ETV Bharat / sports

ಶಾಕಿಂಗ್​ ನ್ಯೂಸ್!​ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ಧು: ಅಭಿಮಾನಿಗಳಿಗೆ ಭಾರೀ ನಿರಾಸೆ - INDIA VS PAKISTAN MATCH CANCELED

ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆಯಲಿರುವ ಪಂದ್ಯಾವಳಿ ರದ್ದಾಗಿದ್ದು ಅಭಿಮಾನಿಗಳಿಗೆ ಭಾರೀ ನಿರಾಸೆ ಎದುರಾಗಿದೆ.

KHO KHO WORLD CUP IN 2025  KHO KHO WORLD CUP  INDIA VS PAKISTAN KHO KHO WORLD CUP  ಖೋಖೋ ವಿಶ್ವಕಪ್ 2025
ಭಾರತ ಪಾಕಿಸ್ತಾನ ಪಂದ್ಯ ರದ್ಧು (IANS)
author img

By ETV Bharat Sports Team

Published : 10 hours ago

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯಾವುದೇ ಪಂದ್ಯಗಳು ನಡೆದರೂ ಉಭಯ ದೇಶಗಳ ಕ್ರೀಡಾಭಿಮಾನಿಗಳು ಕುತೂಹಲದಿಂದ ನೋಡುತ್ತಾರೆ. ಕ್ರಿಕೆಟ್​ ಆಗಿರಲಿ, ಹಾಕಿ ಇರಲಿ ಅಥವಾ ಯಾವುದೇ ಪಂದ್ಯಗಳಿರಲಿ ಭಾರತ-ಪಾಕ್​ ಮುಖಾಮುಖಿಯಾಗುತ್ತದೆ ಅಂದರೆ ಸಾಕು ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಆದ್ರೆ ಈ ಬಾರಿ ಉಭಯ ದೇಶಗಳ ಕ್ರೀಡಾಭಿಮಾನಿಗಳಿಗೆ ಭಾರೀ ನಿರಾಶೆಯಾಗಿದೆ. ಉಭಯ ತಂಡಗಳ ನುಡವಿನ ಪಂದ್ಯವೊಂದು ರದ್ದಾಗಿದೆ. ಯಾವುದು ಆ ಪಂದ್ಯ ಮತ್ತು ರದ್ಧತಿಗೆ ಕಾರಣ ಏನು ಎಂದು ಇದೀಗ ತಿಳಿಯಿರಿ.

ಜನವರಿ 13 ರಿಂದ ಭಾರತದಲ್ಲಿ ಚೊಚ್ಚಲ ಬಾರಿಗೆ ಖೋಖೋ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊದಲ ಪಂದ್ಯ ಏರ್ಪಡಿಸಲಾಗಿತ್ತು. ಆದರೆ ಪಾಕಿಸ್ತಾನ ತಂಡ ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ಉಭಯ ತಂಡಗಳ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಖೋಖೋ ಫೆಡರೇಷನ್ ಆಫ್ ಇಂಡಿಯಾ (ಕೆಕೆಎಫ್‌ಐ) ಪ್ರಕಟಣೆ ಹೊರಡಿಸಿದೆ.

ಕೆಕೆಎಫ್‌ಐ ನೀಡಿದ ಮಾಹಿತಿ ಪ್ರಕಾರ, ಖೋಖೋ ವಿಶ್ವಕಪ್ 2025ರ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನ ಭಾಗವಹಿಸುವುದಿಲ್ಲ ಎಂದು ಘೋಷಿಸಿತು. ವೇಳಾಪಟ್ಟಿಯ ಪ್ರಕಾರ ಜನವರಿ 13 ರಂದು ಭಾರತ-ಪಾಕಿಸ್ತಾನ ಮಧ್ಯೆ ಪಂದ್ಯಗಳು ನಡೆಯಬೇಕಿತ್ತು. ಆದರೆ ಪಾಕ್​ ತಂಡಕ್ಕೆ ವೀಸಾ ವಿಳಂಬವಾಗಿದ್ದರಿಂದ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಭಾರತವು ಮೊದಲ ಪಂದ್ಯದಲ್ಲಿ ಪಾಕ್​ ಬದಲಿಗೆ ನೇಪಾಳವನ್ನು ಎದುರಿಸಲಿದೆ ಎಂದು ಖೋಖೋ ಫೆಡರೇಷನ್ ಆಫ್ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದೆ. ಪಾಕ್​ ಭಾಗಿಯಾಗಲು ಸಾಧ್ಯವಾಗದ ಕಾರಣು ಖೋಖೋ ವಿಶ್ವಕಪ್‌ನಲ್ಲಿ 40 ತಂಡಗಳ ಬದಲಿಗೆ 39 ತಂಡಗಳು ಭಾಗವಹಿಲಿವೆ.

ಖೋಖೋ ವಿಶ್ವಕಪ್‌ನ ಮೊದಲ ಆವೃತ್ತಿಯಿಂದಲೇ ಪಾಕಿಸ್ತಾನ ಹಿಂದೆ ಸರಿದಿರುವುದು ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ ಎಂದು ಕ್ರೀಡಾ ವಿಶ್ಲೇಷಕರು ಹೇಳುತ್ತಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಹೋಗುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಮುಂದಾಗಿದೆ.

ಇದೀಗ ವೀಸಾ ಸಮಸ್ಯೆಯಿಂದಾಗಿ ಭಾರತದಲ್ಲಿ ನಡೆಯಲಿರುವ ಖೋಖೋ ವಿಶ್ವಕಪ್‌ಗೆ ಪಾಕಿಸ್ತಾನ ಬರಲು ಸಾಧ್ಯವಾಗುತ್ತಿಲ್ಲ. ಈ ಪಂದ್ಯಾವಳಿಗಳು ಜನವರಿ 13 ರಿಂದ 19 ರವರೆಗೆ ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಗೆ ಎಂಟ್ರಿ ಕೊಡಲಿರುವ ಡೇಂಜರಸ್​ ಪ್ಲೇಯರ್​ : ಟೀಂ ಇಂಡಿಯಾಗೆ ಆನೆಬಲ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.