ಪಾದನೆ ಮಾಡಲು ನೀತಿ ರೂಪಿಸಿದೆ. ಇದರಿಂದ ಬೊಕ್ಕಸಕ್ಕೆ ಬರುವ ಆದಾಯದಲ್ಲೂ ಗಣನೀಯ ಏರಿಕೆಯಾಗಲಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.

ಆದರೆ, ಸಕ್ಕರೆ ಅಂಶಕ್ಕೆ ಮಿತಿ ಹಾಕುವ ಈ ನೀತಿಗೆ ಮದ್ಯ ಉತ್ಪಾದಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ಅವರ ಆಕ್ಷೇಪವಾಗಿದೆ. ಈ ಸಂಬಂಧ ಸರ್ಕಾರಕ್ಕೂ ತಮ್ಮ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು.

ಹೊಸ ಬಿಯರ್ ನೀತಿಯಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಇದರಿಂದ ಕಡಿಮೆ ಬೆಲೆಗೆ ಹೆಚ್ಚಿನ ಸಕ್ಕರೆ ಅಂಶ ಇರುವ ಬಿಯರ್ ಮಾರಾಟ ಮಾಡುವುದಕ್ಕೆ ಕಡಿವಾಣ ಬೀಳಲಿದೆ ಎಂದು ಅಬಕಾರಿ ಆಯುಕ್ತ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಜ.20ರಿಂದ ಬಿಯರ್ ಪರಿಷ್ಕೃತ ದರ ಜಾರಿ: ಹೊಸ ಬಿಯರ್ ನೀತಿ ಜೊತೆಗೆ ಸರ್ಕಾರ ಬಿಯರ್ ದರ ಏರಿಕೆ ಮಾಡಿದೆ. ಜ.20ರಿಂದ ಪರಿಷ್ಕೃತ ಬಿಯರ್ ದರ ಜಾರಿಯಾಗಲಿದೆ.‌ ಪ್ರತಿ ಬಿಯರ್‌ ಬಾಟಲಿಗೆ ಕನಿಷ್ಠ 10 ರಿಂದ 45 ರೂ.ಗಳವರೆಗೆ ಹೆಚ್ಚಾಗಲಿದೆ. ಅದರಲ್ಲಿನ ಅಲ್ಕೋಹಾಲ್‌ ಅಂಶದ ಮೇಲೆ ದರ ಹೆಚ್ಚಾಗಲಿದೆ. ಕಡಿಮೆ ಆಲ್ಕೋಹಾಲ್‌ ಅಂಶ ಇರುವ ಬಿಯರ್‌ಗಳ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಲಿದ್ದರೆ. ಸ್ಟ್ರಾಂಗ್‌ ಬಿಯರ್‌ಗಳ ಬೆಲೆ ದುಬಾರಿಯಾಗಲಿದೆ. ಈ ಸಂಬಂಧ ಆಗಸ್ಟ್​ನಲ್ಲೇ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆಕ್ಷೇಪಣೆ ಸ್ವೀಕರಿಸಿದ ಬಳಿಕ ಬಿಯರ್ ದರ ಪರಿಷ್ಕರಣೆಯ ಕಡತವನ್ನು ಸಿಎಂ ಸಹಿಗೆ ಕಳುಹಿಸಲಾಗಿತ್ತು.‌ ಇದೀಗ ಸಿಎಂ ಸಹಿ ಹಾಕಿದ್ದು, ಜ.20ರಿಂದ ದರ ಪರಿಷ್ಕರಣೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಅಲ್ಕೊಹಾಲ್ ಅಂಶ ಶೇ.5ರಷ್ಟು, ಅದಕ್ಕಿಂತ ಕಡಿಮೆ ಇರುವ ಬಿಯರ್​ಗೆ ಪ್ರತಿ ಬಲ್ಕ್ ಲೀಟರ್ 12 ರೂ, ಶೇ.5ಕ್ಕಿಂತ ಅಧಿಕ ಶೇ8ಕ್ಕಿಂತ ಕಡಿಮೆ ಇರುವ ಬಿಯರ್​ಗೆ ಪ್ರತಿ ಬಲ್ಕ್ ಲೀಟರ್​ಗೆ 20 ರೂ. ದರ ಪರಿಷ್ಕರಿಸಲಾಗಿದೆ. 300 ರೂ ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ದರ ಹೊಂದಿರುವ ಬಲ್ಕ್ ಲೀಟರ್ ಬಿಯರ್ ಮೇಲೆ ಶೇ.195 ಅಥವಾ 130 ರೂ ಹೆಚ್ಚುವರಿ ಸುಂಕ. ಇವುಗಳಲ್ಲಿ ಯಾವುದು ಅಧಿಕವೋ ಅದನ್ನು ವಿಧಿಸಲಾಗುತ್ತದೆ. ಅದೇ ರೀತಿ 40 ರೂ ಅದಕ್ಕಿಂತ ಹೆಚ್ಚಿನ ಘೋಷಿತ ಬೆಲೆ ಇರುವ ಪ್ರತಿ ಬಲ್ಕ್ ಲೀಟರ್ ಬಿಯರ್​ಗೆ ಶೇ.185ರಷ್ಟು ಅಥವಾ 120 ರೂ. ಹೆಚ್ಚುವರಿ ಸುಂಕ. ಇವುಗಳಲ್ಲಿ ಯಾವುದು ಅಧಿಕವೂ ಅದನ್ನು ವಿಧಿಸಲಾಗುತ್ತದೆ.

ಇದನ್ನೂ ಓದಿ: 17 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಫೆರಿಫೆರಲ್ ವರ್ತುಲ ರಸ್ತೆ ನಿರ್ಮಾಣದ ಸ್ಥಿತಿಗತಿ ಹೇಗಿದೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.