ETV Bharat / sports

ಚಾಂಪಿಯನ್ಸ್​ ಟ್ರೋಫಿಗೆ ಎಂಟ್ರಿ ಕೊಡಲಿರುವ ಡೇಂಜರಸ್​ ಪ್ಲೇಯರ್​ : ಟೀಂ ಇಂಡಿಯಾಗೆ ಆನೆಬಲ! - ICC CHAMPIONS TROPHY 2025

ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್​ ಮೊಮ್ಮದ್​ ಶಮಿ ಚಾಂಪಿಯನ್ಸ್​ ಟ್ರೋಫಿ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

MOHAMMED SHAMI  ಮೊಹಮ್ಮದ್​ ಶಮಿ  SHAMI CHAMPIONS TROPHY  ENGLAND SERIES
Team India Players (IANS)
author img

By ETV Bharat Sports Team

Published : 10 hours ago

ಹೈದರಾಬಾದ್​: ಮುಂದಿನ ತಿಂಗಳು ಅಂದರೆ ಫೆಬ್ರವರಿ 19 ರಿಂದ ಐಸಿಸಿ ಚಾಂಪಿಯನ್​ ಟ್ರೋಫಿ ಪ್ರಾರಂಭವಾಗಲಿದೆ. ಈಗಿನಿಂದಲೇ ಎಲ್ಲಾ ತಂಡಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಅದರಲ್ಲೂ ಭಾರತ ಮತ್ತೊಮ್ಮೆ ಚಾಂಪಿಯನ್ಸ್​ ಟ್ರೋಫಿ ಎತ್ತಿಹಿಡಿಯಲು ಯೋಜನೆ ರೂಪಿಸುತ್ತಿದೆ.

ಏತನ್ಮಧ್ಯೆ, ಟೀಂ ಇಂಡಿಯಾ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಸ್ಟಾರ್​​ ಪ್ಲೇಯರ್​ ಚಾಂಪಿಯನ್​ ಟ್ರೋಫಿಗೆ ಆಡಲಿದ್ದಾರೆ ಎಂದು ವರದಿಯಾಗಿದೆ. ಹೌದು, ಟೀಂ ಇಂಡಿಯಾದ ವೇಗದ ಬೌಲರ್​ ಮೊಹಮ್ಮದ್​ ಶಮಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಆಡಲಿದ್ದಾರೆ ಎಂದು ವರದಿಯಾಗಿದೆ.

ಒಂದು ವರ್ಷ ಕ್ರಿಕೆಟ್​ನಿಂದ ದೂರ : ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದು ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. 2023ರ ODI ವಿಶ್ವಕಪ್‌ನಲ್ಲಿ ಕೊನೆಯದಾಗಿ ಅವರು ಆಡಿದ್ದರು. ಪಾದದ ಗಾಯದಿಂದಾಗಿ ವಿಶ್ವಕಪ್​ ಬಳಿಕ ಲಂಡನ್‌ಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಸಿಕೊಂಡಿರುವ ಶಮಿ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ.

ಏತನ್ಮಧ್ಯೆ, ಶಮಿ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ವೈದ್ಯಕೀಯ ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ. NCA ಫಿಸಿಯೋ ತರಬೇತುದಾರರು ಶಮಿಯೊಂದಿಗೆ ಇದ್ದಾರೆ. ಜನವರಿ 12 ರಂದು ಆಯ್ಕೆ ಸಮಿತಿ ಸಭೆ ಸೇರಲಿದ್ದು, ಇದರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ತಂಡವನ್ನು ಆಯ್ಕೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಭಾರತ ಜ. 22 ರಿಂದ ಫೆಬ್ರವರಿ 2ರ ವರೆಗೆ ಇಂಗ್ಲೆಂಡ್ ವಿರುದ್ಧ 5 ಟಿ20, 3 ಏಕದಿನ ಪಂದ್ಯಗಳನ್ನು ಆಡಲಿದೆ.

ಜ.12ಕ್ಕೆ ಆಯ್ಕೆ ಸಮಿತಿ ಸಭೆ

ಶಮಿ ದಾಖಲೆ : ಶಮಿ ಈವರೆಗೆ 64 ಟೆಸ್ಟ್​, 101 ಏಕದಿನ, 23 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಟೆಸ್ಟ್​ ನಲ್ಲಿ 229 ವಿಕೆಟ್​, ಏಕದಿನದಲ್ಲಿ 195, ಟಿ20ಯಲ್ಲಿ 24 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ 110 ಐಪಿಎಲ್​ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಶಮಿ 127 ವಿಕೆಟ್​ ಉರುಳಿಸಿದ್ದಾರೆ. 11 ರನ್​ಗಳಿಗೆ 4 ವಿಕೆಟ್​ ಪಡೆದಿರುವುದು ಅವರ ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

ಇದನ್ನೂ ಓದಿ: ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪಾಕಿಸ್ತಾನ: ಐಸಿಸಿ ಚಾಂಪಿಯನ್ಸ್​ ಟ್ರೋಫಿ ಸ್ಥಳಾಂತರ ಸಾಧ್ಯತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.